Thale-Harate Kannada Podcast - podcast cover

Thale-Harate Kannada Podcast

IVM Podcastsshows.ivmpodcasts.com

ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಳವಾದ ಮಾತು. ನಿಮ್ಮ ಹೊಸ್ಟ್ಸ್ ಪವನ್ ಶ್ರೀನಾಥ್, ಗಣೇಶ್ ಚಕ್ರವರ್ತಿ ಮತ್ತು ಸೂರ್ಯ ಪ್ರಕಾಶ್ ಬಿ.ಎಸ್. ಹೊಸ ಸಂಚಿಕೆಗಳು ಪ್ರತಿವಾರ. ಬನ್ನಿ ಕೇಳಿ.

The Thale-Harate Kannada Podcast is a weekly talkshow that bridges Kannada and English, as well as Karnataka and the world. Every week, hosts Pavan Srinath, Surya Prakash BS and Ganesh Chakravarthi talk to guests about almost anything under the sun, and try to have fun while doing so. The show's deep conversations span everything, including culture, history, science public policy, current affairs, geopolitics and more. The show also keeps a keen eye on everything Bengaluru and Karnataka. Follow the podcast at @haratepod across all social media.

Last refreshed:
Follow this podcast in the Metacast mobile app to refresh it and see new episodes.
Download Metacast podcast app
Podcasts are better in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episodes

ಕಾಲ ಯಾತ್ರೆ. Tales of Time Travel.

ಸಮಯ, ಕಾಲ, ಮಾನವ ಮೀರದೆ ಇರುವಂತಹ ಒಂದು ಪರಿಕಲ್ಪನೆ. ವೈಜ್ಞಾನಿಕ ಕಥೆಗಳಲ್ಲಿ ಸಮಯ ಸಂಚಾರ, ಕಾಲಸಂಚಾರ ಒಂದು ಮುಖ್ಯವಾದ ಪಾತ್ರ ಹೊಂದಿದೆ. ಕಾಲಸಂಚಾರ ಸಫಲವಾದರೆ ಏನಾಗಬಹುದು ಎಂಬುದು ಬಹಳ ಸ್ವಾರಸ್ಯಕರವಾದ ಕಲ್ಪನೆ. ಅನೇಕ ಚಲನಚಿತ್ರಗಳು, ವೈಜ್ಞಾನಿಕ ಕಥೆಗಳು, ಕಲಾಸಂಚಾರದ ಬಗ್ಗೆ ಆಳವಾಗಿ ವಿಶ್ಲೇಶಿಸಿವೆ. ನಮ್ಮ ಈ 59ನೇ ಸಂಚಿಕೆಯಲ್ಲಿ ಗೌತಮ್ ಶೆಣಾಯ್ ಅವರು ಕಾಲಸಂಚಾರದ ಬಗ್ಗೆ ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಅವರ ಜೊತೆ ಚರ್ಚಿಸುತ್ತಾರೆ. What would it be like, if we could go back in time? What would we be able to do? Even if you have never sought out science fiction, we...

Feb 27, 20201 hr 11 minSeason 1Ep. 59

ಕಂಪ್ಯೂಟರ್ ಶಿಕ್ಷಣದ ಮರುಚಿಂತನೆ. Rethinking Computer Science in Education.

How can we re-imagine the role of programming and computer science in our school curricula? How can we equip Indian students with the skills and the knowledge necessary to thrive in the 21st century? Ramya Bhaskar and Sridhar Pabbisetty talk to Ganesh Chakravarthi and Pavan Srinath about reimagining school education for Industry 4.0 on Episode 58 of the Thale-Harate Kannada Podcast. Ramya Bhaskar is founder of Givemefive.in , an AI and Programming learning platform for young minds of India. Give...

Feb 20, 202041 minSeason 1Ep. 58

ಅಂತರಿಕ್ಷ ಸಂಚಾರ. Space Exploration in the 2020s.

ಬೆಂಗಳೂರು ಬರಿ ಐ.ಟಿ. ಸಿಟಿ ಅಲ್ಲ. ಇಲ್ಲಿ ಭಾರತದಲ್ಲಿ ಅಂತರಿಕ್ಷದ ನೆಲೆ ಕೂಡ ಆಗಿದೆ. ಒಮ್ಮೆ ಬರಿ ಇಸ್ರೊ ಆಧಾರದ ಮೇಲೆ ಬೆಂಗಳೂರು ಈ ಪಟ್ಟವನ್ನು ಗಳಿಸಿತು. ಆದರೆ ಈಗ ಇಲ್ಲಿ ಅನೇಕ ಸಂಶೆಗಳು, ಕಂಪನಿಗಳು, ಅಂತರಿಕ್ಷದ ಮೇಲೆ ಸಂಶೋಧನೆ ನಡೆಸುತ್ತಾರೆ. ರಾಕೆಟ್ ಮತ್ತೆ ಅಂತರಿಕ್ಷ ಯಾನಗಳ ಮೇಲೆ ಸಾಕಷ್ಟು ಸಂಶೋಧನೆ ಮತ್ತು ಪದಾರ್ಥಗಳ ಉತ್ಪನ್ನಗಳು ಬೆಂಗಳೂರಿನಿಂದ ಬರುತ್ತಿದೆ. ನಮ್ಮ ಈ ಸಂಚಿಕೆಯಲ್ಲಿ ನಾರಾಯಣ್ ಪ್ರಸಾದ್ ಅವರು ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ಅಂತರಿಕ್ಷದ ಬಗ್ಗೆ, ಅಲ್ಲಿಯ ಸವಾಲು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಾರೆ. ನಾರಾಯಣ್ ಪ್ರಸಾದ್ ಅವರು ಸಾಟ್ಸೆರ್ಚ್ ಕಂಪನಿಯನ್ನು ಸ್ಥಾಪಿಸ...

Feb 13, 20201 hr 6 minSeason 1Ep. 57

ಯಂತ್ರಗಳ ಬುದ್ಧಿವಂತಿಕೆ ಮತ್ತು ಕಲಿಕೆ. Machine Learning and Intelligence.

ಬುದ್ಧಿವಂತಿಕೆ ಅಂದರೆ ಏನು? ನಾವು ಕಲಿಯುವುದನ್ನು ಹೇಗೆ ಕಲಿಯುತ್ತೇವೆ? ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಈಚೆಗೆ ಎಲ್ಲೆಲ್ಲೂ ಕೇಳಿಬರುವ ಪದ. ಆದರೆ ನಿಜವಾಗಿಯೂ ಎ.ಐ. ಸಾಮರ್ಥ್ಯವೇನು? ದೃಶ್ಯ ಹಾಗೂ ಮತ್ತೆ ಮತ್ತೆ ಮೂಡುವ ಮಾದರಿಗಳಲ್ಲಿ (ಪ್ಯಾಟರ್ನ್) ಬಹಳಷ್ಟು ಪ್ರಗತಿಯಾಗಿದೆ. ಬೇರೆ ಆಯಾಮಗಳಲ್ಲಿ ಎ.ಐ. ಬೆಳೆಯುವುದಕ್ಕೆ ಬೇಕಾಗಿರುವ ಮುಂದಿನ ಹೆಜ್ಜೆಗಳೇನು? ತಂತ್ರಜ್ಞ, ಉದ್ಯಮಿ ಅವಿನಾಶ್ ಆಂಬಳೆ ಅವರು ನರ ವಿಜ್ಞಾನ, ತರ್ಕ ಮತ್ತು ಕಂಪ್ಯೂಟರ ವಿಜ್ಞಾನದ ಅತ್ಯಾಧುನಿಕ ಸಂಶೋಧನೆಯ ಆಧಾರದ ಮೇಲೆ ಯಂತ್ರ ದೃಷ್ಟಿ (ಮಷೀನ್ ವಿಶನ್) ಮತ್ತು ಅವುಗಳ ಬುದ್ಧಿವಂತಿಕೆಯ ಇತಿಹಾಸ ಮತ್ತು ಭವಿಷ್ಯದ ಬಗ್ಗೆ ಸೂರ್ಯ ಪ್ರಕಾಶ್ ಬಿ.ಎ...

Feb 06, 20201 hr 2 minSeason 1Ep. 56

ವೈಜ್ಞಾನಿಕ ಕಥೆಗಳು. Kannada Science Fiction.

Science fiction is an invaluable part of literature that has pushed the frontiers of human thinking. Technologies, ideas, governance frameworks, have all been influenced by science fiction. Many visionary technologies envisaged in literature can now be seen in real life. Science fiction is also not foreign, with numerous prolific authors who write in Kannada, Bengali, Marathi and most Indian languages. Gautham Shenoy talks to Ganesh Chakravarthi on Episode 55 of the Thale-Harate Kannada Podcast ...

Jan 30, 20201 hr 9 minSeason 1Ep. 55

ತುಳುನಾಡು ಸಂಸ್ಕೃತಿ. Tulunadu Culture.

ತುಳುನಾಡಿನ ಸಾಂಸ್ಕೃತಿಕ ವ್ಯಶೀಶ್ಯತೆಗಳು ಅನೇಕ. ನಾಟ್ಯ, ನೃತ್ಯ, ವೇಷಭೂಷಣಗಳು ಮೂಡಿ ಬಂದಿವೆ. ತುಳುನಾಡಿನ ಜನಾಂಗದ ಭಿನ್ನತೆಯು ಇದಕ್ಕೆ ಅಲ್ಲಿಯೇ ಆದ ಎಣೆಯಿಲ್ಲದ ವಿಶೇಷತೆಯನ್ನು ನೀಡುತ್ತದೆ. ಅಲ್ಲಿಯ ಸಂಸ್ಕೃತಿಯ ಬಗ್ಗೆ ಮಾತಾಡಲು ನಮ್ಮ ಜೊತೆ ಇದ್ದಾರೆ ಸೌಮ್ಯ ನಂದನ್ ಅವರು. ಸೌಮ್ಯ ಅವರು ತುಳುನಾಡಿನ ನಿವಾಸಿ ಮತ್ತು ತಕ್ಷಶಿಲಾ ಸಂಸ್ಥೆಯಲ್ಲಿ ಕೊರ್ಪೊರೇಟ್ ಆಫ್ಫೇರ್ಸ್ನ ನೇತೃತ್ವದಲ್ಲಿ ಇದ್ದಾರೆ. ಫಾಲೋ ಮಾಡಿ. Follow the Thalé-Haraté Kannada Podcast @haratepod. Tulunadu Culture Tulunadu has a unique culture. The diversity of the region has also given rise to many forms of ...

Jan 23, 202050 minSeason 1Ep. 54

ಬೆಂಗಳೂರಿನ ನಾಯಿಗಳು. The Dogs of Bengaluru.

ನಮ್ಮೂರಾದ ನಾಯಿಗಳು ನಮ್ಮೆಲ್ಲರ ಮಧ್ಯೆ ಸದಾ ಓಡಾಡುತ್ತಿರುತ್ತವೆ. ಇದಕ್ಕೆ ಮನುಷ್ಯರು ಊಟ ನೀಡುವುದು, ದತ್ತು ತೊಗೊಳುವುದು, ಮತ್ತು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಾರೆ. ಆದರೆ ಇವುಗಳು ಸುಮಾರು ಜನರಿಗೆ ಹಾನಿಯನ್ನು ಕೂಡ ಉಂಟುಮಾಡಿವೆ. ರೇಬೀಸ್ ಅಂತಹ ಪರಿಹಾರವಿಲ್ಲದ ಖಾಯಿಲೆಗಳಿಗೆ ಕಾರಣವಾಗಿವೆ. ಇವುಗಳಿಂದ ಆಗುವೆ ಸಮಸ್ಯೆಗಳೇನು? ಇದಕ್ಕೆ ಪರಿಹಾರಗಳಿವೆಯೇ? ನಮ್ಮ ಈ ಸಂಚಿಕೆಯಲ್ಲಿ ಚಾರ್ಲಿ'ಸ್ ಅನಿಮಲ್ ರೆಸ್ಕ್ಯೂ ಸೆಂಟರ್ (ಕೇರ್) ಇನ ಸುಧಾ ನಾರಾಯಣನ್ ಮತ್ತು ಡಾ| ಲೋಹಿತ್ ಎಚ್ ಡಿ ಅವರು ನಾಯಿಗಳು ಮತ್ತು ಅದರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಾರೆ. Can any of us truly imagine a Bengaluru wit...

Jan 16, 20201 hr 2 minSeason 1Ep. 53

ಶಾಂತಿಯುತ ಪ್ರತಿಭಟನೆಯ ಹಕ್ಕು. The Freedom to Protest.

ಸಿ.ಎ.ಎ. ಮತ್ತು ಏನ್.ಆರ್.ಸಿ. ವಿರುದ್ಧ ಲಕ್ಷಾಂತರ ಜನರು ಏಕೆ ಹೋರಾಟ ಮಾಡುತ್ತಿದ್ದಾರೆ? ಒಂದು ರಾಷ್ಟ್ರೀಯ ಪೌರತ್ವ ನೋಂದಣಿ ಇಂದ ಆಗುವ ಸಮಸ್ಯೆಗಳೇನು? ಜನರನ್ನು ಶಾಂತಿಯುತ ಹೋರಾಟ ಮಾಡುವುದರಿಂದ ಏಕೆ ತಡೆಯುತ್ತಿದ್ದಾರೆ? ಅಲೋಕ್ ಪ್ರಸನ್ನ ಕುಮಾರ್ ಮತ್ತು ಸರಾಯು ನಟರಾಜನ್ ಅವರು ನಮ್ಮ 50, 51 ಮತ್ತು 52ನೇ ಸಂಚಿಕೆಗಳಲ್ಲಿ ಸಿಎಎ ಮತ್ತು ಏನ್ ಅರ್ ಸಿ ಬಗ್ಗೆ ಚರ್ಚೆ ಮಾಡುತ್ತಾರೆ. ಈ 52ನೇ ಸಂಚಿಕೆಯಲ್ಲಿ ಶಾಂತಿಯುತ ಹೋರಾಟದ ಬಗ್ಗೆ, ಪೊಲೀಸ್ ಮತ್ತು ಇತರ ಜನದ ದೌರ್ಜನ್ಯದ ಬಗ್ಗೆ ಮತ್ತು ಸೆಕ್ಷನ್ ೧೪೪ ಬಗ್ಗೆ ಚರ್ಚೆ ಮಾಡುತ್ತಾರೆ. Why is the CAA problematic? Why are lakhs of people protesting against...

Jan 09, 202032 minSeason 1Ep. 52

ರಾಷ್ಟ್ರೀಯ ಪೌರತ್ವ ನೋಂದಣಿ. Understanding the NRC.

ಸಿ.ಎ.ಎ. ಮತ್ತು ಏನ್.ಆರ್.ಸಿ. ವಿರುದ್ಧ ಲಕ್ಷಾಂತರ ಜನರು ಏಕೆ ಹೋರಾಟ ಮಾಡುತ್ತಿದ್ದಾರೆ? ಒಂದು ರಾಷ್ಟ್ರೀಯ ಪೌರತ್ವ ನೋಂದಣಿ ಇಂದ ಆಗುವ ಸಮಸ್ಯೆಗಳೇನು? ಜನರನ್ನು ಶಾಂತಿಯುತ ಹೋರಾಟ ಮಾಡುವುದರಿಂದ ಏಕೆ ತಡೆಯುತ್ತಿದ್ದಾರೆ? ಅಲೋಕ್ ಪ್ರಸನ್ನ ಕುಮಾರ್ ಮತ್ತು ಸರಾಯು ನಟರಾಜನ್ ಅವರು ನಮ್ಮ 50, 51 ಮತ್ತು 52ನೇ ಸಂಚಿಕೆಗಳಲ್ಲಿ ಸಿಎಎ ಮತ್ತು ಏನ್ ಅರ್ ಸಿ ಬಗ್ಗೆ ಚರ್ಚೆ ಮಾಡುತ್ತಾರೆ. ಈ 51ನೇ ಸಂಚಿಕೆಯಲ್ಲಿ ಪೌರತ್ವ ನೋಂದಣಿ ಬಗ್ಗೆ, ಅಸ್ಸಾಂ ರಾಜ್ಯದಲ್ಲಿ ಇದರ ಪರಿಣಾಮಗಳು ಮತ್ತು ದೇಶಾದ್ಯಂತ ಇದನ್ನು ಜಾರಿಗೆ ತರುವುದರ ಬಗ್ಗೆ ಚರ್ಚೆ ಮಾಡುತ್ತಾರೆ Why is the CAA problematic? Why are lakhs of people protes...

Jan 09, 202037 minSeason 1Ep. 51

ಪೌರತ್ವ ಕಾಯ್ದೆ ತಿದ್ದುಪಡಿ. CAA 2019 Explained.

ಸಿ.ಎ.ಎ. ಮತ್ತು ಏನ್.ಆರ್.ಸಿ. ವಿರುದ್ಧ ಲಕ್ಷಾಂತರ ಜನರು ಏಕೆ ಹೋರಾಟ ಮಾಡುತ್ತಿದ್ದಾರೆ? ಒಂದು ರಾಷ್ಟ್ರೀಯ ಪೌರತ್ವ ನೋಂದಣಿ ಇಂದ ಆಗುವ ಸಮಸ್ಯೆಗಳೇನು? ಜನರನ್ನು ಶಾಂತಿಯುತ ಹೋರಾಟ ಮಾಡುವುದರಿಂದ ಏಕೆ ತಡೆಯುತ್ತಿದ್ದಾರೆ? ಅಲೋಕ್ ಪ್ರಸನ್ನ ಕುಮಾರ್ ಮತ್ತು ಸರಾಯು ನಟರಾಜನ್ ಅವರು ನಮ್ಮ 50, 51 ಮತ್ತು 52ನೇ ಸಂಚಿಕೆಗಳಲ್ಲಿ ಸಿಎಎ ಮತ್ತು ಏನ್ ಅರ್ ಸಿ ಬಗ್ಗೆ ಚರ್ಚೆ ಮಾಡುತ್ತಾರೆ. ಈ 50ನೇ ಸಂಚಿಕೆಯಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ಮತ್ತು ಇದರ ಅಸಂವಿಧಾನಿಕ ಗುಣಗಳ ಬಗ್ಗೆ ಮಾತನಾಡಿದ್ದಾರೆ. Why is the CAA problematic? Why are lakhs of people protesting against the possibility of an NRC? Wh...

Jan 09, 202027 minSeason 1Ep. 50

ಬೆಂಗಳೂರಿಂದ ಅಳೆದ ಎವರೆಸ್ಟ್ ಪರ್ವತ. The Great Trignometric Survey

ಉಪಗ್ರಹಗಳನ್ನು ಬಳಸುವ ಮೊದಲು ಜನರು ಜಗತ್ತನ್ನು ಹೇಗೆ ಅಳೆಯುತ್ತಇದ್ರು? ಎವರೆಸ್ಟ್ ಪರ್ವತದ ಎತ್ತರವನ್ನು ಅಳೆಯುವ ಪ್ರಕ್ರಿಯೆಯು ಬೆಂಗಳೂರಿನಲ್ಲಿ ಪ್ರಾರಂಭವಾಯಿತೆ? ಉದಯ ಕುಮಾರ್ ಪಿ.ಎಲ್. ಅವರು 'ದ ಗ್ರೇಟ್ ಟ್ರಿಗ್ನೊಮೆಟ್ರಿಕ್ ಸರ್ವೇ' ಬಗ್ಗೆ ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 49ನೇ ಕಂತಿನಲ್ಲಿ ಮಾತನಾಡುತ್ತಾರೆ. How was the world mapped and measured before the era of satellites? Did the process of measuring Mount Everest start in any way in Bengaluru? Udaya Kumar PL talks about The Great Trignometric Su...

Dec 26, 20191 hr 18 minSeason 1Ep. 49

ಕರ್ನಾಟಕದ ವೀರಗಲ್ಲುಗಳು. Karnataka's Veeragallus.

ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ಗೆ ಇಂದು ಮೊದಲ ವರ್ಷದ ಸಂಭ್ರಮಾಚರಣೆ. ನಮ್ಮನ್ನು ಸತತವಾಗಿ ಹುರಿದುಂಬಿಸುತ್ತಿರುವ ಕೇಳುಗರಿಗೂ ಮತ್ತು ತಮ್ಮ ಅಮೂಲ್ಯವಾದ ಸಮಯವನ್ನೂ ತಿಳುವಳಿಕೆಯನ್ನೂ ನಮ್ಮ ಜೊತೆ ಹಂಚಿಕೊಳ್ಳುತ್ತಿರುವ ಅತಿಥಿಗಳಿಗೂ ನಾವು ಚಿರ ಋಣಿ ಯಾಗಿದ್ದೇವೆ. ನಮ್ಮ ಈ 48 ಕಂತಿನಲ್ಲಿ, ಕರ್ನಾಟಕಕ್ಕೇ ವಿಶಿಷ್ಟವಾದ ವೀರಗಲ್ಲುಗಳ ಬಗ್ಗೆ 40 ವರ್ಷಗಳ ಸಂಶೋಧನೆಯನ್ನು ಹಿರಿಯ ವಿದ್ವಾಂಸರಾದ ಡಾ. ಶೇಷಾಶಾಸ್ತ್ರಿಯವರು ಹಂಚಿಕೊಂಡಿದ್ದಾರೆ. ನಮಗೆ ದೊರೆತಿರುವ ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು ಸುಮಾರು 1500 ವರ್ಷಗಳ ಸಮಾಜವ್ಯವಸ್ಥೆ, ಆಯುಧ ಮತ್ತು ವಾದ್ಯ ಪ್ರಕಾರಗಳು, ಭಾಷೆ, ಕಾವ್ಯ ಮತ್ತು ಶಿಲ್ಪಶಾಸ್ತ್ರದ ಬೆಳವಣಿ...

Dec 19, 20191 hr 1 minSeason 1Ep. 48

ಆರ್ಥಿಕ ಸಂಶೋಧನೆ: ಹೇಗೆ? ಏಕೆ? How Does An Economist Solve Problems?

ವಿದ್ಯಾಭ್ಯಾಸವು ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದರ ಬಗ್ಗೆ ಸಾಕಷ್ಟು ಸಂಶೋದನೆಗಳಿವೆ. ಆದರೆ ಬರೇ ಒಂದು ವರ್ಷದ ಅವಧಿಯನ್ನು ಶಾಲೆಯಲಿ ಅಥವಾ ಕಾಲೇಜಿನಲ್ಲಿ ಕಳೆದರೆ ಇಂತಹ ಬಲಾವಣೆಗಳನ್ನು ಕಾಣಬಹುದು? ದೇಶದ ಮಟ್ಟದಲ್ಲಿ ಯಾವ ರೀತಿ ಪರಿವರ್ತನೆಯನ್ನು ಮೂಡಿಸಬಹುದು? ಇಕೊನೊಮಿಸ್ಟ್ಸ್ ಅವರು ಈ ವಿಚಾರದಲ್ಲಿ ಹೊಸ ಉತ್ತರಗಳನ್ನು ಹುಡುಕುತ್ತಾನೆ ಇದ್ದಾರೆ. ನಮ್ಮ ಈ ಸಂಚಿಕೆಯಲ್ಲಿ ಪವನ್ ಶ್ರೀನಾಥ್ ಅವರು ಇಕೊನೊಮಿಸ್ಟ್ ನವೀನ್ ಕುಮಾರ್ ಅವರ ಜೊತೆ ಆರ್ಥಿಕ ಸಂಶೋಧನೆಯ ಬಗ್ಗೆ ಮಾತನಾಡುತ್ತಾರೆ. ನವೀನ್ ಅವರು ಷಿಕಾಗೊ ಇನ ಇಲಿನಾಯ್ ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ. ಮುಗಿಸುತ್ತಿದ್ದಾರೆ. ಇವರು ಕ...

Dec 12, 20191 hr 26 minSeason 1Ep. 47

ಹವಾಮಾನ ಪಟ್ಟಿ. Weather Diaries from Bengaluru.

ಹವಾಮಾನ ಚರ್ಚೆ ಅನ್ನೋದು ನಮ್ಮೆಲ್ಲರಿಗೂ ಬಹಳ ಪ್ರಿಯವಾದದ್ದು. ಕಳೆದ ದಶಕಗಳಲ್ಲಿ ಮಳೆಗಾಲ, ಬೇಸಿಗೆ, ಮತ್ತು ಚಳಿಗಾಲದ ವಿಧಾನಗಳು ಬದಲಾದಂತಾಗಿದೆ. ಹವಾಮಾನ ಪರಿವರ್ತನೆ, ಇಲ್ಲ ಕ್ಲೈಮೇಟ್ ಚೇಂಜ್ ಇದಕ್ಕೆ ಕಾರಣವೇ? ನಮಗೆ ಹವಾಮಾನದ ಬಗ್ಗೆ ಸರಿಯಾಗಿ ಎಷ್ಟು ಗೊತ್ತು? ನಮ್ಮ ಈ 46ನೇ ಸಂಚಿಕೆಯ್ಲಿ ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಅವರು ಬೆಂಗಳೂರಿನ ಹವಾಮಾನದ ಬಗ್ಗೆ ಮತ್ತು ಹವಾಮಾನದ ವಿಜ್ಞಾನದ ಚರ್ಚೆ ಮಾಡುತ್ತಾರೆ. Bangaloreans love to talk about the weather, perhaps more than anyone else. Meanwhile, the city is growing hotter and even regular rains are becoming increas...

Dec 05, 20191 hr 8 minSeason 1Ep. 46

ತುಳುನಾಡ ಮಡಿಲಲ್ಲಿ. Glimpses of Tulunadu.

ತುಳು ಎಂಬುದು ಬರೇ ಒಂದು ಭಾಷೆ ಅಲ್ಲ. ಆ ಪ್ರದೇಶದಲ್ಲಿ ಆದರೆ ಆದ ಸಂಸ್ಕೃತಿ, ಸಂಪ್ರದಾಯಗಳು ಮೂಡಿ ಬಂದಿವೆ. ನಮ್ಮ ೪೫ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ತುಳುನಾಡಿನ ವ್ಯಶಿಷ್ಯತೇಗಾಲ ಬಗ್ಗೆ ಒಂದು ಸಂಕ್ಷಿಪ್ತವಾದ ಚರ್ಚೆ ಮಾಡುತ್ತಾರೆ ಕಾರ್ತಿಕ್ ಮಳ್ಳಿ ಅವರ ಜೊತೆ. ಕಾರ್ತಿಕ್ ಅವರು ಒಬ್ಬ ಪತ್ರಕರ್ತ, ಸಾಮಾಜಿಕ ವಿಜ್ಜಾನ, ಭಾಷಾಶಾಸ್ತ್ರ ಮತ್ತು ಸಾಹಿತ್ಯದ ಮೇಲೆ ಸಂಶೋಧನೆ ಮಾಡುತ್ತಾರೆ. Tulunadu is not just a region. It has its own unique history, practices, and culture. In this episode, Ganesh Chakravarthi takes a small peek into the region with journalist and rese...

Nov 28, 201944 minSeason 1Ep. 45

ನಮ್ಮ ಮಕ್ಕಳ ಶಿಕ್ಷಣೆ. Primary Education in India.

ಭಾರತದ ಸ್ವತಂತ್ರ್ಯದ ನಂತರ ಶಿಕ್ಷಣ ಹೇಗೆ ಮೂಡಿ ಬಂದಿದೆ? ಸರ್ಕಾರಗಳು ಸಾವಿರಾರು ಕೋಟಿ ಶಿಕ್ಷಣದ ಮೇಲೆ ಖರ್ಚ್ ಮಾಡಿಯೂ ಸಹ ಏಕೆ ನಮ್ಮ ಶ್ಯಕ್ಷಣಿಕ ಮಟ್ಟ ಅಷ್ಟು ಕಡಿಮೆ ಇದೆ? ನಮ್ಮ ಈ 44ನೆ ಸಂಚಿಕೆಯಲ್ಲಿ ರೋಹಿತ್ ಶೆಣಾಯ್ ಅವರು ಕರ್ನಾಟಕ ಮತ್ತು ಭಾರತದಲ್ಲಿ ಪ್ರಾಥಮಿಕ ಶಿಕ್ಷಣದ ಬಗ್ಗೆ ಚರ್ಚೆ ಮಾಡುತ್ತಾರೆ. ರೋಹಿತ್ ಅವರು ತಕ್ಷಶಿಲಾ ಸಂಸ್ಥೆಯ ಶಿಕ್ಷಣಿಕ ವಿಭಾಗದ ಮುಖ್ಯಸ್ಥರಾಗಿ, ಹಲವಾರು ವರ್ಷ ಐ ಟಿ ಮತ್ತು ಶಿಕ್ಷಣದ ಮೇಲೆ ಕೆಲಸ ಮಾಡಿದ್ದಾರೆ. How has Indian school education evolved since independence? Why do Indian students still have such low learning levels and outcomes, in sp...

Nov 21, 201953 minSeason 1Ep. 44

ಕರ್ನಟಕ ಪ್ರವಾಸ ಚರಿತ್ರೆ. Travel Tales from Karnataka.

ಕರ್ನಾಟಕ ರಾಜ್ಯ ಎಷ್ಟು ವಿಶಾಲವದದ್ದು ಅಂದರೆ ಇಲ್ಲಿಯ ವಾಸಿಗಳೆ ಹಲವಾರು ಸ್ಥಲಗಣಳನ್ನು ನೋಡಿರುವುದಿಲ್ಲ. ನಮ್ಮ 43 ನೇ ಸಂಚಿಕೆಯಲ್ಲಿ ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರು ತಮ್ಮ ಪ್ರವಾಸಿ ಕಥೆಗಳನ್ನು ಹಂಚಿಕೊಳ್ಳುತ್ತಾರೆ. Karnataka's tourism tagline "One State, Many Worlds" is no exaggeration. On Episode 43 of The Thale-Harate Kannada Podcast, hosts Ganesh Chakravarthi and Pavan Srinath recount some tales from their travels across Karnataka. Ganesh and Pavan recount their favourite moments, favourite stories and recommendati...

Nov 14, 201945 minEp. 43

ಕರ್ನಾಟಕದ ಮುಂದಿನ ಹೆಜ್ಜೆ. Karnataka: The Path Ahead.

ಈ ವರ್ಷ ನವೇಂಬರಲ್ಲಿ ಕರ್ನಾಟಕ ರಾಜ್ಯಕ್ಕೆ 63 ವರ್ಷ ತುಂಬಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜ್ಯ ಎಷ್ಟು ಮುಂದು ಬಂದಿದೆ, ಮತ್ತು ಮುಂದೆ ಕರ್ನಾಟಕ ಯಾವ ಗುರಿಯನ್ನು ಅನುಸಾರಿಸಿಬೇಕು? ಸೂರ್ಯ ಪ್ರಕಾಶ್ ಬಿ. ಎಸ್. ಮತ್ತು ಪವನ್ ಶ್ರೀನಾಥ್ ಅವರು ಕರ್ನಾಟಕ ತನ್ನ ಭವಿಷ್ಯದ ಬಗ್ಗೆ ಹೇಗೆ ಯೋಚಿಸಬೇಕು ಎಂಬುದರ ಕುರಿತು ಮಾತನಾಡುತ್ತಾರೆ. The State of Karnataka turns 63 years old on November 1, 2019. How well have we done in the recent years, and what should Karnataka aim for in the coming decades? Hosts Surya Prakash BS and Pavan Srinath sit down to talk about h...

Oct 31, 201944 minSeason 1Ep. 42

ನಡೆ, ಸೈಕಲ್ ಓಡಿಸೋಣ! Cycling and Walking in the City.

ನಮ್ಮ ನಗರಗಳಲ್ಲಿ ಪಾದಚಾಲಕರಿಗೆ ಮಹತ್ವ ಇಲ್ಲದಂತಾಗಿದೆ. ಕಾರುಗಳು ಹಾಗೂ ದ್ವಿಚಕ್ರವಾಹನಗಳಗು ರಸ್ತೆಗಳಲ್ಲಿ ಹೆಚ್ಚಾಗಿವೆ. ಇಂತಹ ಸಂದರಭದಲ್ಲಿ ಸೈಕಲ್ ಚಲಿಸುವುದು ಅಸಾಧ್ಯವಾದ ಕೆಲಸ. ನಮ್ಮ ಚಾಲಕರ ವಿಧಾನ ಮತ್ತು ಸೈಕಲ್ ಬಳಕೆಯ ಬಗ್ಗೆ ಒಂದು ಹೊಸ ತರಹದ ಆಲೋಚನೆ ತರುವುದು ಸಾಧ್ಯವಾ? ನಮ್ಮ ಈ ಸಂಚಿಕೆಯಲ್ಲಿ, ಬೆಂಗಳೂರಿನ 'ಬೈಸೈಕಲ್ ಮೇಯರ್' ಸತ್ಯ ಶಂಕರನ್ ಅವರು ನಮ್ಮ ನಗರಗಳಲ್ಲಿ ಸಂಚರಣೆಯ ಅನೇಕ ವಿಧಾನಗಳ ಬಗ್ಗೆ ಮತ್ತು ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸುವ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ. Indian cities focus excessively on cars, bikes and motorised vehicles. It is difficult to wal...

Oct 24, 20191 hr 21 minSeason 1Ep. 41

ವೃಷಭಾವತಿಯ ಹಿಂದೆ ಮುಂದೆ. Rejuvenating Vrishabhavathi.

ನಮಾಮಿ ವೃಷಭಾವತಿ ಚಳುವಳಿಯು ಬೆಂಗಳೂರಿನಲ್ಲಿ ಮತ್ತೆ ಸಹಜವಾಗಿ ಶುದ್ಧ ನೀರುಳ್ಳ ನದಿಯೊಂದನ್ನು ಕಾಣುವ ಜನಸಾಮಾನ್ಯರ ಕನಸನ್ನು ನನಸಾಗಿಸುವದಕ್ಕೆ ನಡೆದಿರುವ ಹೋರಾಟ. ಈ ಹೋರಾಟದ ಹಲವು ಆಯಾಮಗಳೆಂದರೆ: ವೈಜ್ಞಾನಿಕ ಸಂಶೋಧನೆ, ಆಡಳಿತಗಾರರು ಮತ್ತು ಸರ್ಕಾರಗಳಿಗೆ ಜೊತೆಗೆ ಸಮಾಲೋಚನೆ, ಕಾನೂನಾತ್ಮಕ ಪ್ರಯತ್ನ, ನಾಗರಿಕರಿಗೆ ಸಮಸ್ಯೆ ಮತ್ತು ಪರಿಹಾರಗಳ ಅರಿವನ್ನು ಮೂಡಿಸುವುದು ಹಾಗು ಕೆರೆ-ಕಾಡುಗಳ ಸಂರಕ್ಷಣೆ. ನಮಾಮಿ ವೃಷಭಾವತಿ ಸಂಸ್ಥಾನದ ಅಧ್ಯಕ್ಷರಾದ ನಿವೇದಿತ ಸುಂಕದ್ ರವರು ಈ ಚಳುವಳಿಯ ಮುಂಚೂಣಿಯಲ್ಲಿರುವವರು. ರಾಜರಾಜೇಶ್ವರಿನಗರದ ನಿವಾಸಿಗಳ ವೇದಿಕೆಯಾದ 'ಐ -ಕೇರ್ ' ನ ಟ್ರಸ್ಟೀ ಮತ್ತು ತ್ಯಾಜ್ಯ ನಿರ್ವಹಣೆ, ಅರಣ್ಯ ಮತ...

Oct 17, 201952 minSeason 1Ep. 40

ಮದ್ದುಗಳ ಮೂಲ. Medicines for India.

ಔಷಧಿಗಳನ್ನು ಹೇಗೆ ಕಂಡುಹಿಡಿಯುತ್ತಾರೆ? ಒಂದು ಹೊಚ್ಚಹೊಸ ಔಷಧಿಯು ಸಂಶೋಧನೆಯಿಂದ, ಮೆಡಿಕಲ್ ಶಾಪ್ ವರೆಗು ಬರುವಾಗ ಯಾವ ಯಾವ ಹಂತಗಳಿಂದ ಹೋಗುತ್ತದೆ? ಭಾರತದಲ್ಲಿ ಹೊಸ ಔಷಧಿ ಕಂಡುಹಿಡಿಯುವುದು ಹೇಗೆ? ಈ ಸಂಚಿಕೆಯಲ್ಲಿ ನಮ್ಮವರೇ ಆದ ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ಅವರು ಔಷಧಿಗಳ ಬಗ್ಗೆ ಚರ್ಚೆ ಮಾಡುತ್ತಾರೆ. How is a new drug discovered or invented? What does it take for medicine to go from a small idea in a research lab all the way to your local pharmacy? How can we develop new medicines for India and Indian ailments? Our very own Pavan Srinath t...

Oct 03, 20191 hr 2 minSeason 1Ep. 39

ಮಾನವನ ಮೀರಿ. Transhumanism.

ಮಾನವ ತನ್ನ ಶಕ್ತಿ ಮತ್ತು ಯುಕ್ತಿಯನ್ನು ಉಪಯೋಗಿಸಿ ಹಲವಾರು ಸಾಧನೆಗಳನ್ನು ಮಾಡಿದ್ದಾನೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಮಾನವ ತನ್ನ ದೈಹಿಕ, ಮಾನಸಿಕ, ಮತ್ತು ತಾರ್ಕಿಕ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಅಭೂತಪೂರ್ವ ಮಟ್ಟಕ್ಕೆ ಕೊಂಡುಹೋಗಿದ್ದಾನೆ. ಪ್ರಸ್ತುತ ಸ್ಥಿತಿಯಲ್ಲಿ ಈ ನಾನಾ ತರಹದ ಯಂತ್ರಗಳನ್ನು ತನ್ನ ದೇಹದಲ್ಲಿಯೇ ಅಳವಡಿಸಿಕೊಂಡು ಪ್ರಕೃತಿಯ ಸರಹದ್ದನ್ನು ಮೀರಿ ಹೋಗುತ್ತಿದ್ದಾನೆ. ದೀರ್ಘಕಾಲದಲ್ಲಿ ಇದು ನಮ್ಮ ಸಮಾಜವನ್ನು ಹೇಗೆ ರೂಪಗೊಳಿಸಬಹುದು? ಈ ಟ್ರಾನ್ಸ್-ಹ್ಯೂಮನಿಸಮ್ ಎಂಬ ತತ್ವ ಹೇಗೆ ನಮ್ಮ ಭವಿಷ್ಯವನ್ನು ಪರಿವರ್ತಿಸಬಹುದು? ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಪವನ್ ಶ್ರೀನಾಥ್ ಅವರ ಜೊತ...

Sep 26, 20191 hr 1 minSeason 1Ep. 38

ಸಾರ್ವಜನಿಕ ಸಂಪರ್ಕ: Public Relations in India.

ಭಾರತದಲ್ಲಿ ಪಬ್ಲಿಕ್ ರಿಲೇಷನ್ಸ್ ಉದ್ಯಮ ಹೇಗೆ ಮೂಡಿ ಬಂದಿದೆ? ಕಳೆದ ದಶಕಗಳಲ್ಲಿ ಈ ಉದ್ಯಮದಲ್ಲಿ ಬಂದಂತಹ ಪರಿವರ್ತನೆಗಳೇನು? ನಮ್ಮ ಈ ಸಂಚಿಕೆಯಲ್ಲಿ ನರಹರಿ ಕೆ.ಎಸ್. ಅವರು ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ಪಬ್ಲಿಕ್ ರಿಲೇಷನ್ಸ್ ಬಗ್ಗೆ ಮಾತನಾಡುತ್ತಾರೆ. ನರಹರಿ ಅವರು ದ ಪ್ರಾಕ್ಟಿಸ್ ಸಂಸ್ಥೆಯಲ್ಲಿ ಸಲಾಹಗಾರರು ಆಗಿದ್ದರೆ. ಇವರ ಪಬ್ಲಿಕ್ ರಿಲೇಷನ್ಸ್ ಪಯಣವನ್ನು ಎಚ್.ಎಂ.ಟಿ. ಸಂಸ್ಥೆಯಲ್ಲಿ ಆರಂಭಿಸಿ ಹಲವಾರು ಐ.ಟಿ. ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರು NASSCOM ಅಂತಹ ಸಂಸ್ಥೆಗಳ ಜೊತೆ ಕೆಲಸ ಮಾಡಿ, ಹಲವರು ಕಡೆ ಪಿ.ಆರ್. ಬಗ್ಗೆ ಪಾಠ ಕೂಡ ಮಾಡುತ್ತಾರೆ. What is PR or Public Re...

Sep 19, 201956 minSeason 1Ep. 37

(Rebroadcast) ಬೆಂಗಳೂರಿನ ಪ್ರಥಮ ನಾಗರಿಕ. Inscription Stones of Bengaluru.

How old is the human settlement of Bengaluru? How old are the localities of Bengaluru, from Rajajinagar to Indiranagar to Hebbal? The answer may surprise you. This is a rebroadcast of Episode 15 of the Thale-Harate Kannada Podcast. Udaya Kumar PL has a wide-ranging conversation with hosts Pavan Srinath and Ganesh Chakravarthi on Inscription Stones and Bengaluru's history. Udaya Kumar PL started the Inscription Stones of Bangalore group to rescue, revive and rejuvenate the rich written history of...

Sep 12, 20191 hr 12 minSeason 1Ep. 15

ಬೆಂಗಳೂರು ಬಡಾವಣೆ ಕಥೆಗಳು. Bengaluru: Layout by Layout.

1901, ಬೆಂಗಳೂರು ನಗರ 1.5 ಲಕ್ಷದ ನಗರಿ, ಇವತ್ತು ಎಲ್ಲಾ ದಿಕ್ಕಿನಲ್ಲೂ ಬೆಳದಿದೆ. ನಗರದ ಹೊರವಲಯದಲ್ಲಿ ಬಡಾವಣೆ ಮೇಲೆ ಬಡಾವಣೆ ರೂಪಗೊಳ್ಳುತ್ತಿವೆ. ಅಲ್ಲಿಯ ಹಳ್ಳಿಗಳು, ಇದ್ದಂತಹ ಸಣ್ಣ ಸಣ್ಣ ವಿಭಾಗಗಳನ್ನು ಆವರಿಸಿಕೊಂಡು ಬಂದಿದೆ. ಇವುಗಳ ಹಿನ್ನೆಲೆಯ ಬಗ್ಗೆ ಮಾತನಾಡಲು ನಮ್ಮ ಈ ಸಂಚಿಕೆಯಲ್ಲಿ ತೇಜಸ್ವಿ ಉಡುಪ ಅವರು ನಮ್ಮ ಜೊತೆ ಇದ್ದಾರೆ. ತೇಜಸ್ವಿ ಉಡುಪ ಅವರು ಒಬ್ಬ ಟೆಕ್ ಪ್ರೊಫೆಷನಲ್, ಮತ್ತೆ ಹಲವಾರು ಕ್ವಿಜ್ ಸ್ಪರ್ಧೆಗಳಲ್ಲಿ ಭಾಗವಹಿಸುವುದಲ್ಲದೆ, ಕ್ವಿಜ್ ಮಾಸ್ಟರ್ ಕೊಡ ಆಗಿದ್ದರೆ. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಇವರ ಸಂಚಿಕೆ ಕೂಡ ಬರೆಯುತ್ತಾರೆ. The city of Bengaluru has grown from a popula...

Sep 05, 201948 minSeason 1Ep. 36

ಭೌಗೋಳಿಕ ಮಾಹಿತಿ ಮತ್ತು ಅಭಿವೃದ್ಧಿ. GIS and Development.

ಜಿ.ಐ.ಎಸ್. ಅಥವಾ ಭೌಗೋಳಿಕ ಮಾಹಿತಿ ತಂತ್ರಜ್ಞಾನವೆಂದರೆ ಏನು? ಜಿ.ಪಿ.ಎಸ್., ಗೂಗಲ್ ಮ್ಯಾಪ್ ಮತ್ತು ಇತರ ನಕ್ಷೆಗಳ ಹಾಗು ಸಂಚರಣೆ ಸೌಲಭ್ಯಗಳ ಹಿಂದಿರುವ ತಂತ್ರಜ್ಞಾನವೇನು? ಈ ತಂತ್ರಜ್ಞಾನವನ್ನು ನಗರಗಳನ್ನೂ ಯೋಜಿಸುವುದು, ಆಡಳಿತ ಮತ್ತು ಅಭಿವೃದ್ಧಿಗೆ ಹೇಗೆ ವಿನಿಯೋಗಿಸಬಹುದು? ಡಾ. ಹೆಚ್.ಎಸ್. ಸುಧೀರ ರವರು ಪವನ್ ಶ್ರೀನಾಥ್ ರವರೊಂದಿಗೆ ನಮ್ಮ 35ನೇ ಕಂತಿನಲ್ಲಿ ಮಾತನಾಡುತ್ತಾರೆ. ಡಾ. ಹೆಚ್.ಎಸ್. ಸುಧೀರ ರವರು ಐ.ಐ.ಎಸ್.ಸಿ. ಯಲ್ಲಿ ತಮ್ಮ ಪಿ.ಹೆಚ್.ಡಿ. ಪಡೆದ ನಂತರ ತುಮಕೂರಿನ ಹತ್ತಿರದಲ್ಲಿರುವ ಗುಬ್ಬಿಯಲ್ಲಿ ಗುಬ್ಬಿ ಲ್ಯಾಬ್ಸ್ ಸ್ಥಾಪಿಸಿದ್ದಾರೆ. ಗುಬ್ಬಿ ಲ್ಯಾಬ್ಸ್ ನಗರ ಯೋಜನೆ, ಪರಿಸರ ಸಂರಕ್ಷಣೆ ಮತ್ತಿತರ ವಿ...

Aug 29, 20191 hr 9 minSeason 1Ep. 35

ಸಮಾಜ-ಸಂಶೋಧನೆ. Society, Research & Truth.

ಮೈಸೂರು ಸಂಸ್ಥಾನದ ಆಡಳಿತ ಗಾರರ ಮತ್ತು ದೊರೆಗಳ ಅಭಿವೃದ್ಧಿಯ ಕಲ್ಪನೆ ಏನಿತ್ತು? ಭಾರತದ ಸಾಹಿತ್ಯದ ಬೆಳವಣಿಗೆಯಲ್ಲಿ ಅನುವಾದಗಳ ಪಾತ್ರವೇನು? ಪಬ್ಲಿಕ್ ಇಂಟಲೆಕ್ಚು ಯಲ್ ಗಳಿಗೆ ಹೇಗೆ ಅವಕಾಶ ಕಲ್ಪಿಸ ಬೇಕು? ಡಾ. ಚಂದನ್ ಗೌಡ ರವರು ಸೂರ್ಯ ಪ್ರಕಾಶ್ ಬಿ.ಎಸ್. ಮತ್ತು ಪವನ್ ಶ್ರೀನಾಥ್ ರವರ ಜೊತೆ ಮಾತನಾಡುತ್ತಾರೆ. ಚಂದನ್ ರವರು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಸಮಾಜ ಶಾಸ್ತ್ರದ ಪ್ರೂಫೆಸರ್ ಆಗಿದ್ದಾರೆ. ಮೈಸೂರು ಸಂಸ್ಥಾನದ ಬೆಳವಣಿಗೆ ಕುರಿತು ಪಿ.ಎಚ್.ಡಿ. ಮಾಡಿದ್ದಾರೆ. ಯು.ಆರ್. ಅನಂತ ಮೂರ್ತಿ ಮತ್ತು ಪೂರ್ಣ ಚಂದ್ರ ತೇಜಸ್ವಿ ಯವರ ಕೃತಿಗಳನ್ನು ಇಂಗ್ಲೀಷ್ ಗೆ ಅನುವಾದಿಸಿದ್ದಾರೆ. How did Mysore's admini...

Aug 22, 201948 minSeason 1Ep. 34

ರಾಜ್ಯ ಶಾಸ್ತ್ರ. The Science of Politics

ರಾಜ್ಯಶಾಸ್ತ್ರದಲ್ಲಿ ಸಂಶೋಧನೆ ಮಾಡುವಾಗ ಜನ ಏನನ್ನು ಹುಡುಕುತ್ತಾರೆ? ನಮ್ಮ ಈ ಸಂಚಿಕೆಯಲ್ಲಿ ವರುಣ್ ರಾಮಚಂದ್ರ ಪವನ್ ಶ್ರೀನಾಥ್ ಅವರ ಜೊತೆಗೆ, ರಾಜಕೀಯ ಶಾಸ್ತ್ರದ ಬಗ್ಗೆ, ಮತ್ತು ಅವರ ಸಂಶೋಧನೆಯ ಅನುಭವಗಳ ಬಗ್ಗೆ ಮಾತನಾಡುತ್ತಾರೆ. ವರುಣ್ ರಾಮಚಂದ್ರ ಅವರು ರೋಚೆಸ್ಟರ್ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದ ಅಧ್ಯಯನ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಇವರು ತಕ್ಷಶಿಲಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. What is the science in political science? What questions do people ask and answer when researching politics? Varun Ramachandra talks to Pavan Srinath about his life...

Aug 15, 201958 minSeason 1Ep. 33

ಊರು ಕೇರಿ ಮರ. A City and Its Trees

ಬೆಂಗಳೂರು ನಗರ ಉದ್ಯಾನಗಳ ನಗರಿ (ಗಾರ್ಡನ್ ಸಿಟಿ) ಅಂತ ಕರೀತಾರೆ. ಆದರೆ ಒಂದು ಉದ್ಯಾನ ಅಂದರೆ ಏನು? ಮನೆಯೊಳಗಿನ ಗಿಡಗಳೆ, ವಿಶಾಲವಾದ ತೋಟವೆ, ಅಥವಾ ದಟ್ಟವಾದಂತಹ ಮರಗಳ ಸಂಗ್ರಹವೇ? ನಗರದಲ್ಲಿ ಕಡಿದು ಹೋಗುತ್ತಿರುವಂತಹ ಸಾವಿರಾರು ಮರಗಳಿದ್ದರು, ಇವೆಲ್ಲರ ಜೊತೆ ಬೆಂಗಳೂರು ನಗರದ ಪರಸ್ಪರ ಸಂಭಂದವಿದೆ. ನಮ್ಮ ಈ ಸಂಚಿಕೆಯಲ್ಲಿ ಡಾ|| ಹರಿಣಿ ನಾಗೇಂದ್ರ ಅವರು ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ರವರ ಜೊತೆ ಬೆಂಗಳೂರಿನ ಮರಗಳು ಮತ್ತು ಈ ಮರಗಳ ಇತಿಹಾಸ, ಈ ನಗರದ ಕೆರೆಗಳ ಮೇಲೆ ಇರುವಂತಹ ಪ್ರಭಾವದ ಬಗ್ಗೆ ಮಾತನಾಡುತ್ತಾರೆ. ಹರಿಣಿ ಅವರು ಅಝೀಮ್ ಪ್ರೇಂಜಿ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿದ್ದರೆ. ಇವರು ಹಲವಾರು ಪು...

Aug 08, 20191 hr 6 minSeason 1Ep. 32

ದಖನಿ ಕಹಾವತೇ.The Dakhini Language

ದಖನಿ ದಕ್ಷಿಣ ಭಾರತದಲ್ಲಿನ ಒಂದು ಪ್ರಮುಖ ಭಾಷೆ. ನಮಲ್ಲಿ ಹಲವರಿಗೆ ಇದರ ಪರಿಚಯವಿದ್ದರೂ ಇದರ ಹೆಸರು ಮತ್ತು ಪ್ರತ್ಯೇಕತೆಯ ಅರಿವಿಲ್ಲ. ಹೆಚ್ಚಾಗಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು ಮತ್ತು ಮಹಾರಾಷ್ಟ್ರದಲ್ಲಿ ಪ್ರಚಲಿತವಿರುವ ಉರ್ದು ಭಾಷೆಯ ಒಂದು ಪ್ರಭೇದ. ದಖನಿಗೆ 600 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದ್ದು, ತನ್ನದೇ ಆದ ಸಾಹಿತ್ಯವನ್ನೂ ಹೊಂದಿದೆ. ಪ್ರೊಫೆಸರ್ ಝಬಿವುಲ್ಲಾ ಮತ್ತು ಶಾಂತಕುಮಾರ ಪಾಟೀಲ್ ರವರು ನಮ್ಮ 31ನೇ ಕಂತಿನಲ್ಲಿ ದಖನಿ, ಅದರ ಇತಿಹಾಸ, ಉರ್ದು ಭಾಷೆಗಿಂತ ಅದು ಹೇಗೆ ಭಿನ್ನ ಮತ್ತು ಅದರಲ್ಲಿರುವ ಗಾದೆಗಳ ಬಗ್ಗೆ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ರವರ ಜೊತೆ ಮಾತನಾಡುತ್...

Aug 01, 201946 minSeason 1Ep. 31
Hosted on Omny Studio
For the best experience, listen in Metacast app for iOS or Android