Padya Priya - Kannada Poetry Recital - podcast cover

Padya Priya - Kannada Poetry Recital

ಪದ್ಯಪ್ರಿಯpodfollow.com
ಪದ್ಯಪ್ರಿಯ, a Kannada podcast. A poem for everyday. Why recite a poem? ‪ಭಾವಗಳ ಏರುಪೇರಿಗೆ, ಪದ್ಯಗಳು ಮುಲಾಮು! ‬
Last refreshed:
Follow this podcast in the Metacast mobile app to refresh it and see new episodes.
Download Metacast podcast app
Podcasts are better in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episodes

ಹಕ್ಕಿ ಹಾರುತಿದೆ ನೋಡಿದಿರಾ? - ಕವನ ವಾಚನ

ಇರುಳಿರಳಳಿದು ದಿನದಿನ ಬೆಳಗೆ ಸುತ್ತಮುತ್ತಲೂ ಮೇಲಕೆ ಕೆಳಗೆ ಗಾವುದ ಗಾವುದ ಗಾವುದ ಮುಂದಕೆ ಎವೆ ತೆರೆದಿಕ್ಕುವ ಹೊತ್ತಿನ ಒಳಗೆ ಹಕ್ಕಿ ಹಾರುತಿದೆ ನೋಡಿದಿರಾ? - ದ.ರಾ.ಬೇಂದ್ರೆ ಕವನ ಸಂಕಲನ: ಗರಿ (೧೯೩೨) https://archive.org/details/dli.osmania.4412/page/n186/mode/1up https://sallaap.blogspot.com/2009/06/blog-post_24.html?m=1 https://www.youtube.com/watch?v=3ryNlk1gup0 https://www.youtube.com/watch?v=CLhB53mj5Wc...

Jan 31, 20212 min

ನಿಮ್ಮೊಡನಿದ್ದೂ ನಿಮ್ಮಂತಾಗದೆ - ಕವನ ವಾಚನ

ನಿಮ್ಮೊಡನಿದ್ದೂ ನಿಮ್ಮಂತಾಗದೆ ಜಗ್ಗಿದ ಕಡೆ ಬಾಗದೆ ನಾನು ನಾನೇ ಆಗಿ. ಈ ನೆಲದಲ್ಲೆ ಬೇರೊತ್ತಿದ್ದರೂ ಬೀಗಿ ಪರಕೀಯನಾಗಿ ತಲೆಯೆತ್ತುವುದಿದೆ ನೋಡಿ ಅದು ಬಲುಕಷ್ಟದ ಕೆಲಸ. ವೃತ್ತದಲ್ಲಿ ಉನ್ಮತ್ತರಾದ ನಿಮ್ಮ ಕುಡಿತ ಕುಣಿತ ಕೂಟಗಳು ಕೆಣಕಿ ಎಸೆದಿದ್ದರೂ ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ ಸಂಯಮವನ್ನೇ ಪೋಷಿಸಿ ಸಾಕುತ್ತ ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ ಅದು ಬಲು ಕಷ್ಟದ ಕೆಲಸ. ಒಳಗೊಳಗೆ ಬೇರುಕೊಯ್ದು ಲೋಕದೆದುರಲ್ಲಿ ನೀರು ಹೊಯ್ದು ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸಿ ಚಕಾರವೆತ್ತದೆ ನಿಮ್ಮೊಡನೆ ಕಾಫಿಹೀರಿ ಪೇಪರೋದಿ ಹರಟಿ ಬಾಳ ತಳ್ಳುವುದಿದೆ ನೋಡಿ ಅದು ಬಲು ಕಷ್ಟದ ...

Nov 19, 20202 min

ಮಾತು ಮುತ್ತು - ಕವನ ವಾಚನ

ಮಾತು ಬರುವುದು ಎಂದು ಮಾತಾಡುವುದು ಬೇಡ; ಒಂದು ಮಾತಿಗೆ ಎರಡು ಅರ್ಥವುಂಟು. ಎದುರಿಗಿರುವವ ಕೂಡ ಮಾತ ಬಲ್ಲವ ಗೆಳೆಯ; ಬರಿದೆ ಆಡುವ ಮಾತಿಗರ್ಥವಿಲ್ಲ. ಕಡಲ ತಟಿಯಲಿ ತರುಣ ಬಲೆಯ ಬೀಸಿದ್ದಾನೆ; ಮೀನು ಬೇಳುವ ತನಕ ಕಾಯ ಬೇಕು. ಮೀನ ಹೊರೆಯನು ಹೊತು ಮನೆಗೆ ಬಂದಿದ್ದಾನೆ; ಹುಡುಕುತ್ತಲಿಹನವನು ಮುತ್ತಿಗಾಗಿ. ಮಾತು ಮುತ್ತೆನ್ನುವುದು ಬಲ್ಲವರ ಉಕ್ತಿ; ಬಿಡು. ಮೀನಿನಿಂದಲು ನಮಗೆ ಲಾಭವುಂಟು. ಮುತ್ತ ಹುಡುಕಲು ಹೋಗಿ ಮೀನತಂದಿದ್ದಾನೆ. ಅವನ ದುಡಿಮೆಗೆ ಕೂಡ ಅರ್ಥವುಂಟು. ಮನೆಗೆ ಬಂದಾಗವನ ಮಡದಿ ಮೆಲ್ಲನೆ ನಕ್ಕು ಮುತ್ತಕೊಟ್ಟಳು ಅವನ ಹಸಿದ ತುಟಿಗೆ. ಹೃದಯವನು ಕಲಕಿತ್ತು ಅವಳ ಮೌನದ ಮುತ್ತು. ಮುತ್ತು ಸಿಕ್ಕಿತು ಎಂದು ನಕ್ಕವನು. - ...

Nov 18, 20202 min

ರಾಮನ್ ಸತ್ತ ಸುದ್ದಿ - ಕವನ ವಾಚನ

ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ- ಗದೇ ಮಾಮೂಲು ಭಂಗಿ; ಯಾರೂ ದುಃಖಿಸುತ್ತಿಲ್ಲವೆನ್ನಿಸಿ ದುಃಖವಾಯಿತು. ಮೈಲಿಗೆ ಪರಿಚಿತ ಸಿಕ್ಕಿದ್ದು ನವುಲೆ ಗ್ರಾಮದ ಹನುಮ; ಯಾರದೋ ಗದ್ದೆಯಲ್ಲಿ ಗೇಯುವ, ಮೋಟು ಬೀಡಿಯ ಕಿವಿಗೆ ಸಿಕ್ಕಿಸಿಕೊಳ್ಳುವ, ತೊಡೆಯ ಪರಪರ ಕೆರೆದುಕೊಳ್ಳುವ, ಹಳ್ಳಿಯೇ ಹನುಮಿಸಿದಂತೆ ನನಗೆ ಭಾಸವಾಗುವ ವಿಚಿತ್ರ- ಅಭ್ಯಾಸರೂಪಿತ ನಿರ್ದಿಷ್ಟ ಅಳತೆಯ ನಿರ್ವಿವಿಧ ಕೂಗಿಂದ ಹಕ್ಕಿಗಳ ಅಟ್ಟುತಿದ್ದ; ಪಾತಿ ಸರಿಗೊಳಿಸುತಿದ್ದ; ಅಪ್ರಚಲಿತ ಹಳ್ಳಿಪದದ ಅಶಾಸ್ತ್ರೀಯ ಮಟ್ಟನ್ನು ಕುರುಕುತ...

Nov 17, 20205 min

ಎಲ್ಲಿ ಮನಕಳುಕಿರದೋ - ಕವನ ವಾಚನ

ಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೋ ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ ಎಲ್ಲಿ ಮನೆಯೊಕ್ಕಟ್ಟು ಸಂಸಾರ ನೆಲೆಗಟ್ಟು ಧೂಳೊಡೆಯದಿಹುದೋ ತಾನಾನಾಡಿನಲ್ಲಿ ಎಲ್ಲಿ ಸತ್ಯದಗಾಧ ನೆಲೆಯಿಂದ ಸವಿವಾತು ಸಲ್ಲಲಿತ ನಡೆಯಿಂದ ಮುಂಬರಿವುದಲ್ಲಿ ಎಲ್ಲಿ ದಣಿವಿರದ ಸಾಧನೆಯು ಸಫಲತೆಗೆಡೆಗೆ ತೋಳ ನೀಡಿಹುದೋ ತಾನಾನಾಡಿನಲ್ಲಿ ಎಲ್ಲಿ ಸುವಿಚಾರ ನಿರ್ಮಲ ಜಲದೊಸರು ಹರಿದು ಕಾಳರೂಢಿಯ ಮರಳೊಳಿಂಗಿ ಕೆಡದಲ್ಲಿ ಎಲ್ಲಿ ನೀನೆಮ್ಮ ಚಿಂತನವನುದ್ಯಮವ ಸುವಿ- -ಶಾಲತೆಯ ಪೂರ್ಣತೆಗೆ ಮುಂಬರಿಸುವಲ್ಲಿ ಅಲ್ಲಿಯಾ ಬಂಧನ ರಹಿತ ಸುಖದ ಸ್ವರ್ಗದಲಿ ಪಾಲಿಸೈ ಪಿತ ನಮ್ಮ ನಾಡೆಚ್ಚರಿರಲಿ ! - ಕನ್ನಡಾನುವಾದ: ಎಂ.ಎನ್ ಕಾಮತ್ ಎಲ್ಲಿ ಮನವು ನಿರ್ಭಯದಿ ತಲೆಯ...

Nov 16, 20203 min

ಹಣತೆ - ಕವನ ವಾಚನ

ಈ ಮುರುಕು ಗುಡಿಸಲಲಿ ಕಿರಿಹಣತೆ ಬೆಳಗುತಿದೆ ಧ್ಯಾನಸ್ಥಯೋಗಿಯೊಲು ಸ್ತಿಮಿತವಾಗಿ ! ಬಡವರಾತ್ಮದ ಹಣತೆ ಇಂತೆ ಬೆಳಗುವುದಲ್ತೆ ಅಜ್ಞಾತವಾಸದಲಿ ದೀನವಾಗಿ. ಅಲ್ಲಿ ಸೌಧಗಳಲ್ಲಿ ಬೀದಿ ಸಾಲುಗಳಲ್ಲಿ ಮಿಂಚುಸೊಡರುಗಳೆನಿತೊ ಶೋಭಿಸಿರೆ ಕೋಟಿ. ಧ್ಯಾನಗಾಂಭೀರ್ಯದಲಿ ಮತ್ತೆ ಸರಳತೆಯಲ್ಲಿ ಯಾವುದೀ ಬಡಗುಡಿಲ ಸೊಡರುರಿಗೆ ಸಾಟಿ ? ಯಾವ ಚಂದ್ರಾದಿತ್ಯ ತಾರೆಗಳಿಗಿದು ಹೀನ, ಇಲ್ಲಿ ಬೆಳಗುತ್ತಿರುವ ಹಣತೆಗಿಹ ಸ್ಥಾನ ? ಸೂರ್ಯನೋ ಹಿರಿಸೊಡರು ಭುವನ ಭವನಕ್ಕೆ ಹಣತೆಯೋ ಕಿರಿಸೊಡರು ಮಣ್ಣು ಗುಡಿಸಲ್ಗೆ. ಯಾವ ಚಿತ್‌ಶಕ್ತಿಯದು ಸೂರ್ಯನಲಿ ಬೆಳಕಾಗಿ ತಾರೆಯಲಿ ಹೊಳಪಾಗಿ ಬೆಂಕಿಯಲಿ ಬಿಸಿಯಾಗಿ ಪ್ರವಹಿಸಿಹುದೋ, ಆ ದಿವ್ಯಶಕ್ತಿಯೇ ಈ ಮಣ್ಣ ಹಣತೆಯಲಿ ...

Nov 15, 20202 min

ದೀಪಾವಳಿ - ಕವನ ವಾಚನ

ಹೂವು ಬಳ್ಳಿಗೆ ದೀಪ ; ಹಸಿರು ಬಯಲಿಗೆ ದೀಪ ; ಹುಲಿಯ ಕಣ್ಣಿನ ದೀಪ ಕಾಡಿನಲ್ಲಿ ; ಮುತ್ತು ಕಡಲಿಗೆ ದೀಪ, ಹಕ್ಕಿ ಗಾಳಿಗೆ ದೀಪ, ಗ್ರಹತಾರೆಗಳ ದೀಪ ಬಾನಿನಲ್ಲಿ. ಬಲ್ಮೆ ತೋಳಿಗೆ ದೀಪ ; ದುಡಿಮೆ ಬೆವರಿನ ದೀಪ ; ಸಹನೆ ಅನುಭವ - ದೀಪ ಬದುಕಿನಲ್ಲಿ ; ಮುನಿಸು ಒಲವಿಗೆ ದೀಪ ; ಉಣಿಸು ಒಡಲಿಗೆ ದೀಪ ; ಕರುಣೆ ನಂದಾದೀಪ ಲೋಕದಲ್ಲಿ. ತೋರಣದ ತಳಿರಲ್ಲಿ, ಹೊಸಿಲ ಹಣತೆಗಳಲ್ಲಿ, ಬಾಣಬಿರುಸುಗಳಲ್ಲಿ ನಲಿವು ಮೂಡಿ, ಕತ್ತಲೆಯ ಪುಟಗಳಲಿ ಬೆಳಕಿನಕ್ಷರಗಳಲಿ, ದೀಪಗಳ ಸಂದೇಶ ಥಳಥಳಿಸಲಿ ! ಬೆಳಕಿನಸ್ತಿತ್ವವನೆ ಅಣಕಿಸುವ ಕತ್ತಲೆಗೆ ತಕ್ಕ ಉತ್ತರವಲ್ಲಿ ಕೇಳಿಬರಲಿ ! ದೀಪಾವಳಿಯ ಜ್ಯೋತಿ ಅಭಯ ಹಸ್ತವನೆತ್ತಿ ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ !...

Nov 14, 20202 min

ನನ್ನ ಹಣತೆ - ಕವನ ವಾಚನ

ಹಣತೆ ಹಚ್ಚುತ್ತೇನೆ ನಾನೂ, ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ; ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ ಇದರಲ್ಲಿ ಮುಳುಗಿ ಕರಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ, ಹಣತೆ ಹಚ್ಚುತ್ತೇನೆ ನಾನೂ; ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ ಆಸೆಯಿಂದಲ್ಲ. ಕತ್ತಲಿನಿಂದ ಕತ್ತಲೆಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ ಶತಮಾನದಿಂದಲೂ. ನಡು ನಡುವೆ ಒಂದಷ್ಟು ಬೆಳಕು ಬೇಕೆಂದು ಆಗಾಗ ಕಡ್ಡಿ ಗೀಚಿದ್ದೇವೆ, ದೀಪ ಮುಡಿಸಿದ್ದೇವೆ, ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ ಸುಟ್ಟಿದ್ದೇವೆ. "ತಮಸೋ ಮಾ ಜ್ಯೋತಿರ್ಗಮಯಾ" ಎನ್ನುತ್ತ ಬರೀ ...

Nov 13, 20202 min

ನಲವತ್ತೇಳರ ಸ್ವಾತಂತ್ರ್ಯ - ಕವನ ವಾಚನ

ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಟಾಟಾ ಬಿರ್ಲಾ ಜೋಬಿಗೆ ಬಂತು ಜನಗಳ ತಿನ್ನುವ ಬಾಯಿಗೆ ಬಂತು ಕೋಟ್ಯಾಧೀಶನ ಕೋಣೆಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಬಡವನ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ ಗೋಳಿನ ಕಡಲನು ಬತ್ತಿಸಲಿಲ್ಲ ಸಮತೆಯ ಹೂವನು ಅರಳಿಸಲಿಲ್ಲ ಹಣವಂತರು ಕೈಸನ್ನೆ ಮಾಡಿದರೆ ಕತ್ತಲೆಯಲ್ಲಿ ಬೆತ್ತಲೆಯಾಯಿತು ಯಾರೂ ಕಾಣದ ಸ್ವಾತಂತ್ರ್ಯ ನಲವತ್ತೇಳರ ಸ್ವಾತಂತ್ರ್ಯ - ಸಿದ್ದಲಿಂಗಯ್ಯ ಕವನ ಸಂಕಲನ: ಕಪ್ಪು ಕಾಡಿನ ಹಾಡು https://imgur.com/a/bLmx8EJ...

Aug 15, 20202 min

ಪೂವು - ಕವನ ವಾಚನ

ಎಲೆ ಪೂವೆ ಆಲಿಸುವೆ| ನಾ ನಿನ್ನ ಗೀತೆಯನು|| ಎಲೆ ಪೂವೆ ಸೋಲಿಸುವೆ| ನಾ ನಿನ್ನ ಪ್ರೀತಿಯನು|| ಮಜ್ಜನವ ಮಂಜಿನೊಳು| ನೀ ಮಾಡಿ ನಲಿವಾಗ| ಉಜ್ಜುಗದಿ ಸಂಜೆಯೊಳು| ನರರೆಲ್ಲ ಬರುವಾಗ|| ತಳಿರೊಳಗೆ ಕೋಕಿಲೆಯು| ಕೊಳಲನು ನುಡಿವಾಗ| ಎಳೆದಾದ ರವಿಕಿರಣ| ಇಳೆಯನ್ನು ತೊಳೆವಾಗ|| ಕವಿ: ಕುವೆಂಪು Relevant links http://nandondmatu.blogspot.com/2011/07/11.html

Jul 16, 20202 min

ಆನಂದ - ಕವನ ವಾಚನ

ಆನಂದದಿಂ ಜನಿಸಿ, ಆನಂದದೊಳು ಬೆಳೆದು ಆನಂದವನೆ ಸೇರುವೆವು ಕಡೆಯೊಳೆಲೆ ಜೀವ ನೀನೇಕೆ ಅಳುತಿಹೆ! ಮುಂಜಾನೆ ಮಂಜಿನೊಳು ಗಾನವಂ ಪಾಡುವುದು ಕಮನೀಯ ಕೋಕಿಲೆಯು, ಧರಣಿಯಂ ತೇಜದಿಂ ತುಂಬಿಬರುವನು ರವಿಯು, ಹರಿಣಾಂಕ ಬೆಳಗುವನು ತಿಮಿರಿವನು ಹಾಲುಮಯ ಕಿರಣದಿಂ, ಪುಷಗಳು ಕಾನನವ ಸಲೆ ಮುತ್ತಿ ಮೆರೆಯುವುವು ಪಡೆ ಮುದವ ಪ್ರಕೃತಿಯೊಳು, ಎಲೆ ಜೀವ! ಕಾನನದ ರೂಪಿನಿಂ ಪರ್ವತದ ರೂಪಿನಿಂ ಆನಂದ ಮೆರೆಯುತಿದೆ! ಫಲಪುಷ್ಪಬಳ್ಳಿಗಳು, ಗಾನವನು ಸಲೆ ಕೊಡುವ ಸಂಗೀತ ಕೋವಿದನು, ಕವಿವರನು ಎಲ್ಲರುಂ ರೂಪುದಳೆದಾನಂದ! ಭವನವನು ನಾಕವನು ಅತಳಪಾತಾಳವನು ಸವಿಯಾದ ವಿಶ್ವವನೆ ಆನಂದ ತುಂಬಿಹುದು! ಕವಿ: ಕುವೆಂಪು Relevant link: https://shodhganga.in...

Jul 15, 20201 min

ನೆನ್ನೆ - ಕವನ ವಾಚನ

ಹೇಳಿ ಮುಗಿಸುವುದರೊಳಗೆ ನೆನ್ನೆ ನಾಳೆಯಾಗುತ್ತಾ ಇದೆ. ಕವನ ಸಂಕಲನ: ಕುಂಟೋಬಿಲ್ಲೆ ಕವಿ: ರಾಮಾನುಜನ್ https://www.youtube.com/watch?v=rHO_FmCuNHA

Jul 14, 20203 min

ತಿಪ್ಪಾರಳ್ಳಿ - ಕವನ ವಾಚನ

ಬೋರೇಗೌಡನೆಂಬ ಗೌಡ ಬಂದ ಬೆಂಗಳೂರ್ಗೆ, ಬಂದ ಬೆಂಗಳೂರ್ಗೆ. ಬಳೇಪೇಟೆಮೇಲೆ ಹತ್ತಿ ಬರುತಿದ್ದಾಗ, ಗೌಡ ಬರುತಿದ್ದಾಗ, ಪೌಡರ್ ಗೀಡರ್ ಹಚ್ಚಿಕೊಂಡಾ ಮನುಷ್ಯಳೊಬ್ಬ್ಳು, ಕಣ್ಣು ಗಿಣ್ಣು ಮಿಟುಕ್ಸಿ ಗಿಟುಕ್ಸಿ ನೋಡಿ ನಕ್ಕಾಗ. ಆಗ ಬೇಡವ್ವಾ ಬಳೇಪೇಟೇ. ನಮಸ್ಕಾರ ನಗರ್ ಪೇಟೇ. ನಮ್ ತಿಪ್ಪಾರಳ್ಳಿ ಬಲು ದೂರಾ. - ಕೈಲಾಸಂ Lyrics: https://archive.org/details/unset0000unse_u2d0/page/64/mode/2up Song: https://www.youtube.com/watch?v=liFHg7VpVd0 ಬೋರನ ಕುರಿತು: https://www.youtube.com/watch?v=u5_K2Df0wgE Interpretation: https://www.youtube.com/watch?v=UZHDHY3j2To...

Jul 13, 20202 min

ಪ್ರಾರ್ಥನೆ - ಕವನ ವಾಚನ

ಪ್ರಭೂ, ಪರಾಕುಪಂಪನ್ನೊತ್ತಿಯೊತ್ತಿ ನಡ ಬಗ್ಗಿರುವ ಬೊಗಳುಸನ್ನಿಯ ಹೊಗಳುಭಟ್ಟ ಖಂಡಿತ ಅಲ್ಲ; ಬಾಲವಾಡಿಸಿ ಹೊಸೆದು ಹೊಟ್ಟಿ ಡೊಗ್ಗುಸಲಾಮು ಬಗ್ಗಿ ಮಿಡುಕುವ ಸಂಧಿವಾತ ಪೀಡಿತನಲ್ಲ; ತನ್ನ ಮೋಂಬತ್ತಿ ನಂದಿಸಿ ಸಂದಿಬೆಳಕಲ್ಲಿ ಜುಮ್ಮನರಸುವ ಷಂಡ ಜಿಗಣೆಯಲ್ಲ; ಕಾಲಪುಷ್ಟರ ಪೃಷ್ಠಕೊಡ್ಡಿ ಬೆನ್ನ, ಕಠಾರಿ ಒರೆಗೆ ತುರುಕಿರುವ ಹೆಂಬೇಡಿಯಲ್ಲ. - ಗೋಪಾಲಕೃಷ್ಣ ಅಡಿಗ ಕವನ ಸಂಕಲನ : ಭೂಮಿಗೀತ Relevant links Lyrics: http://adiga.angala.in/prathane/ ವಾಚನ ಮತ್ತು ಅರ್ಥ: https://www.youtube.com/watch?v=SWgExLMuPY0 ಅನಂತಮೂರ್ತಿಯವರ ಪದ್ಯದ ನಂಟು: http://adiga.angala.in/galikadeyalu/ ಪದ್ಯ ಸಂಬಂಧಿತ ...

Jul 12, 20205 min

ಹೊಸಹಾದಿ - ಕವನ ವಾಚನ

ಹೊಸಹಾದಿಯನು ಹಿಡಿದು ನಡೆಯಣ್ಣ ಮುಂದೆ ಹೊಸ ಜೀವ ಹೊಸ ಭಾವ ಹೊಸ ವೇಗದಿಂದೆ. ಅಂಜದಿರು ಗೆಳೆಯ ಹೊಸಹಾದಿಯನು ಹಿಡಿಯೆ ಮಂಜುತರ ಸೃಷ್ಟಿಗಾನದಲಿ ಮೈಮೆರೆಯೆ ಎಂಜಲಾಗದ ಮಧುರ ಮಧುರಸವ ಸವಿಯೆ ರಂಜಿಸುವ ಕಾಡುಮೇಡುಗಳನಂಡಲೆಯೆ. - ಗೋಪಾಲಕೃಷ್ಣ ಅಡಿಗ ಕವನ ಸಂಕಲನ: ಭಾವತರಂಗ Relevant links Lyrics: https://archive.org/details/dli.osmania.3244/page/n21/mode/2up Song: https://youtu.be/2rPqyHd7U5k?t=1604 Song: https://www.youtube.com/watch?v=Uq00OFLlfCA...

Jul 11, 20203 min

ದೀನಗಿಂತ ದೇವ ಬಡವ - ಕವನ ವಾಚನ

ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ? ಹರಿಯ ಒಲುಮೆ ಪಡೆದು ಪುಣ್ಯ ಗಳಿಸುತಿರುವೆಯಾ? ಹುಚ್ಚ! ನೀನು ಹಳ್ಳಿಗೋಡು ದೀನ ಜನರ ಪಾಡ ನೋಡು ಇರಲು ಗುಡಿಯು ಇಲ್ಲವಲ್ಲ ಹೊಟ್ಟೆ ತುಂಬ ಅನ್ನವಿಲ್ಲ! ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ? - ದಿನಕರ ದೇಸಾಯಿ Relevant links. Lyrics: https://archive.org/details/in.ernet.dli.2015.362907/page/n109/mode/1up Interpretation: http://sallaap.blogspot.com/2012/05/blog-post.html ಸಂಗೀತ ದಿನಕರ ದೇಸಾಯಿ ರಚನೆಗೆ: https://www.youtube.com/watch?v=G6QZdvZK-DQ ಸಂಗೀತ ಪುತಿನಾ ರಚನೆಗೆ: https://www.youtube.com/watch?v=aGV...

Jul 10, 20201 min

ಒಂದು ಕಾಗದ - ಕವನ ವಾಚನ

ನಿಮ್ಮ ಪತ್ರ ಬಂದು ಸೇರಿ ಎರಡು ಮೂರು ಬಾರಿಯೋದಿ ಎಲ್ಲ ತಿಳಿದೆನು. ನೀವು ನನಗೆ ಗಂಡನಲ್ಲ ನಾನು ನಿಮಗೆ ಹೆಂಡಿರಲ್ಲ ನೀವು ತಿಳಿವುದು. ಕುಂಟು ಕಾಲು ಬಚ್ಚು ಬಾಯಿ ಮೆಳ್ಳುಗಣ್ಣು, ನಿಮ್ಮ ಸೇವೆ ಮಾಡಲಾರೆನು. - ಎಂ ಆರ್ ಶ್ರೀನಿವಾಸಮೂರ್ತಿ Relevant links: Lyrics: https://archive.org/details/in.ernet.dli.2015.362907/page/n115/mode/1up Lyrics: http://chilume.com/?p=10886...

Jul 09, 20202 min

ನಿರ್ವಾಣಷಟ್ಕಂ - ಕವನ ವಾಚನ

ಕವನ ಸಂಕಲನ: ಅಗ್ನಿಹಂಸ ಮೂಲ: ಶ್ರೀ ಆದಿ ಶಂಕರಾಚಾರ್ಯ Translated by: ಕುವೆಂಪು Lyrics: https://archive.org/details/dli.osmania.3379/page/n72/mode/1up English meaning: https://www.youtube.com/watch?v=_AHBSi2_Dpc Translation Isha: https://isha.sadhguru.org/us/en/blog/article/mystic-chants-nirvana-shatakam Translation by Shikaripura Harihareshwara: https://twitter.com/hamsanandi/status/889710261053018112...

Jul 07, 20202 min

ಬಲ್ಲವರದಾರು - ಕವನ ವಾಚನ

ಏನಿಲ್ಲ! ಏನಿಲ್ಲವೆಂಬುದೂ ಅಲ್ಲಿಲ್ಲ! ಏನದೆಂಬುದನರಿವರಾರೊಬ್ಬರೂ ಇಲ್ಲ! ಕರಿದಿಲ್ಲ; ಬಿಳಿದಿಲ್ಲ; ದಿನವಿಲ್ಲ; ನಿಶೆಯಿಲ್ಲ ಅರಿವಿಲ್ಲ; ಮನವಿಲ್ಲ; ಅಳಿವಿಲ್ಲ; ಉಳಿವಿಲ್ಲ; ಶೂನ್ಯಮಲ್ಲವು! ಸರ್ವವೂ ‘ನೇತಿ.. ನೇತಿ’! ಕಾಲದೇಶಗಳಿಲ್ಲ! ಸಾವು ಬಾಳುಗಳಿಲ್ಲ! ನಾನಿಲ್ಲ; ನೀನಿಲ್ಲ; ಸರ್ವವೂ ಮೌನ! ತಿಮಿರ ಬೆಳಕಿನೊಳಡಗಿ, ಬೆಳಕು ತಿಮಿರದೊಳವಿತು, ಭಾವ ಶೂನ್ಯವ ಸೇರಿದುದು ಐಕ್ಯಮಾಗಿ! ರವಿಯಿಲ್ಲ; ಶಶಿಯಿಲ್ಲ; ನಭವಿಲ್ಲ; ಧರೆಯಿಲ್ಲ; ತುದಿಯಿಲ್ಲ; ಮೊದಲಿಲ್ಲ; ಒಂದಿಲ್ಲ; ಎರಡಿಲ್ಲ; ಏನು ಏನಾಗಿರ್ದುದೋ ಬಲ್ಲವರಾರು? ಭಾವದೊಳಭಾವವೋ? ಶೂನ್ಯದೊಳಶೂನ್ಯವೋ? ಅರಿವಿನಾಚೆಯ ತೀರ ಬರಿ ಮೌನ, ಮೌನ! ಜ್ಞಾನತಾನಲ್ಲಿಲ್ಲ; ಜ್ಞೇಯಮದುಮಿಲ್ಲ;...

Jul 06, 20202 min

ಕಟ್ಟುವೆವು ನಾವು - ಕವನ ವಾಚನ

ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು. ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ, ಹರಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ, ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ, ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ, ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು. ನಮ್ಮದೆಯ ಕನಸುಗಳೆ ಕಾಮಧೇನು – ಆದಾವು ಕರೆದಾವು ವಾಂಛಿತವನು. - ಗೋಪಾಲಕೃಷ್ಣ ಅಡಿಗ Relevant Links Lyrics: https://archive.org/details/dli.osmania.4791/page/n15/mode/2up English translation: https://imgur.com/a/157Ecud Chandrashekhar Kedlaya: https://www.youtube.com/watch?v=EdKj_YS1A7U Song: ht...

Jul 05, 20204 min

ಅಲಸನ ಹಾಡು - ಕವನ ವಾಚನ

ಕೆಲಸವಿಲ್ಲದವನು ನಾನು, ಬರಿಯ ಅಲಸನು - ಗೋಪಾಲಕೃಷ್ಣ ಅಡಿಗ Related links Lyrics: https://archive.org/details/dli.osmania.4791/page/n69/mode/2up Interpretation: https://www.youtube.com/watch?v=NBwELnr1zxs

Jul 04, 20202 min

ಮೋಹನ ಮುರಲಿ - ಕವನ ವಾಚನ

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು - ಗೋಪಾಲಕೃಷ್ಣ ಅಡಿಗ ಕವನ ಸಂಕಲನ: ಕಟ್ಟುವೆವು ನಾವು Related links Lyrics: https://archive.org/details/dli.osmania.4791/page/n21/mode/2up Chandrashekhara Kambara: https://www.youtube.com/watch?v=ZGmEmCd4rA0 Chandrashekar Kedilaya: https://www.youtube.com/watch?v=3gW1u70yYck Ratnamala Prakash: https://youtu.be/HC8vkVF_gME?t=893 MD Pallavi: https://www.youtube.com/watch?v=ZNVBZUNTIL0 America America: https://www.youtube.com...

Jul 03, 20202 min

ನೆಹರೂ ನಿವೃತ್ತರಾಗುವುದಿಲ್ಲ - ಕವನ ವಾಚನ

ನೆಹರೂ ನಿವೃತ್ತರಾಗುವುದಿಲ್ಲ ಇನ್ನು ಪರವಾ ಇಲ್ಲ. ಗಾಳಿ ಯಥಾ ಪ್ರಕಾರ ಬೀಸಲು ಬಹುದು. - ಗೋಪಾಲಕೃಷ್ಣ ಅಡಿಗ Lyrics: https://twitter.com/acharya2/status/601429378002628608 English translation: http://komalesha.blogspot.com/2015/07/nehru-wont-retire-gopalakrishna-adiga.html U. R. Ananthamurthy reading the poem: https://www.youtube.com/watch?v=hUYuZLi9k1A H. S. Shivaprakash reading the poem. https://www.youtube.com/watch?v=d36hKQAbrBs...

Jul 02, 20202 min

ಭೃಂಗದ ಬೆನ್ನೇರಿ ಬಂತು - ಕವನ ವಾಚನ

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ ಭೃಂಗದ ಬೆನ್ನೇರಿ ಬಂತು… - ಬೇಂದ್ರೆ Meaning: http://sallaap.blogspot.com/2012/10/blog-post.html http://sallaap.blogspot.com/2008/04/blog-post_11.html Song: https://www.youtube.com/watch?v=9G9qzNKKL1M Poetry recital: https://www.youtube.com/watch?v=d45fy7xHDDI...

Jul 01, 20203 min

ಪಾತರಗಿತ್ತೀ ಪಕ್ಕಾ ನೋಡೀದೇನ ಅಕ್ಕಾ - ಕವನ ವಾಚನ

ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ. ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಸಿಣ ಹಚ್ಚಿ; ಹೊನ್ನ ಚಿಕ್ಕಿ ಚಿಕ್ಕಿ; ಇಟ್ಟು ಬೆಳ್ಳಿ ಅಕ್ಕಿ. - ವರಕವಿ ಡಾ. ದ.ರಾ. ಬೇಂದ್ರೆ (೧೯೩೧ ‘ಗರಿ’ ಕವನ ಸಂಕಲನ) Related readings: Lyrics: http://madhurageete.blogspot.com/2014/03/paataragitti-pakka-nodidena-akka-da-ra.html Song: https://www.youtube.com/watch?v=PIqtUkDnAEk Explanation: https://bit.ly/2CN7R0S English Translation: https://imgur.com/a/viINLS2 ಕವನದಲ್ಲಿ ಬರುವ ವಿವಿಧ ಸಸ್ಯಗಳ ಹೆಸರುಗಳು: http://sallaap.blogspot.com/2010/10/concordance_7563.html h...

Jun 30, 20203 min

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? - ಕವನ ವಾಚನ

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು? ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು? ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು ! ನೀರಡಿಸಿ ಬಂದ ಸೋದರಗೆ ನೀರನು ಕೊಡಲು ಮನುಧರ್ಮಶಾಸ್ತ್ರವೆನಗೊರೆಯಬೇಕೇನು ? ನೊಂದವನ ಕಂಬನಿಯನೊರಸಿ ಸಂತೈಸುವೊಡೆ ಶಾಸ್ತ್ರ ಪ್ರಮಾಣವದಕಿರಲೆ ಬೇಕೇನು ? - ಕುವೆಂಪು Relevant Links Lyrics: https://archive.org/details/in.ernet.dli.2015.362907/page/n91/mode/1up C. Aswath: https://www.youtube.com/watch?v=R_qPwRNYNjQ...

Jun 29, 20202 min

ಜನ್ಮೋತ್ಸವ - ಕವನ ವಾಚನ

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ, ನಿತ್ಯವೂ ಅವತರಿಪ ಸತ್ಯಾವತಾರ. ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ, ಭವಭವದಿ ಭವಿಸಿ, ಓ ಭವವಿದೂರ. ಕವನ ಸಂಕಲನ: ಅಗ್ನಿಹಂಸ. ಬರೆದವರು: ಕುವೆಂಪು. Relevant links. Lyrics: https://archive.org/details/dli.osmania.3379/page/n101/mode/1up C Ashwath: https://www.youtube.com/watch?v=hgSqjgdJprg Interpretation: https://localkebal.com/haadu-jaadu-8/ Interpretation: http://agnihamsa.blogspot.com/2011/08/blog-post.html...

Jun 28, 20201 min

ಪೂಜೆ - ಕವನ ವಾಚನ

ಕವನ ಸಂಕಲನ: ಅಗ್ನಿಹಂಸ ಬರೆದವರು: ಕುವೆಂಪು Relevant links. Lyrics: https://archive.org/details/dli.osmania.3379/page/n83/mode/1up

Jun 27, 20201 min

ಕುರಿಗಳು ಸಾರ್ ಕುರಿಗಳು - ಕವನ ವಾಚನ

ಕುರಿಗಳು ಸಾರ್ ಕುರಿಗಳು - ಕೆ.ಎಸ್. ನಿಸಾರ್ ಅಹಮದ್ ಕುರಿಗಳು ಸಾರ್ ಕುರಿಗಳು; ಸಾಗಿದ್ದೇ ಗುರಿಗಳು. ಮಂದೆಯಲಿ ಒಂದಾಗಿ, ಸ್ವಂತತೆಯೆ ಬಂದಾಗಿ ಇದರ ಬಾಲ ಅದು ಮತ್ತೆ ಅದರ ಬಾಲ ಇದು ಮೂಸಿ ದನಿ ಕುಗ್ಗಿಸಿ, ತಲೆ ತಗ್ಗಿಸಿ ಹುಡುಕಿ ಹುಲ್ಲು ಕಡ್ಡಿ ಮೇವು, ಅಂಡಲೆಯುವ ನಾವು ನೀವು - ಕುರಿಗಳು ಸಾರ್ ಕುರಿಗಳು; ನಮಗೊ ನೂರು ಗುರಿಗಳು. ಎಡ ದಿಕ್ಕಿಗೆ ಬಲ ದಿಕ್ಕಿಗೆ, ಒಮ್ಮೆ ದಿಕ್ಕು ಪಾಲಾಗಿ, ಒಮ್ಮೆ ಅದೂ ಕಳೆದುಕೊಂಡು ತಾಟಸ್ಥ್ಯದಿ ದಿಕ್ಕೆಟ್ಟು ಹೇಗೆ ಹೇಗೊ ಏಗುತಿರುವ, ಬರೀ ಕಿರುಚಿ ರೇಗುತಿರುವ, ನೊಣ ಕೂತರೆ ಬಾಗುತಿರುವ, ತಿನದಿದ್ದರು ತೇಗುತಿರುವ, ಹಿಂದೆ ಬಂದರೊದೆಯದ, ಮುಂದೆ ಬಂದರೆ ಹಾಯದ ಅವರು, ಇವರು ನಾವುಗಳು ಕುರಿಗಳು...

Jun 26, 20206 min
For the best experience, listen in Metacast app for iOS or Android