Kelirondu Katheya  ಕೇಳಿರೊಂದು ಕಥೆಯ - podcast cover

Kelirondu Katheya ಕೇಳಿರೊಂದು ಕಥೆಯ

Kelirondu Katheya Teamwww.kelirondukatheya.org
Kannada Stories for children.
Last refreshed:
Follow this podcast in the Metacast mobile app to refresh it and see new episodes.
Download Metacast podcast app
Podcasts are better in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episodes

Ep104 - ಸಿಂಹವನ್ನು ಸೋಲಿಸಿದ ತೋಳ

ಪಂಚತಂತ್ರದ ಕತೆಗಳಲ್ಲಿ ನರಿ ಬುದ್ದಿವಂತಿಕೆ ಹಾಗೂ ಕಪಟತನಕ್ಕೆ ಹೆಸರುವಾಸಿ . ಆಫ್ರಿಕಾದ ಜಾನಪದ ಕತೆಗಳಲ್ಲಿ ತೋಳಕ್ಕೆ ನರಿಯ ಸ್ಥಾನ . ಈ ಕತೆಯಲ್ಲಿ ಹಿಂದೆ ತೋಳದಿಂದ ಆದ ಮೋಸ ಮರೆಯದ ಸಿಂಹಕ್ಕೆ ತೋಳ ಮತ್ತೆ ಸಿಕ್ಕಿ ಬೀಳುತ್ತದೆ . ತೋಳ ಸಿಂಹದಿಂದ ಪಾರು ಹೇಗೆ ಆಗುತ್ತದೆ ಅನ್ನುವುದನ್ನು ಕೇಳೋಣ .

Oct 04, 20206 minEp. 106

Ep103 - ಸೋರೆಕಾಯಿ ಮಕ್ಕಳು( The Calabash Kids )

ಆಫ್ರಿಕಾದಲ್ಲಿ ತಮಟೆಯ ಆಕಾರದಲ್ಲಿರೋ ಸೋರೆಕಾಯಿ ಸಿಗುತ್ತದೆ . ಸೋರೆಕಾಯಿಯ ಉಪಯೋಗ ಕೂಡ ಹತ್ತು ಹಲವು ರೀತಿಯಲ್ಲಿ . ಅಡುಗೆಯಂತೂ ಹೌದು , ಆದರೆ ಅಲ್ಲಿನ ಜನರು ಸೋರೆಕಾಯಿಯನ್ನು ಒಣಗಿಸಿ , ತಿರುಳು ತೆಗೆದು , ಅದನ್ನು ನೀರು ತುಂಬುವ ಬಿಂದಿಗೆಯಾಗಿ , ಸಾಮಗ್ರಿ ತುಂಬಿಡುವ ಪಾತ್ರೆಯಾಗಿ ಉಪಯೋಗಿಸುತ್ತಾರೆ . ಈ ಸೋರೆಕಾಯಿಯ ಬಗ್ಗೆ ಕೂಡ ಜನಪದ ಕತೆ ಇದೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ವೇ . ಈ ಕತೆಯಲ್ಲಿ , ಮಕ್ಕಳಿಲ್ಲದ ಹೆಣ್ಣು ಮಗಳಿಗೆ ಸೋರೆಕಾಯಿಯ ಬೀಜಗಳಿಂದ ಮಕ್ಕಳು ಹುಟ್ಟಿದ ರೋಚಕ ಕತೆ ಕೇಳೋಣ .

Sep 27, 202010 minEp. 105

Ep102 - ಹಕ್ಕಿಗಳ ರಾಜ ಯಾರು ?

ಹಕ್ಕಿಗಳಿಗೆ ಸಿಂಹ ನಂತೆ ರಾಜ ಒಬ್ಬನಿದ್ದರೆ ಹೇಗಿರ್ತಿತ್ತು ಅನ್ನುವ ಪ್ರಶ್ನೆಯನ್ನು ಕತೆಯ ರೂಪದಲ್ಲಿ ಸೊಗಾಸಾಗಿ ವಿವರಿಸುತ್ತದೆ ಈ ಕತೆ

Sep 20, 20209 minEp. 104

Ep101 - ಕತೆಗಳು ಹೇಗೆ ಹುಟ್ಟಿದವು?

ಆಫ್ರಿಕಾದ ಜಾನಪದ ಕತೆಗಳು ಮನುಷ್ಯ ತನ್ನ ಸುತ್ತ ಮುತ್ತಲಿನ ಪ್ರಾಣಿ , ಪಕ್ಷಿ , ಪರಿಸರವನ್ನು ಅರ್ಥ ಮಾಡಿಕೊಂಡ ಬಗೆಯನ್ನು ತಮ್ಮದೇ ರೀತಿಯಲ್ಲಿ ಹಿಡಿದಿಡುತ್ತವೆ . ಆದರೆ , ಈ ಕತೆಗಳು ಹೇಗೆ ಹುಟ್ಟಿದವು ಅನ್ನುವುದಕ್ಕೂ ಒಂದು ಕತೆ ಇದೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ? ಹೆಚ್ಚು ತಿಳಿಯಲು ಈ ವಾರದ ಕತೆ ಕೇಳಿ .

Sep 13, 202010 minEp. 103

Ep100 - ಅನಾಂಸಿ ಮತ್ತು ಮಾಯಾ ಮಡಿಕೆ

"ಆಫ್ರಿಕಾದ ಜಾನಪದ ಕತೆಗಳು " ಮಾಲಿಕೆಯಲ್ಲಿ ಈ ಕತೆ ಮೊದಲನೆಯದು . ಒಟ್ಟು ನಾವು ಮಾಡಿದ ಕತೆಗಳಲ್ಲಿ ಒಂದು ನೂರನೆಯದು ಕೂಡ . ಮತ್ತೊಂದು ವಿಶೇಶ - ಈ ಕತೆ ಖ್ಯಾತ ಗಾಯಕಿ , ಕಲಾವಿದೆ ಶ್ರೀಮತಿ ಎಂ ಡಿ ಪಲ್ಲವಿ ಅವರ ನಿರೂಪಣೆ . ಅನಾಂಸಿ ಅನ್ನುವ ಜೇಡರ ಹುಳು ಪ್ರಪಂಚದ ವಿವೇಕ , ಬುದ್ದಿ ಶಕ್ತಿಯನ್ನೆಲ್ಲ ಒಟ್ಟು ಮಾಡಿ ಮಡಿಕೆಯಲ್ಲಿ ಕೂಡಿಟ್ಟು ಕೊಂಡಾಗ ಆಗಿದ್ದೇನು ? ಮುಂದಿನದನ್ನು ಪಲ್ಲವಿಯವರ ದನಿಯಲ್ಲೇ ಕೇಳಿ .

Sep 06, 20206 minEp. 102

Ep99 - ನಿದ್ರೆ ಬರದಿದ್ದ ರಾಜ

ಈ ಸಲದ ಕತೆ ಉತ್ತರ ಕರ್ನಾಟಕ ಶೈಲಿಯಲ್ಲಿ ನಿರೂಪಿಸಿರುವ ರಾಜನೊಬ್ಬನ ಕತೆ . ರಾಜನಿಗೆ ಏನು ಮಾಡಿದರೂ ರಾತ್ರಿ ನಿದ್ರೆ ಬರುತ್ತಿರಲಿಲ್ಲ . ಎಷ್ಟೇ ಮದ್ದು , ಗುಳಿಗೆ ತಿಂದರೂ , ವ್ರತ , ದಾನ ಮಾಡಿದರೂ ನಿದ್ರೆ ಮಾತ್ರ ದೂರವೇ ಉಳಿದಿತ್ತು . ಅಷ್ಟೆಲ್ಲ ಕಷ್ಟ ಪಟ್ಟರೂ ಗುಣವಾಗದ ರಾಜನ ನಿದ್ರೆ ಖಾಯಿಲೆಯನ್ನ ಒಬ್ಬ ಸಾಮಾನ್ಯ ಮರ ಕಡಿಯುವವ ಗುಣ ಪಡಿಸಿದ್ದು ಹೇಗೆ . ? "ಮಂಗ್ಯಾ , ಮೊಸಳಿ ಕತಿ " ಆದಮೇಲೆ ಉತ್ತರ ಕರ್ನಾಟಕ ಶೈಲಿಯಲ್ಲಿ ನಿರೂಪಿಸಿರುವ ಎರಡನೇ ಕತೆ ಇದು .

Aug 29, 202013 minEp. 101

Repeat - ಶಮಂತಕ ಮಣಿಯ ಕತೆ

ಈ ಕಂತು ೨೦೧೯ ರ ಗಣೇಶ ಹಬ್ಬದ ಸಮಯದಲ್ಲಿ ಮಾಡಿದ ಕತೆ . ಈ ವರ್ಷದ ಗೌರಿ ಗಣೇಶ ಹಬ್ಬಕ್ಕೆ ಶಮಂತಕ ಮಣಿಯ ಕತೆ .

Aug 22, 202011 minEp. 100

Ep98 - ಸಿಂಹವನ್ನು ಸೋಲಿಸಿದ ಮೊಲದ ಕತೆ

ಏನು ? ಸಿಂಹದಂಥ ಬಲಿಷ್ಠ ಪ್ರಾಣಿ ಎಲ್ಲಿ ? ಮೊಲದಂಥ ಪೀಚು ಪ್ರಾಣಿ ಎಲ್ಲಿ ? ಆದರೂ ಸಿಂಹದ ಶಕ್ತಿಯ ಮುಂದೆ ಮೊಲದ ಯುಕ್ತಿಯೇ ಮೇಲಾಯಿತು . ಒಂದೊಂದು ಸಲ ನಮ್ಮ ಮುಂದೆ ಕೆಟ್ಟದ್ದು ನಡೆಯುತ್ತಿದ್ದರೂ , ಅಸಹಾಯಕರಾಗುವುದು ಸಹಜ . ಅದರಲ್ಲೂ ಎದುರಾಳಿ ಬಲಿಷ್ಠನಾಗಿದ್ದರಂತೂ , ಇನ್ನೇನು ಎಲ್ಲ ಮುಗಿದೇ ಹೋಯಿತು ಅನ್ನಿಸುವಾಗ , ಈ ಕತೆ ಸ್ಫೂರ್ತಿ ಕೊಡುತ್ತದೆ .

Aug 09, 20206 minEp. 99

Ep97 - ಟೋಪಿ ಮಾರುವವ ಹಾಗೂ ಮಂಗಗಳು

" ಟೋಪಿ ಬೇಕಾ ಟೋಪಿ " ಅಂತ ಕೂಗುತ್ತಾ ಬರುವ ಟೋಪಿ ಮಾರುವವನ ಕತೆ ಶಾಲೆಗಳಲ್ಲಿ ನಾಟಕದ ರೂಪದಲ್ಲೋ , ಪಠ್ಯದಲ್ಲೋ ನೋಡದವರು ಕಡಿಮೆ . ಈಗ ಈ ಕತೆಯನ್ನು ಈಗಿನ ಪುಟಾಣಿಗಳೂ ಕೇಳಬಹುದು . ಟೋಪಿ ಮಾರುವವನ ಟೋಪಿಗಳನ್ನು ಚೇಷ್ಟೆ ಮಂಗಗಳು ಹೊತ್ತುಕೊಂಡು ಮರದ ಮೇಲೆ ಹತ್ತಿ ಕುಳಿತಾಗ ಟೋಪಿ ಮಾರುವವ ವಾಪಸ್ ಪಡೆಯೋದಕ್ಕೆ ಏನೆಲ್ಲಾ ಸಾಹಸ ಮಾಡಬೇಕಾಯ್ತು ಅನ್ನುವುದನ್ನು ಈ ಕತೆ ತಿಳಿ ಹಾಸ್ಯದೊಂದಿಗೆ ಹೇಳುತ್ತದೆ .

Aug 02, 20205 minEp. 98

Ep96 - ಬಾಯಿಬಡುಕ ಆಮೆ ಮತ್ತು ಬಾತುಕೋಳಿಗಳು

ಮಾತು ಹಿತ , ಮಿತವಾಗಿರಬೇಕು ಅನ್ನುತ್ತಾರೆ . ಜತೆಗೆ ಸಮಯೋಚಿತವಾಗಿರಬೇಕು ಕೂಡ . ಸಲ್ಲದ ಜಾಗದಲ್ಲಿ ಬೇಡ ಮಾತುಗಳಾಡಿದರೆ ತೊಂದರೆ ತಪ್ಪಿದ್ದಲ್ಲ ಅನ್ನುವುದಕ್ಕೆ ಈ ಕತೆ ಒಳ್ಳೆಯ ಉದಾಹರಣೆ . ಸಹಾಯ ಬೇಕಾಗಿದ್ದ ಆಮೆಯೊಂದಕ್ಕೆ , ಬಾತುಕೋಳಿಗಳು ಸಹಾಯ ಮಾಡುವುದಕ್ಕೆ ಮೊದಲು ಒಂದು ಷರತ್ತು ಹಾಕಿದವು . ಆಮೇಲೆ ಏನಾಯ್ತು ಅನ್ನೋದನ್ನ ಕತೆಯಲ್ಲಿ ಕೇಳಿ .

Jul 25, 20205 minEp. 97

Ep95 - ಪಾರಿವಾಳ ಮತ್ತು ಇರುವೆಯ ಕತೆ

ಉಪಕಾರ ಮಾಡಿದವರನ್ನು ಇಂದಿಗೂ ಮರೆಯಬಾರದು ಅಂತ ಗಾದೆಯ ಹಾಗೆ , ಪುಟ್ಟ ಇರುವೆಯೂ , ದೊಡ್ಡ ಪಾರಿವಾಳವೂ ಒಬ್ಬರಿಗೊಬ್ಬರು ಉಪಕಾರ ಮಾಡಿದ್ದು ಹೇಗೆ . ? ಪುಟ್ಟ ಇರುವೆಯಿಂದ ದೊಡ್ಡ ಪಾರಿವಾಳಕ್ಕೆ ಆದ ಉಪಕಾರವಾದರೂ ಏನು . ? ಬನ್ನಿ, ಈ ಕತೆಯಲ್ಲಿ ತಿಳಿದುಕೊಳ್ಳೋಣ .

Jul 19, 20204 minEp. 96

Ep94 - ಚಿನ್ನದ ಮೊಟ್ಟೆಯ ಕತೆ

ಮೊಟ್ಟೆ ಇಡುವ ಕೋಳಿ , ಬಾತು ಕೋಳಿಯ ಬಗ್ಗೆ ಕೇಳಿರ್ತೀರ , ಆದರೆ ಚಿನ್ನದ ಮೊಟ್ಟಿ ಇಡುವ ಬಾತು ಕೋಳಿಯ ಬಗ್ಗೆ ಕೇಳಿದ್ದೀರಾ ? ಚಿನ್ನದ ಮೊಟ್ಟೆ ಇಡುವ ಬಾತು ಕೋಳಿಯನ್ನು ನೋಡಿ ರೈತನ ಹೆಂಡತಿ ಅಸೆ ಪಟ್ಟಿದ್ದೆ ಬೇರೆ , ಆದರೆ ಆದದ್ದೇ ಬೇರೆ . ದುರಾಸೆ ಪಟ್ಟರೆ ದುಃಖ ತಪ್ಪಿದ್ದಲ್ಲ ಅನ್ನುವುದಕ್ಕೆ ಈ ಕತೆ ಒಳ್ಳೆಯ ಉದಾಹರಣೆ .

Jul 12, 20203 minEp. 95

Ep93 - ಮರ ಕಡಿಯುವವನ ಕತೆ

ಈ ವಾರ ಮತ್ತೊಂದು ಜನಪ್ರಿಯ ಕತೆ " ಮರ ಕಡಿಯುವವನ ಕತೆ ". ಪಂಚತಂತ್ರದ ಕತೆಗಳು ಅಂದ ತಕ್ಷಣ ನೆನಪು ಬರುವ ಕತೆಗಳಲ್ಲಿ ಈ ಕತೆ ಪ್ರಮುಖವಾದದ್ದು . ಪ್ರಾಮಾಣಿಕತೆ , ಸತ್ಯ ನಿಷ್ಠತೆ , ಸರಳತೆ ಅಂತಹ ಗುಣಗಳು ಈ ಕತೆಯಲ್ಲಿ ವಿಶೇಷವಾಗಿ ಕಾಣಸಿಗುತ್ತವೆ .

Jul 05, 20204 minEp. 94

Ep92 – ತೋಳ ಮತ್ತು ಮೇಕೆ ಮರಿಯ ಕತೆ

ದಾರಿ ತಪ್ಪಿಸಿಕೊಂಡ ಮೇಕೆ ಮರಿ ಒಂದು ತೋಳದ ಕೈಗೆ ಸಿಕ್ಕಾಗ , ತುಂಬಾ ಭಯವಾದರೂ , ಸರಿಯಾದ ಸಮಯಕ್ಕೆ ಉಪಾಯವೊಂದನ್ನು ಮಾಡಿ ತೋಳವನ್ನು ಹೆದರಿ ಓಡಿ ಹೋಗುವಂತೆ ಮಾಡ್ತು . ತೋಳ ಹೆದರಿ ಓಡಿದ್ದು ಯಾಕೆ ? ಅಂತ ತಿಳಿಯಲು ಈ ಮುದ್ದಾದ ಕತೆ ಕೇಳಿ

Jun 28, 20204 min

Ep92 - ತೋಳ ಮತ್ತು ಮೇಕೆ ಮರಿಯ ಕತೆ

ದಾರಿ ತಪ್ಪಿಸಿಕೊಂಡ ಮೇಕೆ ಮರಿ ಒಂದು ತೋಳದ ಕೈಗೆ ಸಿಕ್ಕಾಗ , ತುಂಬಾ ಭಯವಾದರೂ , ಸರಿಯಾದ ಸಮಯಕ್ಕೆ ಉಪಾಯವೊಂದನ್ನು ಮಾಡಿ ತೋಳವನ್ನು ಹೆದರಿ ಓಡಿ ಹೋಗುವಂತೆ ಮಾಡ್ತು . ತೋಳ ಹೆದರಿ ಓಡಿದ್ದು ಯಾಕೆ ? ಅಂತ ತಿಳಿಯಲು ಈ ಮುದ್ದಾದ ಕತೆ ಕೇಳಿ .

Jun 28, 20204 minEp. 3

Ep91 - ಆಮೆ ಮತ್ತು ಮೊಲದ ಕತೆ

ಇಂದಿನ ಸಂಚಿಕೆಯಲ್ಲಿ ಜನಪ್ರಿಯ ಕತೆ "ಆಮೆ ಮತ್ತು ಮೊಲ "ದ ಕತೆ . ಪ್ರಪಂಚದ ನಾನಾ ಭಾಷೆಗಳಲ್ಲಿ ಹೇಳಪಡುವ ಈ ಕತೆ ಮಕ್ಕಳಿಂದ ದೊಡ್ಡವರ ತನಕ ಎಲ್ಲರೂ ಕೇಳಿ ಖುಷಿ ಪಡಬಹುದಾದದ್ದು . ನೀವೂ ಕೇಳಿ , ಬೇರೆಯವರಿಗೂ ತಿಳಿಸಿ . ಕತೆಯನ್ನು ಕೇಳುವ ಅನುಭವವನ್ನು ಇನ್ನಷ್ಟು ಹೆಚ್ಚುಗೊಳಿಸಲು , ಈ ಕತೆ ಇರುವ ಪುಸ್ತಕವನ್ನು ಮಕ್ಕಳಿಗೆ ಓದಿ ಹೇಳಿ . ನಂತರ , ನಮ್ಮ ವೆಬ್ಸೈಟ್ ನಲ್ಲಿರುವ ಚಿತ್ರ ಪುಟಗಳನ್ನು ಇಳಿಸಿಕೊಂಡು ಬಣ್ಣ ಹಚ್ಚಿ ಖುಷಿ ಪಡಿ .

Jun 21, 20207 minEp. 3

Ep90-ನರಿ ಮತ್ತು ಡೊಳ್ಳು

ನರಿ ಮತ್ತು ಡೊಳ್ಳು, ಪಂಚತಂತ್ರದ ಜನಪ್ರಿಯ ಕತೆಗಳಲ್ಲೊಂದು . ಕಾಡಿನಲ್ಲಿ ಬರುತ್ತಿದ್ದ ಸದ್ದು ಯಾವುದೋ ಭಯಂಕರ ಪ್ರಾಣಿಯದೇ ಇರಬೇಕು ಅಂತ ಹೆದರಿಕೆಯಿಂದ ಹೆಜ್ಜೆಯಿಡುತ್ತಿದ್ದ ನರಿಗೆ ಡೊಳ್ಳು ನೋಡಿ ಇಷ್ಟೇನಾ ಅಂತ ಅನ್ನಿಸಿತು . ಆದರೆ , ಡೊಳ್ಳು ಬಡಿಯುತ್ತಿದ್ದವರು ಯಾರು ? ತಿಳಿಯಲು ಕತೆ ಕೇಳಿ

Jun 14, 20206 minEp. 1

Ep89 - ಇನಿ ದನಿ - ಭಾಗ ನಾಲ್ಕು

" ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ . ಈ ವಾರದ ಕಾರ್ಯಕ್ರಮದಲ್ಲಿ ಮಕ್ಕಳು "ತಾಯಿ ಶಾರದೆ " ಎಂಬ ಪದ್ಯ , "ಸರಕಾರೀ ಕನ್ನಡ ಶಾಲೆಯ " ಬಗ್ಗೆ ಒಂದು ಪುಟ್ಟ ಕತೆ , ಹಾಗೂ ಕೊನೆಯಲ್ಲಿ ಒಂದು ಸಂಭಾಷಣೆ. "ಅಯ್ಯೋ , ಸರಕಾರೀ ಶಾಲೆಯೇ ? ಅಲ್ಲೇನಿದೆ ? ಅಲ್ಲಿಗೆ ಯಾಕೆ ಮಕ್ಕಳನ್ನು ಕಳಿಸಬೇಕು ?" ಅನ್ನುವ ಈಗಿನ ಪರಿಸ್ಥಿತಿಯಲ್ಲಿ ಈ ಶಾಲೆಯ ಮಕ್ಕಳು ತೋರಿಸಿರುವ ಕ್ರಿಯಾತ್ಮಕ ಶಕ್ತಿ , ಪ್ರತಿಭೆ ಈ ಆಡಿಯೋ ಸರಣಿಯಲ್ಲಿ ಸ್ಪಷ್ಟವಾಗಿ ಕಾಣಿಸಿದೆ . "ಎಲ್ಲಾ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ಇದ್ದರೆ ಎಷ್ಟು ಚಂದ ? " ಅನ್ನುವ ಪ್ರತಿಕ್ರಿಯೆಗಳು ಬಹಳಷ್ಟು ಬಂದಿವೆ . ...

Jun 07, 20208 min

Ep88 - ಇನಿ ದನಿ - ಭಾಗ ಮೂರು

" ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ . ಈ ವಾರದ ಕಾರ್ಯಕ್ರಮದಲ್ಲಿ ಮಕ್ಕಳು "ಮಂಗಳ ಗ್ರಹದಲ್ಲಿ ಪುಟ್ಟಿ " ಎಂಬ ಪದ್ಯ , "ಗಂಧರ್ವ ಸೇನಾ " ಅನ್ನುವ ಹಾಸ್ಯ ನಾಟಕ ನಡೆಸಿಕೊಡುತ್ತಾರೆ . ಇಂಪಾದ ಹಿನ್ನಲೆ ಸಂಗೀತ , ಹಾಸ್ಯಭರಿತ ಸಂಭಾಷಣೆ ಇರುವ ಈ ನಾಟಕ ಹಾಗೂ ಮುದ್ದಾದ ಕಾವ್ಯ ವಾಚನ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ .

May 31, 20209 minEp. 15

Ep87 - ಇನಿ ದನಿ - ಭಾಗ ಎರಡು

" ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ . ಈ ವಾರದ ಕಾರ್ಯಕ್ರಮದಲ್ಲಿ "ಬೆಣ್ಣೆ ಕರಗಿತು " ಅನ್ನುವ ನಾಟಕ ನಡೆಸಿಕೊಡುತ್ತಾರೆ . ಇಂಪಾದ ಹಿನ್ನಲೆ ಸಂಗೀತ , ಹಾಸ್ಯಭರಿತ ಸಂಭಾಷಣೆ ಇರುವ ಈ ನಾಟಕ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ . ಕದ್ದು ತಂದ ಬೆಣ್ಣೆಯ ಸಲುವಾಗಿ ಜಗಳವಾಡುತ್ತಿದ್ದ ಎರಡು ಬೆಕ್ಕುಗಳಿಗೆ ಚಳ್ಳೆಹಣ್ಣು ತಿನಿಸುವ ಯೋಜನೆ ಮಾಡಿದ ಮಂಗಪ್ಪ ತಾನೇ ಪೇಚಿಗೆ ಸಿಕ್ಕಿದ ಈ ಕತೆ ಕೇಳೋಕೆ ಬಲು ಮೋಜು .

May 17, 202011 minEp. 2

Ep86 - ಇನಿ ದನಿ - ಭಾಗ ಒಂದು

" ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ . ಈ ವಾರದ ಕಾರ್ಯಕ್ರಮದಲ್ಲಿ ಚೂಟಿ ಮಕ್ಕಳಿಂದ ಪುಟ್ಟ ಹಾಡು , ಕಥೆ ನಿರೂಪಣೆ , ನಾಟಕ , ಪ್ಲಾಸ್ಟಿಕ್ ಬಳಕೆಯ ಬಗ್ಗೆ ಕೆಲವು ಮಾತುಗಳು. " ಕೇಳಿರೊಂದು ಕಥೆಯ " ತಂಡಕ್ಕೆ ಇದೊಂದು ವಿನೂತನ ಪ್ರಯತ್ನ . ನೀವೂ ಕೇಳಿ , ನಿಮ್ಮ ಮಕ್ಕಳಿಗೂ ಕೇಳಿಸಿ . ಈ ಕಾರ್ಯಕ್ರಮ ಕೇಳಿದ ಮೇಲೆ , ನಿಮ್ಮ ಮಕ್ಕಳೂ "ಅಮ್ಮಾ , ನಾನೂ ಕಥೆ ಹೇಳ್ತೇನೆ " ಅಂತ ಹೇಳಬಹುದು . ನಿಮ್ಮೆಲ್ಲ ಬೆಂಬಲಕ್ಕಾಗಿ ಧನ್ಯವಾದಗಳು .

May 10, 20206 minEp. 1

Ep85 - ವಿಶೇಷ - ಮಕ್ಕಳಿಗಾಗಿ ಡಾ . ರಾಜ್ ಕುಮಾರ್

ಕಳೆದ ಶುಕ್ರವಾರ , ಏಪ್ರಿಲ್ ೨೪ , ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬ . ಸದಭಿರುಚಿಯ ಚಲನಚಿತ್ರಗಳ ಮೂಲಕ ಅಷ್ಟೇ ಅಲ್ಲ , ಕನ್ನಡಿಗರ ದನಿಯಾಗಿ , ಮಾನವತಾವಾದಿಯಾಗಿ ರಾಜ್ ಕುಮಾರ್ ಕನ್ನಡಿಗರಿಗೆ ಚಿರಪರಿಚಯ . 1990 ರಿಂದ ಮುಂಚೆ ಹುಟ್ಟಿದ ಕನ್ನಡಿಗರಿಗೆ ರಾಜ್ ಕುಮಾರ್ ಪರಿಚಯವೇ ಬೇಡ . ಆದರೆ , ಮಕ್ಕಳಿಗೆ ರಾಜಕುಮಾರ್ ಅವರ ಪರಿಚಯ ಮಾಡುವ ಪ್ರಯತ್ನ ಆದಂತಿಲ್ಲ . ರಾಜಕುಮಾರ್ ಹುಟ್ಟುಹಬ್ಬದ ನೆನಪಿನಲ್ಲಿ , " ಮಕ್ಕಳಿಗಾಗಿ ಡಾ ರಾಜಕುಮಾರ್ " , ಅವರ ವ್ಯಕ್ತಿತ್ವದ ಕಿರು ಪರಿಚಯ , ಪುಟ್ಟ ಮಕ್ಕಳಿಗಾಗಿ .

May 02, 202010 minEp. 14

Ep84 - ಭಗೀರಥ ಪ್ರಯತ್ನ

ಭಾರತೀಯ ಸಂಸ್ಕೃತಿಯಲ್ಲಿ ಪ್ರತಿ ಜೀವಿ , ವಸ್ತುವಿಗೂ ಒಂದು ಸ್ವಾರಸ್ಯಕರ ಕತೆಯುಂಟು . ಕಾಡಿನಲ್ಲಿ ಬಿದ್ದಿರುವ ಬಳ್ಳಿಗೊಂದು ಕತೆ , ದೂರದಲ್ಲಿ ಕಾಣುವ ಬಂಡೆಗೂ ಒಂದು ಕತೆ . ಇಷ್ಟಿದ್ದಾಗ , ಭಾರತದ ಪವಿತ್ರ ನದಿ ಗಂಗೆಗೂ ಒಂದು ಕತೆ ಇರಲೇ ಬೇಕಲ್ವೆ ?

Apr 26, 20209 minEp. 13

Ep83 - ಭೀಮ ಹಾಗೂ ಹನುಮಂತ

ಮಹಾಭಾರತದಲ್ಲಿ ಬರುವ ಅಪೂರ್ವ ಪಾತ್ರ ಹನುಮಂತ . ಹನುಮಂತ ಹಾಗೂ ಭೀಮ ಪರಸ್ಪರ ಭೇಟಿಯಾಗಿ , ಹನುಮಂತ ಭೀಮನ ಜತೆ ಕುಚೇಷ್ಟೆ ಮಾಡುವ ಕತೆ ಓದುವುದಕಷ್ಟೇ ಅಲ್ಲ , ಕೇಳುವುದಕ್ಕೂ ಬಹಳ ಚಂದ .

Apr 18, 20209 minEp. 11

Ep82 - ವಿಷ್ಣುವಿನ ಇತರ ಅವತಾರಗಳು

ದಶಾವತಾರ ಸರಣಿಯನ್ನು ಮಾಡ ಹೊರಟಾಗ , ವಿಷ್ಣುವಿನ ಹತ್ತು ಅವತಾರಗಳಷ್ಟೇ ಅಂತ ಅಂದು ಕೊಂಡಿದ್ದೆವು . ಪ್ರತಿ ಅವತಾರದ ಕತೆ ಬರೆಯುತ್ತಾ ಹೋದಾಗ , ತಿಳಿದದ್ದು ವೇದ , ಪುರಾಣಗಳಲ್ಲಿ , ವಿಷ್ಣುವಿನ 35ಕ್ಕೂ ಅವತಾರಗಳಿವೆ ಅಂತ . "ದಶಾವತಾರ " ಸರಣಿಯ ಕೊನೆಯ ಕಂತಿನಲ್ಲಿ , ಇತರ ಕೆಲವು ಅವತಾರಗಳ ಕಿರು ಪರಿಚಯ.

Apr 12, 20206 minEp. 10

Ep81 - ಗೌತಮ ಬುದ್ಧ

ದಶಾವತಾರದ ಸುಮಾರು ಅವತರಣಿಕೆ ( versions) ಗಳಲ್ಲಿ ಬುದ್ಧ ಹತ್ತು ಅವತಾರಗಳಲ್ಲಿ ಒಂದು ಪರಿಗಣಿಸುತ್ತಾರೆ . ಈ ಕಂತಿನಲ್ಲಿ ಗೌತಮ ಬುದ್ಧನ ಕಿರು ಪರಿಚಯ ಹಾಗೂ ಬುದ್ಧ ಹುಡುಗನಾಗಿದ್ದ ಸಮಯದ ಒಂದು ಪುಟ್ಟ ಕತೆಯನ್ನು ಹೇಳಲಾಗಿದೆ. Photo Courtesy - Pari's Photography

Apr 05, 20207 minEp. 9

Ep80 - Special Episode - ಏನಿದು ಕೊರೊನ ವೈರಸ್

A special episode about the mysterious Corona Virus ( COVID19) featuring Dr. Prakash and Dr. Sumana Kabbur , where we answer some questions sent by our young listeners. ಕೊರೊನ ವೈರಸ್ ಬಗ್ಗೆ ನಮ್ಮ ಪುಟಾಣಿ ಕೇಳುಗರು ಕಳಿಸಿದ ಪ್ರಶ್ನೆಗಳಿಗೆ ಈ ಕಂತಿನಲ್ಲಿ ಡಾ . ಪ್ರಕಾಶ್ ಹಾಗೂ ಡಾ . ಸುಮನಾ ಕಬ್ಬೂರ್ ಅವರು ಉತ್ತರಿಸಿದ್ದಾರೆ . ಮನೆಯೊಳಗೆ ಪಾಲಿಸಬಹುದಾದ ಮಾದರಿ ವೇಳಾಪಟ್ಟಿ ಇಲ್ಲಿದೆ . To learn more about the amazing job TrainAndHelp Babies is doing to increase newborn survival rate , visit https://www.trainandhelpbabies.com/ ....

Mar 29, 202013 minEp. 2

Ep79 - ಕೃಷ್ಣಾವತಾರ

" ದಶಾವತಾರ " ಸರಣಿಯ ಎಂಟನೆಯ ಅವತಾರ ಶ್ರೀ ಕೃಷ್ಣನ ಅವತಾರ . ರಾಮ, ಕೃಷ್ಣರ ಕತೆಗಳು ಪ್ರತಿಯೊಬ್ಬರಿಗೂ ಚಿರ ಪರಿಚಿತ . ಕೃಷ್ಣನ ಜೀವನ ಚರಿತ್ರೆಯನ್ನು ಸರಳವಾಗಿ , ಚೊಕ್ಕವಾಗಿ ಈ ಕತೆಯಲ್ಲಿ ಮುಂದಿಡಲಾಗಿದೆ .

Mar 22, 20208 minEp. 8

Ep78 - ರಾಮನ ಅವತಾರ

" ದಶಾವತಾರ " ಸರಣಿಯ ಏಳನೇ ಕಂತು ರಾಮನ ಅವತಾರ . ರಾಮಾಯಣ , ಮನೆ ಮನೆಯ ದಿನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಮಹಾ ಕಾವ್ಯ . ದೇವರ ಮನೆಯ ಪೂಜೆಯಿಂದ ಹಿಡಿದು , ಕುಳಿತಾಗೊಂದು ಸಲ "ರಾಮ ರಾಮ " ಅನ್ನುವ ಅಜ್ಜಿಯರ ತನಕ , ರಾಮ ಸೀತೆಯರು ನಮ್ಮ ಜೀವನದ ಭಾಗವಾಗಿ ಬಿಟ್ಟಿದ್ದಾರೆ . ! ಅಷ್ಟು ದೊಡ್ಡ ಕತೆಯನ್ನು 8 ನಿಮಿಷದಲ್ಲಿ ಸರಳವಾಗಿ ಹೇಳುವ ಪುಟ್ಟ ಪ್ರಯತ್ನ ಈ ಕತೆ .

Mar 14, 20209 minEp. 7

Ep77 - ಪರಶುರಾಮ ಅವತಾರ

" ದಶಾವತಾರ " ಸರಣಿಯಲ್ಲಿ ಆರನೆಯ ಅವತಾರ ಪರಶುರಾಮನ ಅವತಾರ . ಪರಶುರಾಮ ಅತಿ ಪರಾಕ್ರಮಿ . ಬ್ರಾಹ್ಮಣನಾಗಿದ್ದೂ , ಕ್ಷತ್ರಿಯರಿಗೆ ಸಿಂಹ ಸ್ವಪ್ನನಾಗಿದ್ದ. ಪರಶುರಾಮನ ಬಗ್ಗೆ ಸಾಮಾನ್ಯವಾಗಿ ಸಿಗುವ ಕತೆಗಳು ಮಕ್ಕಳಿಗೆ ಸ್ವಲ್ಪ ಹೆಚ್ಚೇ ಹಿಂಸೆ ಅನ್ನಿಸಬಹುದು ಎಂದು , ಪರಶುರಾಮ ಮತ್ತು ಗಣೇಶನನ್ನು ಒಳಗೊಂಡ ಅಪರೂಪದ ಒಂದೆರಡು ಕಥೆಗಳನ್ನು ಸೇರಿಸಿದ್ದೇವೆ . ಕಥೆ ಕೇಳಿ , ನಿಮ್ಮ ಅಭಿಪ್ರಾಯ , ಅನಿಸಿಕೆಗಳನ್ನು kelirondu@gmail.com ಗೆ ಕಳಿಸಿ .

Mar 08, 20209 minEp. 5
For the best experience, listen in Metacast app for iOS or Android