ರಾಮಾಯಣ, ಮಹಾಭಾರತ, ಹ್ಯಾರಿ ಪಾಟರ್, ಒಂದು ಒಳ್ಳೆ ಕಥೆ ಜೀವನ ಪರ್ಯಂತ ನಮ್ಮೊಂದಿಗೆ ಇರುತ್ತದೆ. ಈ ಕಥೆಗಳು ನಮ್ಮ ಜೀವನದ ದೃಷ್ಟಿಕೋನವನ್ನೇ ಬದಲಾಯಿಸುತ್ತದೆ. ಆದರೆ, ಈ ಕಥೆಗಳು, ನಿರೂಪಣೆಗಳು, ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಯಾವ ಪ್ರಭಾವ ಬೀರುತ್ತೆ? ಈ ಸಂಚಿಕೆಯಲ್ಲಿ ಪವನ್ ಶ್ರೀನಾಥ್ ರವರು ಗಣೇಶ್ ಚಕ್ರವರ್ತಿ ರವರ ಜೊತೆ ನಿರೂಪಣೆಗಳು ಮತ್ತು ಕಥೆಗಳ ಪ್ರಾಮುಖ್ಯತೆಯ ಬಗ್ಗೆ ಚರ್ಚೆ ಮಾಡುತ್ತಾರೆ. A great story - be it the Mahabharata or Harry Potter, often stays with you for a lifetime and shapes how you see the world. But how are stories and narratives relevant to...
Jul 25, 2019•1 hr 4 min•Season 1Ep. 30
ಇನ್ನೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿನ ಜೀವನ, ಸಮಾಜ ಮತ್ತು ಆರ್ಥಿಕ ವ್ಯವಸ್ಥೆ ಹೇಗಿತ್ತು? ಬ್ರಿಟೀಷರ ಆಳ್ವಿಕೆಗಿಂತ ಮುಂಚೆ ರಾಜ್ಯಭಾರ ಹೇಗೆ ನಡೆಯುತ್ತಿತ್ತು. ಟಿಪ್ಪು ಸುಲ್ತಾನಿನ ಸೋಲಿನ ನಂತರ ಈಸ್ಟ್ ಇಂಡಿಯಾ ಕಂಪನಿಯ ಕೋರಿಕೆ ಮೇಲೆ ಜಾನ್ ಬ್ಯುಖಾನನ್ ರವರು ಮೈಸೂರು ದೇಶವನ್ನು ಸಂಚಾರ ಮಾಡಿದರು. ಸುಮಾರು 4,000 ಕಿಲೋಮೀಟರು ಮತ್ತು ನೂರಾರು ಸ್ಥಳಗಳ ಪ್ರವಾಸ ಮಾಡಿ 1807ರಲ್ಲಿ ಪ್ರವಾಸಕಥನವನ್ನು ಪ್ರಕಟಿಸಿದರು. ಈ ಪ್ರವಾಸದ ಬಗ್ಗೆ ಲಿಂಗರಾಜ್ ಜಯಪ್ರಕಾಶ್ ರವರ ಜೊತೆ ಪವನ್ ಶ್ರೀನಾಥ್ ಮಾತನಾಡುತ್ತಾರೆ. ಲಿಂಗರಾಜ್ ಮ್ಯಾಕ್ ಗಿಲ್ ವಿಶ್ವವಿದ್ಯಾಲಯದ ಸಸ್ಟೇನಬಲ್ ಫ್ಯೂಚರ್ ಲ್ಯಾಬ್ ನಲ್ಲಿ ಪರಿಸರ ಮತ್ತು ಅಭಿವೃದ್ಧಿ ...
Jul 18, 2019•1 hr 33 min•Season 1Ep. 29
As we have seen an acute water shortage in Chennai and struggles in other cities too, we are rebroadcasting this episode where S.Vishwanath talks about how a city like Bengaluru can ensure safe and sufficient water for all. ಬೆಂಗಳೂರು ಇನ್ನೇನು ತನ್ನ ನೀರಿನ ಮೂಲಗಳು ಬರಿದಾಗಿ ಜಲಕ್ಷಾಮವನ್ನು ಎದುರಿಸಲಿದೆಯೆಂದು ಆಗಾಗ ಕೇಳುತ್ತಿರುತ್ತೇವೆ. ಬಿ.ಬಿ.ಸಿ. ಯಿಂದ ಹಿಡಿದು, ನೀತಿ ಆಯೋಗ ಮತ್ತು ಹಲವಾರು ನಗರದ ಬಗೆಗಿನ ತಜ್ಞರ ವರೆಗೆ ಇದು 2020, 2025 ಅಥವಾ 2030 ರಲ್ಲಿ ಸಂಭವಿಸಬಹುದು. ಈ ನಿಲುವಿನಲ್ಲಿ ಎಷ್ಟು ನಿಜಾಂಶವಿದೆ? ನೀರು ವಿರಳವಿರಬಹುದು ಆದರೆ ನಮ್ಮ ಮುಂದಿರು...
Jul 11, 2019•57 min•Season 1Ep. 13
ಜನಸಾಮಾನ್ಯರು ಸಾರ್ವಜನಿಕ ನೀತಿ ಜೊತೆಗೆ ಹೇಗೆ ತೊಡಗಿಸಿಕೊಳ್ಳಬಹುದು? ಸಾರ್ವಜನಿಕ ಹಿತಾಸಕ್ತಿ ಎಂದರೆ ಏನು? ಸರ್ಕಾರದ ಅಧಿಕಾರಿಗಳು ಅವರ ಮುಂದಿರುವ ನೀತಿಗಳನ್ನು ಹೇಗೆ ಆಯ್ಕೆ ಮಾಡುತ್ತಾರೆ. ಅಶ್ವಿನ್ ಮಹೇಶ್ ರವರು ತಮ್ಮ 15 ವರ್ಷದ ಸುದೀರ್ಘ ಸಾರ್ವಜನಿಕ ಬದುಕಿನಿಂದ ಆಯ್ದ ಕಲಿಕೆಗಳು ಮತ್ತು ಸ್ವಾರಸ್ಯಕರ ಸನ್ನಿವೇಶಗಳನ್ನು ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನ 28ನೇ ಕಂತಿನಲ್ಲಿ ಹಂಚಿಕೊಳ್ಳುತ್ತಾರೆ. ಅಶ್ವಿನ್ ರವರು ಹವಾಮಾನ ವಿಜ್ಞಾನಿ ಯಾಗಿದ್ದವರು ಸಾರ್ವಜನಿಕ ವಲಯಕ್ಕೆ ಹಲವು ಪಾತ್ರಗಳಲ್ಲಿ ಕೊಡುಗೆ ನೀಡಿದ್ದಾರೆ. ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿನ ಹಲವು ಸುಧಾರಣೆ ಮತ್ತು ಹೊಸ ಪ್ರಯೋಗಗಳ ಹಿಂದೆ ಇವರ ಕೈವಾಡವಿದೆ....
Jul 04, 2019•1 hr 17 min•Season 1Ep. 28
ಭಾಷೆ ಮತ್ತು ರಾಷ್ಟ್ರೀಯತೆಯ ನಡುವಿನ ಸಂಬಂಧವೇನು? ಯೂರೋಪಿನ ರಾಷ್ಟ್ರೀಯತೆ ಭಾರತೀಯ ರಾಷ್ಟ್ರೀಯತೆಗಿಂತ ಹೇಗೆ ಭಿನ್ನವಾಗಿದೆ? ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನ 27ನೇ ಕಂತಿನಲ್ಲಿ, ಡಾ| ಎ.ಪಿ. ಅಶ್ವಿನ್ ಕುಮಾರ್ ಅವರು ಪವನ್ ಶ್ರೀನಾಥ್ ಅವರ ಜೊತೆ ರಾಷ್ಟ್ರೀಯತೆ ಬಗ್ಗೆ ಮಾತನಾಡುತ್ತಾರೆ. ಅಶ್ವಿನ್ ಕುಮಾರ್ ಅವರು ಅಹ್ಮದಾಬಾದ್ ವಿಶ್ವವಿದ್ಯಾಲಯದಲ್ಲಿ ಸೀನಿಯರ್ ಫೆಲೋ ಆಗಿ ಕೆಲಸ ಮಾಡುತ್ತಾರೆ. We are living in the times of rising nationalism across the world today. But what is nationalism, at its core? How did nationalism really evolve in Europe? How is European Nationa...
Jun 27, 2019•1 hr 17 min•Season 1Ep. 27
ಚೌಕಾಬಾರ, ಅಲುಗುಳಿಮನೆ, ಪಗಡೆ, ಇಂತಹ ಹಲವಾರು ಆಟಗಳು ನಮ್ಮ ದೇಶದಲ್ಲಿ ಹುಟ್ಟಿ ಬೆಳೆದಿವೆ. ಆದರೆ, ಈಚೀನ ದಿನಗಳಲ್ಲಿ ಡಿಜಿಟಲ್ ಆಟಗಳ ಮಧ್ಯೆ ಇವೆಲ್ಲ ಮರೆಯಾಗುತ್ತಿವೆ. ಹಲವು ತಲೆಮಾರುಗಳಿಂದ ಬಂದ ಈ ಆಟಗಳಿಗೆ ಪುನರ್ಜನ್ಮ ನೀಡಿರುವವರಲ್ಲಿ ಒಬ್ಬರು ಶ್ರೀರಂಜಿನಿ ಅವರು. ಶ್ರೀರಂಜಿನಿ ಅವರು 'ಕವಡೆ' ಎಂಬ ಒಂದು ಸಂಸ್ಥೆಯನ್ನು ನಡೆಸುತ್ತಾರೆ. ಈ ಪ್ರಯತನದ ಮೂಲಕ ಇವರು ಸುಮಾರು ಹಳೆಯ ಕಾಲದ ಆಟಗಳನ್ನು ಮತ್ತೆ ಚಾಲ್ತಿಗೆ ತಂದಿದ್ದಾರೆ. ನಮ್ಮ ತಲೆ-ಹರಟೆ ಪಾಡ್ಕಾಸ್ತಿನ 26ನೆ ಎಪಿಸೋಡಿನಲ್ಲಿ ಇವರ ಈ ಪಯಣದ ಹಾಗೂ ಪ್ರಯತ್ನದ ಬಗ್ಗೆ, ಗಣೇಶ್ ಚಕ್ರವರ್ತಿ ಹಾಗೂ ತಕ್ಷಶಿಲಾ ಸಂಸ್ಥೆಯ ಸೌಮ್ಯ ನಂದನ್ ಅವರ ಜೊತೆ ಮಾತನಾಡುತ್ತಾರೆ. ht...
Jun 20, 2019•46 min•Season 1Ep. 26
ಜಿ.ಡಿ.ಪಿ. (ಒಟ್ಟು ದೇಶೀಯ ಉತ್ಪಾದನೆ) ಬಹುಶಃ ದೇಶದ ಆರ್ಥಿಕ ಸ್ಥಿತಿ ಗತಿ ಯನ್ನು ವಿವರಿಸುವ ಅತ್ಯಂತ ಮೌಲ್ಯಯುತ ಅಳತೆಗೋಲು. ಭಾರತದ ಜಿ.ಡಿ.ಪಿ.ಯನ್ನು ಅಳೆಯುವ ವಿಧಾನವು ಸಂಶಯ ಮತ್ತು ವಿವಾದಗಳಲ್ಲಿ ಸಿಲುಕಿಕೊಂಡಿರುವಹಾಗಿದೆ. ಆದರೆ ನಾವು ಮೊದಲು ಜಿ.ಡಿ.ಪಿ. ಎಂದರೆ ಏನು ಮತ್ತು ಅದರ ಮಹತ್ತ್ವವನ್ನು ಅರಿಯಬೇಕು. ಅನುಪಮ್ ಮನೂರ್ ರವರು, ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಯವರ ಜೊತೆ ತಲೆ-ಹರಟೆ ಪಾಡ್ಕಾಸ್ತಿನ 25 ನೇ ಕಂತಿನಲ್ಲಿ ಜಿ.ಡಿ.ಪಿ.ಯ ಪರಿಕಲ್ಪನೆಯನ್ನು ಸುಲಭವಾಗಿ ತಿಳಿಯುವಂತೆ ವಿವರಿಸುತ್ತಾರೆ. ಅನುಪಮ್ ರವರು ತಕ್ಷಶಿಲಾ ಸಂಸ್ಥೆ ಯಲ್ಲಿನ ಅರ್ಥಶಾಸ್ತ್ರಜ್ಞರು. ಇಂಗ್ಲೆಂಡಿನ ಲಾಂಕಾಸ್ಟರ್ ವಿಶ್ವವಿದ್ಯ...
Jun 13, 2019•1 hr 6 min•Season 1Ep. 25
ರಾಷ್ಟ್ರೀಯ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಏನ್.ಡಿ.ಎ. ಸರ್ಕಾರ ಮತ್ತೆ ಆಡಳಿತಕ್ಕೆ ಬಂದಿದೆ. ನಮ್ಮ ತಲೆ ಹರಟೆ ಪೋಡ್ಕಾಸ್ಟಿನ ೨೪ ನೇ ಸಂಚಿಕೆಯಲ್ಲಿ ಅಲೋಕ್ ಪ್ರಸನ್ನ ಕುಮಾರ್ ಅವರು ಮತ್ತು ಸರಯೂ ನಟರಾಜನ್ ಅವರು ನಮ್ಮೊಡನೆ ಚುನಾವಣೆಯ ಫಲಿತಾಂಶದ ಬಗ್ಗೆ ಚರ್ಚೆ ಮಾಡುತ್ತಾರೆ. ಡಾ| ಸರಯೂ ನಟರಾಜನ್ ಅವರು ರಾಜಕೀಯ ವಿಜ್ಞಾನ ಚಿಂತಕರಾಗಿ ಆಪ್ಟಿ ಇನ್ಸ್ಟಿಟ್ಯೂಟ್ ಎಂಬ ಸಂಸ್ಥೆಯ ಸ್ಥಾಪಕರಾಗಿದ್ದರೆ. ಅಲೋಕ್ ಅವರು ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿದ್ದು, ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಸಂಸ್ಥೆಯ ಬೆಂಗಳೂರು ವಿಭಾಗವನ್ನು ನಡೆಸುತ್ತಾರೆ. ಇವರಿಬ್ಬರು ತಮ್ಮದೇ ಆದ ಗಣತಂತ್ರ ಪಾಡ್ಕಾಸ್ಟ್ ಎಂಬ ಪೋಡ್ಕಾ...
Jun 06, 2019•57 min•Season 1Ep. 24
ನಗರ, ರಾಜ್ಯ ಮತ್ತು ದೇಶದ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಸಿಗುತ್ತವೆ. ಆದರೆ ಹಳ್ಳಿಗಳ ಬಗ್ಗೆ ಬರಗಾಲ ಬಂದಾಗ ಮಾತ್ರ ನಮ್ಮ ಗಮನ ಹರಿಯುತ್ತದೆ. ಭಾರತದಲ್ಲಿನ ಹಳ್ಳಿಗಳ ಆಡಳಿತ ಹೇಗೆ ನಡೆಯುತ್ತಿವೆ? ಪ್ರಜಾಪ್ರಭುತ್ವ ನಮ್ಮ ಹಳ್ಳಿಗಳಲ್ಲಿ ಎಷ್ಟರಮಟ್ಟಕ್ಕೆ ಆಚರಣೆಯಲ್ಲಿದೆ? ನಮ್ಮ ತಲೆಹರಟೆ ಪೋಡ್ಕಾಸ್ಟಿನ 23ನೆ ಎಪಿಸೋಡಿನಲ್ಲಿ, ನಮ್ಮೊಡನೆ ವಿಜಯೇಂದ್ರ ರಾವ್ ಅವರು, ನಮ್ಮ ಹಳ್ಳಿಗಳ ಸಾಧನೆಗಳು, ಆಡಳಿತ, ಮತ್ತು ಯಶಸ್ಸಿನ ಬಗ್ಗೆ ಚರ್ಚೆ ಮಾಡುತ್ತಾರೆ. ವಿಜಯೇಂದ್ರ ರಾವ್ ಅವರು ವರ್ಲ್ಡ್ ಬ್ಯಾಂಕ್ನಲ್ಲಿ, ಡೆವಲಪ್ಮೆಂಟ್ ರಿಸರ್ಚ್ ಗ್ರೂಪ್ನಲ್ಲಿ, ಲೀಡ್ ಎಕನಾಮಿಸ್ಟ್ (ಅರ್ಥಶಾಸ್ತ್ರಜ್ಞ) ಆಗಿದ್ದಾರೆ. ಸುಮಾರು 20 ವರ್ಷಗಳಿಂದ ...
May 29, 2019•59 min•Season 1Ep. 23
It's the week of election results in India, and the Thale-Harate Kannada Podcast is taking a break this week to watch the results alongside the rest of you. Every time we have national elections in India, it's seen as the biggest exercise of democracy in the world. But democracy also needs to exist at all levels, starting from our villages. Expect two episodes from us next week, where we talk about gram sabhas, panchayati raj and a lot more. ಫಾಲೋ ಮಾಡಿ. Follow the Thalé-Haraté Kannada Podcast @ha...
May 22, 2019•53 sec
ಚಲನಚಿತ್ರಗಳಿಲ್ಲದೆ ನಮ್ಮ ಜೀವನವನ್ನು ಕಲ್ಪಿಸುಕೊಳ್ಳುವುದೇ ಕಷ್ಟ. ಆದರೆ ಒಂದು ಚಲನಚಿತ್ರವನ್ನು ನಿರ್ಮಿಸುವುದು ಅದಕ್ಕಿಂತಲೂ ಕಠಿಣ. ಸಿನಿಮಾವೊಂದನ್ನು ನಿರ್ಮಿಸುವದರಲ್ಲಿ ಯಾವ ತೊಡಕುಗಳು, ಸವಾಲುಗಳು ಬರುತ್ತವೆ? ಈ ವಾರದ ಸಂಚಿಕೆಯಲ್ಲಿ ಹೇಮಂತ್ ರಾವ್ ಅವರು ನಮ್ಮೊಡನೆ ಅವರ ಪ್ರಖ್ಯಾತವಾದ ಎರಡು ಚಲನಚಿತ್ರಗಳು, ಗೋದಿ ಬಣ್ಣ ಸಾಧಾರಣ ಮೈಕಟ್ಟು ಮತ್ತು ಕಾವಲುದಾರಿ ಸಿನೆಮಾಗಳ ಬಗ್ಗೆ ಮಾತನಾಡುತ್ತಾರೆ. ಜೊತೆಗೆ ಅವರು ಸಿನಿಮಾ ಪ್ರಪಂಚಕ್ಕೆ ಬಂದ ರೀತಿ, ಚಿತ್ರಕಥೆ ಬರೆಯುವ ಅನುಭವ, ಮತ್ತು ಕನ್ನಡ ಸಿನಿಮಾ ರಂಗದ ಬಗ್ಗೆ ಮಾತನಾಡುತ್ತಾರೆ. ಬನ್ನಿ ಕೇಳಿ. Imagine a world without films. Sounds almost impossible,...
May 15, 2019•56 min•Season 1Ep. 22
ಭಾರತದಲ್ಲಿ ಒಂದು ಪ್ರಾಧ್ಯಾಪಕರ ಜೇವನ ಹೇಗಿರುತ್ತೆ? ಅದೂ ಭಾರತದಲ್ಲಿಯೇ ಪ್ರಖ್ಯಾತವಾದಂತಹ ಸಂಶೋಧನಾ ಸಂಸ್ಥೆಯಲ್ಲಿ? ನಮ್ಮ ದೇಶದ ಪ್ರಗತಿಗೆ ಅನೇಕ ರೆಟಿಯ ಸಂಶೋಧನೆಯ ಅಗತ್ಯವಿದೆ ಆದರೆ ಇದನ್ನು ಸಾಧಿಸಲು ಬೇಕಾದಂತಹ ನಾಡಿನ ಆರ್ಥಿಕ, ಮತ್ತು ಪಾಂಡಿತ್ಯದ ಸ್ಥಿತಿಗಳು ಏನು? ನಮ್ಮ ತಲೆ-ಹರಟೆ ಪಾಡ್ಕಾಸ್ತಿನ 21ನೆ ಎಪಿಸೋಡಿನಲ್ಲಿ ವಿಶ್ವೇಶ ಗುಟ್ಟಲ್ ಅವರು ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ, ಐ.ಐ.ಎಸ್.ಸೀ ಸಂಸ್ಥೆಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುವ ಬಗ್ಗೆ, ಭಾರತದಲ್ಲಿ ಸಂಶೋಧನೆಯ ಬಗ್ಗೆ, ವಿವರವಾಗಿ ಚರ್ಚಿಸುತ್ತಾರೆ. ವಿಶ್ವೇಶ ಗುಟ್ಟಲ್ ಅವರು ಭೌತಶಾಸ್ತ್ರದಲ್ಲಿ ಪಿ.ಎಚ್.ಡಿ. ಪಡೆದ...
May 08, 2019•1 hr 24 min•Season 1Ep. 21
ಮಕ್ಕಳ ಆಹಾರ, ಪೌಷ್ಟಿಕತೆ, ಮತ್ತು ವಿದ್ಯಾಭ್ಯಾಸದ ಬಗ್ಗೆ ಒಂದು ಸಮಗ್ರತಾ ದೃಷ್ಟಿಯಲ್ಲಿ ಹೇಗೆ ನೋಡಬಹುದು? ನಮ್ಮ ತಲೆ-ಹರಟೆ ಪೋಡ್ಕಾಸ್ಟಿನ 20ನೆ ಎಪಿಸೋಡಿನಲ್ಲಿ, ಲಲಿತ ಪುಲವರ್ತಿಯವರು ಪವನ್ ಶ್ರೀನಾಥ್ ಅವರ ಜೊತೆ, 47ಕೋಟಿಗೆ ಹೆಚ್ಚು ಮಕ್ಕಳ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಲಲಿತ ಪುಲವರ್ತಿ ಅವರು ಸೋಷಿಯೋಲೋಜಿಯಲ್ಲಿ ಪಿ.ಎಚ್.ಡಿ. ಮಾಡಿ, ಅನೇಕ ಆಡಳಿತ ಮತ್ತು ಸಾರ್ವಜನಿಕ ಕಾರ್ಯನೀತಿಯ ವಿಷಯಗಳ ಮೇಲೆ ಕೆಲಸ ಮಾಡಿದ್ದಾರೆ. ಇವರು, ಬೆಂಗಳೂರಿನಲ್ಲಿ ಪಬ್ಲಿಕ್ ಅಫ್ಫೇರ್ಸ್ ಫೌಂಡೇಶನ್ ಜೊತೆ ಕೆಲಸ ಮಾಡಿ, 2018ನೆ ಪಬ್ಲಿಕ್ ಅಫ್ಫೇರ್ಸ್ ಇಂದೆಕ್ಸಿನಲ್ಲಿ ಮಕ್ಕಳ ಪರಿಸ್ಥಿತಿಯ ಮೇಲೆ ಒಂದು ಅಧ್ಯಾಯವನ್ನು ಬರೆದಿದ್ದಾರೆ: ...
Apr 25, 2019•1 hr 10 min•Season 1Ep. 20
ಚುನಾವಣೆ ಅನ್ನೋದು ನಮ್ಮ ದೇಶದಲ್ಲಿ ಒಂದು ದೊಡ್ಡ ಹಬ್ಬಕ್ಕಿಂತ ಕಮ್ಮಿ ಏನೂ ಅಲ್ಲ. ಆದರೆ ನಗರಗಳಲ್ಲಿ ಮತದಾನ ಮಾಡಲು ಏಕೆ ಅಷ್ಟು ಕಡಿಮೆ ಜನರು ಬರುತ್ತಾರೆ? ಈ ವರ್ಷ ಏನಾದರೂ ಬದಲಾವಣೆ ಕಾಣಬಹುದೆ? ರಾಘವೇಂದ್ರ ಎಚ್. ಎಸ್. ಈ ಚುನಾವಣೆ ಸ್ಪೆಷಲ್ ಎಪಿಸೋಡಿನಲ್ಲಿ ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಜೊತೆ ಚುನಾವಣೆಯ ಹಿಂದೆ-ಮುಂದೆ, ಒಳಗೆ-ಹೊರಗೆ ನಡೆಯುವ ಕಾರ್ಯಗಳು, ಕೆಲಸಗಳು, ಕುತಂತ್ರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ರಾಘವೇಂದ್ರ ಅವರು ಒಬ್ಬ ಜರ್ನಲಿಸ್ಟ್ ಮತ್ತೆ ಬಿ.ಪ್ಯಾಕ್ ಸಂಸ್ಥೆಯಲ್ಲಿ ಬಿ.ಕ್ಲಿಪ್ ಕಾರ್ಯಕ್ರಮವನ್ನು ನಡೆಸುತ್ತಾರೆ. ಈ ಕಾರ್ಯಕ್ರಮದಲ್ಲಿ ಆಡಳಿತದ ಬಗ್ಗೆ, ರಾಜಕೀಯದ ಬಗ್ಗೆ, ನಗರಾಭಿವೃದ್ದಿಯ...
Apr 15, 2019•1 hr 18 min•Season 1Ep. 19
ಮತದಾನದ ಮಹತ್ವ ಏನು? ನಿಮ್ಮ ಒಂದು ಮತಕ್ಕೂ ಮೌಲ್ಯವಿದೆಯೇ? ಅಥವಾ ಕೆಲವು ಜನರ ಮತವು ಮತ್ತೆಲ್ಲರ ಮತಕ್ಕಿಂತ ಹೆಚ್ಚು ಮೌಲ್ಯಯುತವಾದದ್ದೆ? ಕಾರ್ತಿಕ್ ಶಶಿಧರ್ರವರು ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 18ನೆ ಎಪಿಸೋಡಿನಲ್ಲಿ ಚುನಾವಣೆ ಮತ್ತು ಅಭಿಪ್ರಾಯ ಸಮೀಕ್ಷೆಗಳ ಮೂಲಕ ಚುನಾವಣೆಗಳ ಫಲಿತಾಂಶವನ್ನು ಊಹಿಸುವುದರ ಬಗ್ಗೆ ಚರ್ಚೆ ಮಾಡುತ್ತಾರೆ. ಕಾರ್ತಿಕ್ ಶಶಿಧರ್ ಅವರು ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಮತ್ತೆ ಡೇಟಾ ಸೈಂಟಿಸ್ಟು. ಇವರು ಭಾರತದ ಚುನಾವಣೆಗಳ ಮೇಲೆ ಹಾಗೂ ಅಭಿಪ್ರಾಯ ಸಮೀಕ್ಷೆಗಳ ಮೇಲೆ ಹಲವಾರು ವರ್ಷಗಳು ಕೆಲಸ ಮಾಡಿದ್ದಾರೆ ಮತ್ತು ಅಂಕಣಗಳನ್ನು ಬರೆದಿದ...
Apr 10, 2019•47 min•Season 1Ep. 18
ಎಂ.ಪಿ. ಮತ್ತು ಎಂ.ಎಲ್.ಎ.ಗಳು ಶಾಸಕಾಂಗದಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಲು ಏನು ಮಾಡಬೇಕು? ದೇಣಿಗೆ ನೀಡುವ ಸಂಸ್ಥೆಗಳು ಮತ್ತು ಸಾಮಾಜಿಕ ಪರಿಣಾಮಗಳನ್ನು ತರಲು ಹೊರಟಿರುವ ಹೂಡಿಕೆ ಸಂಸ್ಥೆಗಳು ಹೇಗೆ ಬದಲಾವಣೆಯನ್ನು ತರಬಹುದು? ಬನ್ನಿ ಕೇಳಿ! ಸಿ. ವಿ. ಮಧುಕರ್ ರವರು ಒಮಿಡ್ಯಾರ್ ನೆಟ್ವರ್ಕ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಪಿ.ಆರ್.ಎಸ್. ಲೆಜಿಸ್ಲೇಟಿವ್ ರೀಸರ್ಚ್ ಸಂಸ್ಥೆಯ ಸಂಸ್ಥಾಪಕ-ನಿರ್ದೇಶಕರಾಗಿದ್ದರು. ಅದಕ್ಕೂ ಮುಂಚೆ ಅವರು ವಿಶ್ವ ಬ್ಯಾಂಕ್ ನ ವಾಷಿಂಗ್ಟನ್ ಕಚೇರಿಯಲ್ಲಿ ಕೆಲಸಮಾಡುತ್ತಿದ್ದರು. ಅವರ ಬಗ್ಗೆ ಮತ್ತಷ್ಟು ವಿವರಗಳಿಗೆ ಇಲ್ಲಿ ನೋಡಿ. ಅವರು ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ಇನ...
Apr 03, 2019•55 min•Season 1Ep. 17
'ರೂಲ್ ಆಫ್ ಲಾ' ಎಂದರೆ ಏನು? ಜನಸಾಮಾನ್ಯರಿಗೆ ಅದು ಹೇಗೆ ಪ್ರಸ್ತುತ? ನಮ್ಮ ಕೋರ್ಟುಗಳು ಸಮಾಧಾನಕರವಾಗಿ ಕಾರ್ಯ ನಿರ್ವಹಿಸುತ್ತಿವೆಯೇ? ನಮ್ಮ ದೇಶದ ನ್ಯಾಯಾಂಗವ್ಯವಸ್ಥೆ ಮತ್ತು ಅದರ ಸುಧಾರಣೆಗಳ ಬಗೆಗಿನ ಮೊದಲನೇ ಕಂತನ್ನು ಬನ್ನಿ ಕೇಳಿ. 'ರೂಲ್ ಆಫ್ ಲಾ' ನಮ್ಮ ನಿಮ್ಮೆಲ್ಲರ ದೈನಂದಿನ ಜೀವನವನ್ನು ಹಲವು ವಿಧದಲ್ಲಿ ಪ್ರಭಾವಿಸುತ್ತದೆ. ಇದು ಬರಿ ವಕೀಲರು ಮತ್ತು ನ್ಯಾಯಾಧೀಶರುಗಳ ಮಾತ್ರ ಮೀಸಲಾದ ವಿಷಯವಲ್ಲ. 'ರೂಲ್ ಆಫ್ ಲಾ' ವನ್ನು ಎತ್ತಿ ಹಿಡಿಯುವಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುವ ನ್ಯಾಯಾಂಗದ ಪಾತ್ರ ಮಹತ್ತರವಾದದ್ದು. ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಮೊರೆ ಹೋದವರು ಪಡುವ ಪಾಡು ಎಲ್ಲರಿಗೂ ಗೊತ್ತಿದೆ. ಈ ಕಂತಿನಲ...
Mar 27, 2019•49 min•Season 1Ep. 16
ಬೆಂಗಳೂರಿನಲ್ಲಿ ಜನರು ಎಷ್ಟು ಶತಮಾನಗಳಿಂದ ವಾಸವಾಗಿದ್ದಾರೆ? ನಮ್ಮೂರಿನ ರಾಜಾಜಿನಗರ, ಇಂದಿರಾನಗರ, ಹೆಬ್ಬಾಳ, ಎಷ್ಟು ಹಳೆಯವು? ಉದಯ ಕುಮಾರ್ ಅವರು 'ಇನ್ಸ್ಕ್ರಿಪ್ಷನ್ ಸ್ಟೋನ್ಸ್ ಆಫ್ ಬೆಂಗಳೂರು' ಎಂಬ ಗುಂಪಿನ ಮೂಲಕ ಬೆಂಗಳೂರಿನ ದೀರ್ಘ ಇತಿಹಾಸದ ರಕ್ಷಣೆ ಮಾಡುವುದರಲ್ಲಿ ಹಾಗು ಅದನ್ನು ಪುನರುಜ್ಜೀವಗೊಳಿಸುವುದರಲ್ಲಿ ತೊಡಗಿದ್ದಾರೆ. ಇವರು ಶಿಲಾಶಾಸನಗಳು ಮತ್ತು ವೀರಗಲ್ಲುಗಳ ಮುಖಾಂತರ, ಇತಿಹಾಸದಲ್ಲಿ ಕಳೆದುಹೋದ ಹಲವಾರು ಕಥೆಗಳು, ಘಟನೆಗಳು, ಮತ್ತು ವ್ಯಕ್ತಿಗಳ ವಿವರಗಳನ್ನು ಹೆಕ್ಕಿ ತೆಗೆದಿದ್ದಾರೆ. ಇವರ ಅತಿ ಮಹತ್ವಪೂರ್ವ ಅನ್ವೇಷಣೆ ಬೆಂಗಳೂರಿನ ಹೆಬ್ಬಾಳ ಪ್ರದೇಶದ ಒಂದು ಕೋಣೆಯಲ್ಲಿ ದೊರಕಿತು. ಈ ವೀರಗಲ್ಲುಗಳು, ಶ...
Mar 20, 2019•1 hr 11 min•Season 1Ep. 15
ಡಿ.ವಿ. ಜಿ ಎಂಬ ಮೂರಕ್ಷರಗಳಿಂದ ಒಂದು ಮಾಯಾ ಲೋಕವೇ ನಮ್ಮೆಲ್ಲರ ಕಣ್ಮುಂದೆ ಮೂಡುತ್ತದೆ. ಈ ಲೋಕದಲ್ಲಿ 'ಮಂಕುತಿಮ್ಮನ ಕಗ್ಗ' ಆಗ್ರಸ್ಥಾನದಲ್ಲಿರುವುದು ಅಚ್ಚರಿಯೇನಲ್ಲ. ಆದರೆ ಡಿ.ವಿ.ಜಿ.ಯವರನ್ನು ಸಾಹಿತ್ಯಕ್ಕಷ್ಟೇ ಸೀಮಿತಗೊಳಿಸಲಾಗದು. ಅವರು ಸಾರ್ವಜನಿಕ ವಲಯದಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಮತ್ತು ಪತ್ರಕರ್ತರಾಗಿ ಮಾಡಿರುವ ಸಾಧನೆ ಸಾಮಾನ್ಯವಾದದ್ದಲ್ಲ. ಅವರ 'ರಾಜಕೀಯ ಪ್ರಸಂಗಗಳು', 'ರಾಜ್ಯಶಾಸ್ತ್ರ', ಮತ್ತು Public Affairs ನಲ್ಲಿನ ಅವರ ಬರಹಗಳನ್ನು ನೋಡಿದರೆ ಅವರು ದೇಶದ ಶ್ರೇಷ್ಠ ಚಿಂತಕರೆನ್ನುವುದುರಲ್ಲಿ ಸಂಶಯವಿಲ್ಲ. ಅವರು citizen ಗೆ ಸಮಾನಾರ್ಥಕವಾಗಿ ಟಂಕಿಸಿದ 'ರಾಷ್ಟ್ರಕ' ಪದ ಪ್ರಜಾತಂತ್ರದಲ್ಲಿ ನಮ್ಮ ...
Mar 13, 2019•55 min•Season 1Ep. 14
ಬೆಂಗಳೂರು ಇನ್ನೇನು ತನ್ನ ನೀರಿನ ಮೂಲಗಳು ಬರಿದಾಗಿ ಜಲಕ್ಷಾಮವನ್ನು ಎದುರಿಸಲಿದೆಯೆಂದು ಆಗಾಗ ಕೇಳುತ್ತಿರುತ್ತೇವೆ. ಬಿ.ಬಿ.ಸಿ. ಯಿಂದ ಹಿಡಿದು, ನೀತಿ ಆಯೋಗ ಮತ್ತು ಹಲವಾರು ನಗರದ ಬಗೆಗಿನ ತಜ್ಞರ ವರೆಗೆ ಇದು 2020, 2025 ಅಥವಾ 2030 ರಲ್ಲಿ ಸಂಭವಿಸಬಹುದು. ಈ ನಿಲುವಿನಲ್ಲಿ ಎಷ್ಟು ನಿಜಾಂಶವಿದೆ? ನೀರು ವಿರಳವಿರಬಹುದು ಆದರೆ ನಮ್ಮ ಮುಂದಿರುವ ಸವಾಲು ಅದರ ಅಲಭ್ಯತೆಯಲ್ಲ. ನಮ್ಮ ಈ ಸಂಚಿಕೆಯ ಅತಿಥಿ ಎಸ್. ವಿಶ್ವನಾಥ್ ರವರು ತಿಳಿಸುವಂತೆ ನಿಜವಾದ ಸವಾಲಿರುವುದು ನೀರಿನ ಸದ್ಬಳಕೆ ಮತ್ತು ಅದರ ಸಮರ್ಥ ವಿತರಣೆಯದ್ದು. ಈ ನಿಟ್ಟಿನಲ್ಲಿ ಸರ್ಕಾರ, ಸಮಾಜ ಮತ್ತು ನಾವುಗಳು ಮಹತ್ವವಾದ ಪಾತ್ರ ವಹಿಸಬಹುದು. ಎಸ್. ವಿಶ್ವನಾಥ್ ರವರ...
Mar 06, 2019•57 min•Season 1Ep. 13
ಸಾವಿರ ವರ್ಷಗಳ ಹಿಂದೆ, ಪ್ರೇಮ ಪದ್ಯಗಳು ಹೇಗಿದ್ದವು? ನಮ್ಮ ತಲೆ-ಹರಟೆ ಪಾಡ್ಕಾಸ್ಟಿನ 12ನೆ ಎಪಿಸೋಡಿನಲ್ಲಿ ರಾಮಪ್ರಸಾದ್ ಕೆ. ವಿ. ಅವರು ಅಮರುಶತಕ ಎಂಬ ಪದ್ಯಗಳ ಸಂಗ್ರಹಣೆಯ ಬಗ್ಗೆ ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ಬೀ. ಎಸ್. ಅವರ ಜೊತೆ ಚರ್ಚಿಸುತ್ತಾರೆ ಅಮರುಶತಕ, ರಾಮಪ್ರಸಾದ್ ಅವರು ಈ ಅದ್ಭುತ ಪದ್ಯಗಳ ಕನ್ನಡ ಅನುವಾದವನ್ನು ರಚಿಸಿದ್ದರೆ. ಈ ಎಪಿಸೋಡಿನಲ್ಲಿ, ಅಮರುಕನ ಪದ್ಯಗಳ ಒಂದು ರುಚಿ ಸಿಗತ್ತೆ. ಈ ಪದ್ಯಗಳು ರಚಿಸಿದ ಸಮಯ, ಆಗಿನ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ, ಆ ಕಾಲದ ಇತಿಹಾಸ ಮತ್ತು ಸಾಹಿತ್ಯದ ಬಗ್ಗೆ ಆಳವಾಗಿ ಚರ್ಚೆ ಮಾಡುತ್ತೇವೆ. ರಾಮಪ್ರಸಾದ್ ರವರು ಅಮೆರಿಕಾದಲ್ಲಿ ತಂತ್ರಜ್ಞಾನ ಕ್ಷೇತ್ರದಲ್...
Feb 27, 2019•51 min•Season 1Ep. 12
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಂತ ಪ್ರದೇಶಗಳಲ್ಲಿ ಸಮಗ್ರ ಮತ್ತು ಪ್ರಾಕ್ಟಿಕಲ್ ಯೋಜನೆ ಸಾಧ್ಯವೆ? ನಗರ ಯೋಜನೆಯಡಿಯಲ್ಲಿ ಯಾವ ಯಾವ ಅಂಶಗಳು ಸೇರಿವೆ? ಪ್ರಸ್ತುತ ಮಾಸ್ಟರ್ ಪ್ಲ್ಯಾನ್ ದಾಖಲೆಗಳು ಉಪಯುಕ್ತವೆ ಮತ್ತು ಪರಿಣಾಮಕಾರಿಯಾಗಿ ಜಾರಿಗೆ ಬಂದಿದಿಯೇ? ಚುನಾಯಿತರಾದ ಸದಸ್ಯರು ಇದರಲ್ಲಿ ಬಾಗಿಯಾಗಿರುವರೆ? ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 11ನೇ ಎಪಿಸೋಡಿನಲ್ಲಿ, ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಅವರು, ಅಂಜಲಿ ಕರೋಲ್ ಮೋಹನ್ ಅವರ ಜೊತೆ ಮಾತನಾಡುತ್ತಾರೆ. ಅಂಜಲಿ ಅವರು ಅರ್ಬನ್ ಮತ್ತು ರೀಜನಲ್ ಪ್ಲ್ಯಾನರ್, ಮತ್ತು ಬೆಂಗಳೂರಿನ ಹಲವಾರು ಮಾಸ್ಟರ್ ಮತ್ತು ರೀಜನಲ್ ಯೋಜನೆಗಳಮೇಲೆ ಕೆಲಸ ಮಾಡಿದ್ದಾರೆ....
Feb 20, 2019•1 hr 11 min•Season 1Ep. 11
ಮೈತ್ರಿ ಸರ್ಕಾರದ ಪ್ರಥಮ ಪೂರ್ಣ ಪ್ರಮಾಣದ ಬಜೆಟ್ಟನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಫೆಬ್ರವರಿ 8ರಂದು ಮಂಡಿಸಿದರು. ಈ ವರ್ಷ ಸುಮಾರು ರೂ.2.34 ಲಕ್ಷ ಕೋಟಿಗಳ ಖರ್ಚಿನ ಅಂದಾಜು ಮಾಡಲಾಗಿದೆ - ಅಂದರೆ ತಲಾ ರೂ. 34,000. ಇದು ಕೇಂದ್ರ ಸರ್ಕಾರವು ಪ್ರತಿ ನಾಗರೀಕನ ಮೇಲೆ ಮಾಡುವ ಖರ್ಚಿಗಿಂತ 50% ಹೆಚ್ಚು. ಮತ್ತು ರಾಜ್ಯ ಸರ್ಕಾರದ ಕಾರ್ಯ ವ್ಯಾಪ್ತಿಯು ನಮ್ಮ ದೈನಂದಿನ ಜೀವನಕ್ಕೆ ಹತ್ತಿರವಾದ ನಂಟಿದೆ : ರಸ್ತೆಗಳು, ನೀರು ಸರಬರಾಜು, ಸಾರಿಗೆ, ಆರೋಗ್ಯ ಮತ್ತು ಕೃಷಿ. ಗಣೇಶ್ ಚಕ್ರವರ್ತಿಯವರು ಪವನ್ ಶ್ರೀನಾಥ್ ಜೊತೆ ಕರ್ನಾಟಕ ಸರ್ಕಾರದ ಬಜೆಟ್ ಎಲ್ಲರಿಗೂ ಸುಲಭವಾಗಿ ತಿಳಿಸುತ್ತ ಅದರ ಸೂಕ್ಷ್ಮತೆಗಳ್ಳನ್ನು ಚರ...
Feb 13, 2019•49 min•Season 1Ep. 10
ಭಾರತ ಸರ್ಕಾರವು ಮಂಡಿಸಿದ 2019-20 ಸಾಲಿನ ಇಂಟರಿಮ್ ಬಜೆಟ್ಟಿನ ಮೊತ್ತ 27.8 ಲಕ್ಷ ಕೋಟಿ ರೂಪಾಯಿ. ಅಂದರೆ ಪ್ರತಿಯೊಬ್ಬ ಭಾರತೀಯರಿಗೂ ಸುಮಾರು ರೂ. ಇಪ್ಪತ್ತು ಸಾವಿರದಷ್ಟು ಖರ್ಚು. ಈ ಅಂಕಗಳನ್ನು ಅರ್ಥ ಮಾಡಿ ಕೊಳ್ಳುಲು ಈ ಎಪಿಸೋಡ್ ನಲ್ಲಿ ಯತ್ನಿಸಿದ್ದೇವೆ. ಗಣೇಶ್ ಚಕ್ರವರ್ತಿಯವರು ಈ ವಿಷಯ ಬಗ್ಗೆ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ಅವರೊಂದಿಗೆ ಚರ್ಚಿಸುತ್ತಾರೆ. ಸೂರ್ಯ ಪ್ರಕಾಶ್ ಹಿಂದೆ ಕಂಪನಿಗಳ ಆದಾಯ ತೆರಿಗೆ ನೋಡಿಕೊಳ್ಳುತ್ತಿದ್ದು ಈಗ ದಕ್ಷ್ ಸಂಸ್ಥೆಯಲ್ಲಿ ನ್ಯಾಯಾಂಗ ಸುಧಾರಣೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಪವನ್ ರವರು ತಕ್ಷಶಿಲಾ ಸಂಸ್ಥೆಯಲ್ಲಿ ಸಂಶೋಧಕರು. ಇವರು ರಾಜ್ಯದ ಬಜೆಟ್ಗಳು, ಡಿಫೆನ್ಸ್ ಮತ...
Feb 06, 2019•1 hr 10 min•Season 1Ep. 9
ಆಧಾರ್ ಪ್ರಾಜೆಕ್ಟ್ ಮತ್ತು ಯು.ಐ.ಡಿ.ಐ.ಎ ಹೇಗೆ ಮೂಡಿ ಬಂತು? ಈ ಸೃಷ್ಣೆಯ ಜೊತೆಗೆ ನಿರ್ಮಾಣವಾಗುವಂತಹ ನ್ಯಾಯ ನೀತಿಗಳೇನು? ಸುಪ್ರೀಂ ಕೋರ್ಟ್, ನಾಗರಿಕರ ಪ್ರೈವಸಿ, ಒಂದು ಮೂಲಭೂತ ಹಕ್ಕು ಎಂಬ ತೀರ್ಪಿಗೆ ಹೇಗೆ ಬಂತು? ತಲೆ ಹರಟೆ ಕನ್ನಡ ಪೋಡ್ಕಾಸ್ಟಿನ 8ನೆ ಎಪಿಸೋಡ್ಗೆ, ಅಲೋಕ್ ಪ್ರಸನ್ನ ಕುಮಾರ್ ಅವರು, ಮತೊಮ್ಮೆ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ಅವರ ಜೊತೆ ಮಾತನಾಡಲು ಬಂದಿದ್ದಾರೆ. ನಮ್ಮ ೪ನೆ ಎಪಿಸೋಡಲ್ಲಿ , ೨೦೧೮ ವರ್ಷದಲ್ಲಿ ಆದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ವಿವರವಾಗಿ ತಿಳಿಸಿದರು. ಈ ಎಪಿಸೋಡಲ್ಲಿ, ಇವರು ಡೇಟಾ ಪ್ರೊಟೆಕ್ಷನ್, ಮತ್ತು ಸಾರ್ವಜನಿಕರ ಖಾಸಗಿತನದ (ಪ್ರೈವಸಿ) ಬಗ್ಗೆ ವಿವರಿಸುತ್ತಾರೆ. ...
Jan 30, 2019•51 min•Season 1Ep. 8
ನಾಗರೀಕರ ಮೂಲಭೂತಹಕ್ಕುಗಳು ಹಲವರಿಗೆ ತಿಳಿದಿವೆ, ಆದರೆ ಗ್ರಾಹಕರಿಗೆ ಅವರ ಹಕ್ಕುಗಳ ಅರಿವಿದೆಯೇ? ಕರ್ನಾಟಕದಲ್ಲಿ ಅನೇಕ ಖಾಸಗಿ ಮತ್ತು ಸರ್ಕಾರದ ಸೇವೆಗಳು ಕನ್ನಡಲ್ಲಿ ದೊರೆಯುತ್ತಿಲ್ಲ. ನಮ್ಮ 7ನೇ ಎಪಿಸೋಡ್ನಲ್ಲಿ ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ಅವರು, ವಸಂತ್ ಶೆಟ್ಟಿ ಅವರ ಜೊತೆ ಗ್ರಾಹಕರ ಹಕ್ಕುಗಳ ಬಗ್ಗೆ ಮತ್ತು ಅವರು ಸಂಘಟಿತವಾಗಿ ಕ್ರಿಯಾಶೀಲರಾಗಿದ್ದಲ್ಲಿ ಅವರಲ್ಲಿರುವ ಶಕ್ತಿಯ ಬಗ್ಗೆ ಮಾತನಾಡುತ್ತಾರೆ. ಹಾಗೆ, 'ಕನ್ನಡ ಗ್ರಾಹಕರ ಕೂಟ' ಮತ್ತು ಜನಸಾಮಾನ್ಯರಲ್ಲಿ ಈ ವಿಷಯಗಳ ಬಗ್ಗೆ ತಿಳುವಳಿಕೆ ಹೆಚ್ಚಿಸಲು ಅದು ನಡೆಸುತ್ತಿರುವ ಪ್ರಯತ್ನಗಳನ್ನು ವಿವರಿಸುತ್ತಾರೆ. ವಸಂತ್ ಶೆಟ್ಟಿ ತಂತ್ರಜ್ಞಾನ ವೃತ್ತಿಪರರ...
Jan 23, 2019•43 min•Season 1Ep. 7
ಎ. ಐ. ಅಂದರೆ ಏನು? ಎ. ಐ. ಮತ್ತು ಮಷೀನ್ ಲರ್ನಿಂಗ್ ನಮ್ಮ ಜೀವನವನ್ನು ಹೇಗೆ ಪ್ರಭಾವಿಸುತ್ತಿದೆ ಮತ್ತು ಅದು ಭವಿಷ್ಯವನ್ನು ಹೇಗೆ ರೂಪಿಸಬಹುದು? ಎ. ಐ. ವ್ಯಾಪಕವಾಗಿ ಬಳಕೆಯಾಗುವುದರಿಂದ ಐ. ಟಿ. ಮತ್ತು ಇತರ ಉದ್ಯೋಗಗಳ ಗತಿಯೇನು. ನಮ್ಮ ಏಳನೇ ಕಂತಿನಲ್ಲಿ ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಎ. ಐ. ಗತಕಾಲ, ಪ್ರಸ್ತುತ ಮತ್ತು ಭವಿಷ್ಯದ ಬಗ್ಗೆ ಚರ್ಚಿಸುತ್ತಾರೆ. ಮೈಸೂರಿನ ನಿವಾಸಿಯಾದ ಗಣೇಶ್ ರವರು ಎ. ಐ. ಮತ್ತು ಟ್ರಾನ್ಸ್ ಹ್ಯೂಮನಿಸಮ್ ಬಗ್ಗೆ ಆಗಾಗ್ಗೆ ಬರೆಯುತ್ತಿರುತ್ತಾರೆ. ಈ ಕಂತಿನಲ್ಲಿ ಅವರು ಈ ಕ್ಷೇತ್ರದ ತಜ್ಞರಾಗಿ ಭಾಗವಹಿಸಿದ್ದಾರೆ. ಅವರು ತಕ್ಷಶಿಲಾ ಸಂಸ್ಥೆಯಲ್ಲಿ ಸಂಪಾದಕರಾಗಿದ್ದು ತಮ್ಮ ಬಿಡುವಿನ...
Jan 16, 2019•52 min•Season 1Ep. 6
ದೂರದ ಅಮೆರಿಕಾದಲ್ಲಿ ಕನ್ನಡ ಮತ್ತು ಸಂಸ್ಕೃತಿ ಯಾವ ಸ್ಥಿತಿಯಲ್ಲಿವೆ? ಕಳೆದ ಇಪ್ಪತ್ತು ವರ್ಷಗಳಲ್ಲಿ ಅಮೇರಿಕಾದಲ್ಲಿರುವ ಕನ್ನಡಿಗರು ಹೇಗೆ ಬೆಳೆದುಕೊಂಡು ಬಂದಿದ್ದಾರೆ. ಕೆ ವಿ ರಾಮಪ್ರಸಾದ್ ರವರು ಪವನ್ ಶ್ರೀನಾಥ್ ಮತ್ತು ಬಿ. ಎಸ್. ಸೂರ್ಯ ಪ್ರಕಾಶ್ ರವರೊಂದಿಗೆ ಕಳೆದ ಎರಡು ದಶಕಗಳಲ್ಲಿ ಅವರು ಕಂಡಿರುವ ಬದಲಾವಣೆ ಗಳು ಮತ್ತು ಅವರ ವೈಯಕ್ತಿಕ ಪಯಣದ ಬಗ್ಗೆ ಹಂಚಿಕೊಳ್ಳುತ್ತಾರೆ. ಈ ಸಂಚಿಕೆಯಲ್ಲಿ ಅಮೇರಿಕ ಮತ್ತು ಬೇ ಏರಿಯಾದಲ್ಲಿರುವ ಕನ್ನಡ ಸಂಘಟನೆಗಳು, ಅಲ್ಲಿಗೆ ಭೇಟಿ ನೀಡುವ ಕಲಾವಿದರು, ವಲಸಿಗರಲ್ಲಿಯ ಪೀಳಿಗೆಗಳ ನಡುವಿನ ಅಂತರ, ಬೇರೆ ಭಾಷೆಯ ವಲಸಿಗರ ಮತ್ತು ಪ್ರಪಂಚದ ಇತರ ಭಾಗಗಳಲ್ಲಿರುವ ಭಾರತೀಯರ ಜೊತೆ ಬೆರೆಯುವಿ...
Jan 09, 2019•45 min•Season 1Ep. 5
ಭಾರತದ ಸರ್ವೋಚ್ಛ ನ್ಯಾಯಾಲಯವು 'ಆಧಾರ್' ಯೋಜನೆ ಬಗ್ಗೆ ಮಹತ್ತರವಾದ ತೀರ್ಪುಗಳನ್ನು ಸೆಪ್ಟೆಂಬರ್ 2018ರಲ್ಲಿ ನೀಡಿತು. ಇವು ಸರ್ಕಾರವು 'ಆಧಾರ್' ಮೂಲಕ ಪಡೆದುಕೊಂಡ ಮಾಹಿತಿಯನ್ನು ವಿನಿಯೋಗಿಸುವ ರೀತಿ, ದೇಶದಲ್ಲಿನ ಸರ್ಕಾರಿ ಯೋಜನೆಗಳ ಕಾರ್ಯವೈಖರಿ, ಜನಸಾಮಾನ್ಯರ ಪ್ರೈವಸಿ ಹಕ್ಕು ಮತ್ತು ಖಾಸಗಿವಲಯದ ಮೇಲಿನ ಗಾಢವಾದ ಪರಿಣಾಮ ಬೀರಲಿದೆ. ಅಲೋಕ್ ಪ್ರಸನ್ನ ಕುಮಾರ್ ರವರು ಸೂರ್ಯ ಪ್ರಕಾಶ್ ಬಿ. ಎಸ್. ಮತ್ತು ಪವನ್ ಶ್ರೀನಾಥ್ ರವರ ಜೊತೆ ಈ ತೀರ್ಪನ್ನು ಸರಳವಾಗಿಸುತ್ತ ಇದರ ಮುಂದಿನ ರೂಪು-ರೇಷೆಗಳು ಹೇಗಿರಬಹುದು ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಅಲೋಕ್ ರವರು ಸರ್ವೋಚ್ಛ ನ್ಯಾಯಾಲಯದಲ್ಲಿ ವಕೀಲರಾಗಿದ್ದು ಈಗ ವಿಧಿ ಸಂಸ್ಥೆಯ...
Jan 02, 2019•43 min•Season 1Ep. 4
ಇಂಟರ್ನೆಟ್ ಎಲ್ಲೆಡೆ ಇದೆ. ಇದರ ಉಪಯೋಗಗಳ ಜೊತೆ ಹಲವಾರು ಅನಾನುಕೂಲತೆ ಸಹ ನಮ್ಮ ಅನುಭವಕ್ಕೆ ಬಂದಿವೆ. ಯುವಕರು, ವೃದ್ಧಾಪ್ಯದವರು, ಮಕ್ಕಳು ಎಲ್ಲರೂ ಆನ್ಲೈನ್ ಹೋಗುತ್ತಿದ್ದಾರೆ. ಇವರೆಲ್ಲರಿಗೆ ಕಂಡುಬರುವ ವಿಷಯಗಳು, ಇವರ ಮೇಲೆ ಬೀರುವ ಪ್ರಭಾವಗಳು, ಮತ್ತು ವಿಪತ್ತುಗಳಿಂದ ಇವರನ್ನು ರಕ್ಷಿಸುವುದು ಸೈಬರ್ ಸೆಕ್ಯೂರಿಟಿ. ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ಬಿ ಎಸ್ ಅವರು ಸಂದೇಶ್ ಆನಂದ್ ಅವರ ಜೊತೆ ಈ ಅಗಾಧ ಗಾತ್ರದ ಇಂಟರ್ನೆಟ್ ಮತ್ತು ಸೈಬರ್ ಸೆಕ್ಯುರಿಟಿ ಬಗ್ಗೆ ಹರಟುತ್ತಾರೆ. Hackers. Bug bounty hunters. Wannacry. Ransomware. The internet can be a scary place, and as millions of Indi...
Dec 26, 2018•41 min•Season 1Ep. 3