"ದಶಾವತಾರ " ಸರಣಿಯಲ್ಲಿ ೫ನೇ ಅವತಾರ ವಿಷ್ಣು ಕುಳ್ಳ ಬ್ರಾಹ್ಮಣನ ಅವತಾರದಲ್ಲಿ ಬಂದು ಮಹಾ ದಾನವಂತ ಅನ್ನೋ ಅಹಂಕಾರ ದಿಂದ ಬೀಗುತ್ತಿದ್ದ ರಾಕ್ಷಸ ರಾಜ ಬಲಿ ಚಕ್ರವರ್ತಿಯ ಅಹಂಕಾರ ಮುರಿಯುತ್ತಾನೆ . ತಪ್ಪಿನ ಅರಿವಾದ ಬಲಿ ವಿಷ್ಣುವಿನ ಕ್ಷಮೆ ಕೇಳುತ್ತಾನೆ . ಅಹಂಕಾರ ಸಲ್ಲದು ಹಾಗೂ ನಾವು ಎಷ್ಟೇ ದೊಡ್ಡವರಿದ್ದರೂ ತಪ್ಪಾದ ಕೂಡಲೇ ಒಪ್ಪಿಕೊಳ್ಳುವ ದೊಡ್ಡ ಗುಣ ಇರಬೇಕು ಅನ್ನುವ ನೀತಿ ಸಾರುವ ಈ ಕತೆ ದಶಾವತಾರದ ಕತೆಗಳಲ್ಲಿ ವಿಶಿಷ್ಟವಾದದ್ದು .
Mar 01, 2020•11 min•Ep. 5
" ದಶಾವತಾರ " ಸರಣಿಯಲ್ಲಿನಾಲ್ಕನೇ ಅವತಾರ ನರಸಿಂಹಾವತಾರ ಹಿರಣ್ಯಕಶಿಪುವಿನ ಮಗ ಪ್ರಹ್ಲಾದ , ವಿಷ್ಣುವಿನ ಮಹಾ ಭಕ್ತ . ಹಿರಣ್ಯಕಶಿಪು ಎಲ್ಲ ಕಡೆ ತನ್ನನ್ನೇ ಪೂಜೆ ಮಾಡಬೇಕು ಅಂತ ದೇವತೆಗಳನ್ನು , ದೇವರ ಭಕ್ತರನ್ನು ಶಿಕ್ಷೆಗೆ ಗುರಿ ಮಾಡಿದಾಗ ವಿಷ್ಣು ಅರ್ಧ ಸಿಂಹ , ಅರ್ಧ ಮನುಷ್ಯನ ಅವತಾರದಲ್ಲಿ ಬಂದು ರಾಕ್ಷಸನಾದ ಹಿರಣ್ಯಕಶಿಪುವನ್ನ ಸಂಹಾರ ಮಾಡುತ್ತಾನೆ .
Feb 16, 2020•10 min•Ep. 4
" ದಶಾವತಾರ " ಸರಣಿಯಲ್ಲಿ ಮೂರನೇ ಅವತಾರ ವರಾಹಾವತಾರ . ವರಾಹ ಅಂದರೆ ಕಾಡು ಹಂದಿ ಎಂದರ್ಥ . ಇಂಗ್ಲಿಷ್ನಲ್ಲಿ wild boar ಅಂತಲೂ ಕರೆಯುತ್ತಾರೆ . ವೈಕುಂಠದ ದ್ವಾರ ಪಾಲಕರಾದ ಜಯ - ವಿಜಯರು ಭೂಮಿಯ ಮೇಲೆ ಹಿರಣ್ಯಾಕ್ಷ ಹಾಗೂ ಹಿರಣ್ಯಕಶಿಪು ಎಂಬ ರಾಕ್ಷಸರಾಗಿ ಹುಟ್ಟುತ್ತಾರೆ . " ಯಾವುದೇ ಮನುಷ್ಯ , ಪ್ರಾಣಿ , ದೇವತೆ , ರಾಕ್ಷಸನಿಂದ ಸಾವು ಬಾರದಿರಲಿ " ಬ್ರಹ್ಮನ ವಿಚಿತ್ರ ವರದಿಂದ ಹಿರಣ್ಯಾಕ್ಷ ಅಹಂಕಾರದಿಂದ ಸಿಕ್ಕಿದ್ದನ್ನು ದ್ವಂಸ ಮಾಡಿ ಭೂಮಿ ದೇವತೆಯನ್ನು ಪಾತಾಳಕ್ಕೆ ಕರೆದು ಹೋಗಿಬಿಡುತ್ತಾನೆ . ವಿಷ್ಣು ವರಾಹ ಅವತಾರ ಧರಿಸಿ ಭೂಮಿ ದೇವತೆಯನ್ನ ಬಿಡಿಸುತ್ತಾನೆ ....
Feb 09, 2020•11 min•Ep. 3
" ದಶಾವತಾರ " ಸರಣಿಯಲ್ಲಿ ಎರಡನೇ ಅವತಾರ ಕೂರ್ಮಾವತಾರ . ಕೂರ್ಮ ಅಥವಾ ಆಮೆ ಭೂಮಿಯನ್ನು ಬೀಳದಂತೆ ಹಿಡಿದಿದೆ ಎಂಬ ನಂಬಿಕೆ ಹಿಂದೂ , ಬೌದ್ಧ , ಚೀನೀ , ಅಮೆರಿಕಾದ ಇಂಡಿಯನ್ ಸಂಸ್ಕೃತಿಗಳಲ್ಲಿ ಪ್ರಚಲಿತ . ದೇವತೆಗಳಿಗೆ ಸಾವಿಲ್ಲದಂತೆ ಮಾಡುವ "ಅಮೃತ " ಪಡೆಯೋಕೆ ರಾಕ್ಷಸರು , ದೇವತೆಗಳಿಬ್ಬರೂ ಸಮುದ್ರ ಮಂಥನಕ್ಕೆ ನಿಂತಾಗ , ವಿಷ್ಣು ಕೂರ್ಮ ಅಥವಾ ಆಮೆಯ ರೂಪದಲ್ಲಿ ಬಂದು ದೇವತೆಗಳಿಗೆ ಅಮೃತ ಸಿಗುವ ಹಾಗೆ ಮಾಡುತ್ತಾನೆ .
Feb 02, 2020•11 min•Ep. 2
ಭಾರತೀಯ ಸಂಸ್ಕೃತಿಯ ಮಹಾನ್ ಅಸ್ತಿ ನಮ್ಮ ವೇದ-ಪುರಾಣಗಳು . ಅದರಲ್ಲೂ ವಿಷ್ಣುವಿನ ದಶಾವತಾರಗಳು ಕೆಟ್ಟದ್ದನ್ನು ಕೆಡವಿ ಒಳ್ಳೆಯದು ಒಂದಲ್ಲ ಒಂದು ರೂಪದಲ್ಲಿ ಬಂದೆ ಬರುತ್ತದೆ ಎನ್ನುವ ನಂಬಿಕೆಗೆ ಇಂಬು ಕೊಡುತ್ತವೆ . ಮುಂದಿನ ಕೆಲವು ವಾರದಲ್ಲಿ , ಈ ದಶಾವತಾರದ ಕತೆಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತರುವ ಪ್ರಯತ್ನ ನಮ್ಮ ತಂಡ ಮಾಡುತ್ತಿದೆ . ದಶಾವತಾರದ ಮೊದಲನೇ ಅವತಾರವೇ ಮತ್ಸ್ಯಾವತಾರ . ಮನುಷ್ಯ ಪೀಳಿಗೆಯ ಜ್ಞಾನವೆಲ್ಲವೂ ಅಡಗಿದ್ದ ವೇದಗಳನ್ನೇ ಕದಿಯಲು ಹೊರಟಿದ್ದ ಹಯಗ್ರೀವನೆಂಬ ರಾಕ್ಷಸನಿಗೆ ಬುದ್ದಿ ಕಲಿಸಲು ವಿಷ್ಣು ಮೀನಿನ ವೇಷದಲ್ಲಿ ಬಂದ ಎಂದು ಮತ್ಸ್ಯಪುರಾಣ ಹೇಳುತ್ತದೆ . ಮೂಲ: ಅಮರ ಚಿತ್ರಕಥ...
Jan 26, 2020•10 min•Ep. 1
ಮಕ್ಕಳ ಕಲ್ಪನಾಶಕ್ತಿ ಯನ್ನು ಕೆರಳಿಸಲು 20 ಮೋಜಿನ ಪ್ರಶ್ನೆಗಳು ಮಕ್ಕಳನ್ನು ಮಾತಾಡಿಸುವಾಗ , ಯಾವ ಶಾಲೆಗೇ ಹೋಗುತ್ತೀ , ಎಷ್ಟು ಮಾರ್ಕ್ಸ್ ತಗೊಂಡಿದ್ದೀ ಅಂತಹ ಪ್ರಶ್ನೆಗಳು ಸರ್ವೇ ಸಾಮಾನ್ಯ . ಮುಂದಿನ ಸಲ ಮಕ್ಕಳ ಜತೆ ಮಾತಾಡೋ ಅವಕಾಶ ಸಿಕ್ಕಾಗ ಈ ಕೆಳಗಿನ ಪ್ರಶ್ನೆಗಳನ್ನು ಕೇಳೋಕೆ ಪ್ರಯತ್ನ ಮಾಡಿ . ಅವರ ಉತ್ತರಗಳು ಅವರ ಯೋಚನಾ ಲಹರಿ , ವ್ಯಕ್ತಿತ್ವ್ , , ಕುತೂಹಲ, ಆಸಕ್ತಿಗಳನ್ನೂ ಕೂಡ ಬಿಚ್ಚಿಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ , ಪ್ರತಿಯೊಂದು ಮಗುವಿನೊಳಗಿರುವ ವಿಶೇಷತೆಯನ್ನ ಹೊರಗೆ ತರುತ್ತವೆ . ನಿಮ್ಮ ಅನುಭವವನ್ನು ನಮ್ಮೊಡನೆ ಹಂಚಿಕೊಳ್ಳೋಕೆ ಮರೆಯಬೇಡಿ ! ಇನ್ನೂ ಕೆಲವು ಪ್ರಶ್ನೆಗಳು ! ೧. ನಿನಗೆ ಕನಸು ಕಾಣೋದು...
Jan 12, 2020•21 min•Ep. 1
ಈ ಕತೆ ಇಂಡೋನೇಷ್ಯಾ ದೇಶದ ಜಾನಪದ ಕತೆಗಳಿಂದ ಆಯ್ದುಕೊಂಡಿದ್ದು . ಕಳೆದ ಸಲದ “ಸೋಮಾರಿ ಸಿದ್ದ “ ನ ಹಾಗೆ , ಇನ್ನೂಬ್ಬ ಮುಗ್ದ ಮನುಷ್ಯನೊಬ್ಬನ ಕತೆ . ಮನೆಯಲ್ಲಿ ಕಷ್ಟ ಅಂತ ಇದ್ದೊಂದು ಎಮ್ಮೆಯನ್ನ ಮಾರಿ ಬನ್ನಿ ಅಂತ ಅವನ ಹೆಂಡತಿ ಕಳಿಸಿದರೆ , ಎಷ್ಟೆಲ್ಲಾ ಅವಾಂತರ ಮಾಡಿಕೊಂಡು ಬಂದ , ಮತ್ತು ಕೊನೆಯಲ್ಲಿ ಆಗಿದ್ದ ಮೋಸದಿಂದ ಹೇಗೆ ತಪ್ಪಿಸಿಕೊಂಡ ಅನ್ನೋ ಮೋಜಿನ ಕತೆ ಕೇಳೋಣ .
Jan 05, 2020•12 min•Ep. 70
ದಿನವಿಡೀ ನಿದ್ದೆ ಮಾಡುತ್ತಾ ಕಾಲ ಕಳೆಯುತ್ತಿದ್ದ ಸಿದ್ದ ರಾತ್ರೋ ರಾತ್ರಿ ಪ್ರಖ್ಯಾತ ಮಂತ್ರವಾದಿ ಅನ್ನಿಸಿಕೊಂಡು ಬಿಟ್ಟ . ! ತಿಳಿ ಹಾಸ್ಯದಿಂದ ಕೂಡಿದ ಈ ಕತೆ ನಿಮ್ಮನ್ನು ಹಾಗೂ ಮಕ್ಕಳನ್ನು ನಕ್ಕು ನಗಿಸುವುದು ಖಂಡಿತ . ಹಾಗೆ , ಕಥೆಯ ಕೊನೆಯಲ್ಲಿ ಕೇಳಿದ "ಜ್ಞಾನ - ವಿಜ್ಞಾನ - ವಿಸ್ಮಯ " ಅಂಕಣದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿದು ಕಳಿಸೋದನ್ನ ಮರೆಯಬೇಡಿ !
Dec 22, 2019•12 min•Ep. 14
ಕನ್ನಡದಾಗ ಭಾಳ ಉಪ ಭಾಷಾ ಇದ್ರೂ ನಮ್ಮ ಉತ್ತರ ಕರ್ನಾಟಕ ಭಾಷಾದಾಗ ಕಥೆ ಕೇಳೋ ಮಜಾನ ಬ್ಯಾರೆ . ಅದಕ್ಕಾ ಈ ಸಲದ ಕತಿ ಉತ್ತರ ಕರ್ನಾಟಕ ಭಾಷಾದಾಗ ಹೇಳಿ ಬಿಟ್ಟೇವಿ . ಕತಿ ಕೇಳ್ರಿ , ಮತ್ತ ನಿಮ್ಮ ಗೆಳೆಯಂದ್ರಿರಿಗೂ ಹೇಳ್ರಿ . ಹಂಗ ನಿಮಗ ಇನ್ನಷ್ಟು ಉತ್ತರ ಕರ್ನಾಟಕದ ಕತಿಗಳು ಕೇಳ್ಬೇಕು ಅನಸಿದ್ರ , ಯಾವ್ ಕತಿ ಬೇಕು ಅಂತ ಬರೆದು ಕಳಿಸ್ರಿ . ಇದು ನಮ್ಮ ಹೊಸ ಪ್ರಯತ್ನ ,ನಿಮ್ಮ ಅನಿಸಿಕೆಗಳಿಂದ ನಮಗೆ ಈ ತರಹದ ಹೊಸ ಪ್ರಯತ್ನ ಗಳನ್ನ ಮಾಡಲು ಸ್ಪೂರ್ತಿ ಸಿಗುತ್ತದೆ .
Dec 15, 2019•9 min•Ep. 14
ನಾವು ರಜೆಗೆ ಬೇರೆ ಊರಿಗೆ ಹೋಗ ಬೇಕಾದಾಗ ಕಾಡೋ ಚಿಂತೆ "ಮನೆ ಅಷ್ಟು ದಿವಸ ಬೀಗ ಹಾಕಿ ಹೋಗೋದು ಹೇಗಪ್ಪಾ ? " ಅನ್ನೋದು . ಈ ಕತೆಯಲ್ಲೂ ಕೂಡ ವ್ಯಾಪಾರಕ್ಕಾಗಿ ಬೇರೆ ಊರಿಗೆ ಹೊರಟಿದ್ದ ವಿಷ್ಣುವಿಗೂ ಅದೇ ಚಿಂತೆ . ! . ಈ ಸಮಸ್ಯೆಗೆ ವಿಷ್ಣು ಏನು ಪರಿಹಾರ ಹುಡುಕ್ತಾನೆ ಕೇಳೋಣ ? ಜ್ಞಾನ - ವಿಜ್ಞಾನ - ವಿನೋದ : ಮಕ್ಕಳೇ, ಈ ಕತೆಯಲ್ಲಿ ಬಂದಿರೋ ನೇರಳೆ ಮರಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ದೊಡ್ಡ ಸ್ಥಾನ ಇದೆ. ಇಂಗ್ಲಿಷ್ನಲ್ಲಿ Black plum ಅಥವಾ Jamun ಅಂತ ಕೂಡ ಕರೀತಾರೆ.ನೇರಳೆ ಹಣ್ಣು ಸಕ್ಕರೆ ಖಾಯಿಲೆ, ಅಥವಾ Diabetes ನಿಯಂತ್ರಣ ಮಾಡೋಕೆ ಹೇಳಿ ಮಾಡಿಸಿದ್ದು ಅಂತ ವಿಜ್ಞಾನಿಗಳು ಹೇಳ್ತಾರೆ. ನೇರಳೆ ಹಣ್ಣು ತಿನ್ನೋದರಿಂದ...
Dec 08, 2019•10 min•Ep. 12
ನಕ್ಷತ್ರಗಳು ಬಹಳ ಹಿಂದಿನಿಂದಲೂ ಮನುಷ್ಯರನ್ನು ಮೋಡಿ ಮಾಡಿವೆ . ಹೀಗಾಗಿ , ಜನಪದ ದಲ್ಲಿ ಅವುಗಳ ಹುಟ್ಟನ್ನು ವಿವರಿಸೋ ಅನೇಕ ಕತೆಗಳು ಹುಟ್ಟಿಕೊಂಡಿವೆ . ದಕ್ಷಿಣ ಅಮೆರಿಕಾದ ಇಂಕಾ ಜನಾಗದಲ್ಲಿ ಕೂಡ ಈ ಬಗ್ಗೆ ಒಂದು ಆಕರ್ಷಕ ವಿವರಣೆ ಈ ಸಲದ ಕತೆಯಲ್ಲಿ . ಈ ಕತೆಯ ಮೂಲ : https://www.folklore.ee/folklore/vol12/inca.htm https://incadiscover.weebly.com/folk-tales.html ಜ್ಞಾನ - ವಿಜ್ಞಾನ - ವಿನೋದ ಅಂಕಣದ ಪ್ರಶ್ನೆಗಳು : ೧. ಭೂಮಿಯ ಕತೆ Milkyway ಪುಂಜದಲ್ಲಿ ಯಾವ್ಯಾವ ಗ್ರಹಗಳಿವೆ ? ೨. ಆಕಾಶದಲ್ಲಿರುವ ಗ್ರಹಗಳು ಗಾಳಿಯಲ್ಲಿ ತೇಲುತ್ತಿರೋ ರೀತಿ ಕಾಣಿಸುತ್ತವೆ . ಆದರೂ , ಅವು ಕೆಳಗೆ ಬೀಳೋದಿಲ್ಲ ಯ...
Nov 24, 2019•7 min•Ep. 10
ಈ ಸಲದ ಕಥೆ ಜಪಾನ್ ದೇಶದ ಜಾನಪದ ಸಂಗ್ರಹದಿಂದ ಆಯ್ದುಕೊಂಡಿದ್ದು . ಆ ದೇಶದಲ್ಲಿ ಬೆಳೆಯುವ ಚೆಸ್ಟ್ ನಟ್ ಮರ ನೋಡಲು ಅತಿ ಸುಂದರ . ಮನುಷ್ಯರ ಹಾಗೂ ಮರಗಳ ನಡುವಿನ ಸಂಬಂಧವನ್ನು ಮಕ್ಕಳಿಗೆ ನಾಟುವ ಹಾಗೆ ಈ ಕಥೆ ಹಿಡಿದಿಡುತ್ತದೆ . ಈ ವಾರ ಜ್ಞಾನ - ವಿಜ್ಞಾನ -ವಿನೋದ ಅಂಕಣದ ಪ್ರಶ್ನೆಗಳು - ೧. ದೋಣಿಗಳನ್ನು ಮಾಡಲು ಮರ / ಕಟ್ಟಿಗೆಯನ್ನ ಏಕೆ ಉಪಯೋಗಿಸ್ತಾರೆ ? ೨. ದಿನ ನಿತ್ಯದ ಓಡಾಟಕ್ಕೆ ದೋಣಿಗಳನ್ನಷ್ಟೇ ಉಪಯೋಗ ಮಾಡೋ ಊರುಗಳ ಬಗ್ಗೆ ತಿಳಿದುಕೊಳ್ಳಿ . ಗೊತ್ತಾದ ಮೇಲೆ, ನಮಗೆ kelirondu@gmail.com ಗೆ ಬರೆದು ತಿಳಿಸಿ....
Nov 17, 2019•13 min•Ep. 8
ಕಳೆದ ವಾರ ಡಲ್ಲಾಸ್ ನಲ್ಲಿ ನಡೆದ ದೀಪಾವಳಿ ಸಮಾರಂಭದಲ್ಲಿ , "ಕೇಳಿರೊಂದು ಕಥೆಯ " ತಂಡ ಹಿಂದೆ ಪ್ರಕಟಿಸಿದ್ದ " ನಾಸ್ರುದ್ದೀನ್ ಹೊಡ್ಜ ಮತ್ತು ಕಿಕ್ಕಿರಿದ ಮನೆ " ಎಂಬ ಕಥೆಯನ್ನು ನಾಟಕದ ರೂಪದಲ್ಲಿ ಪ್ರದರ್ಶನ ನೀಡಿದ್ದರು . ಆ ನಾಟಕದ ರಿಕಾರ್ಡಿಂಗ್ ಅನ್ನು ನಿಮ್ಮೊಡನೆ ಹಂಚಿಕೊಳ್ತಿದ್ದೇವೆ .
Nov 10, 2019•12 min•Ep. 10
ಆಗಸದಲ್ಲಿ ಹಾರುವ ಪಾರಿವಾಳಕ್ಕೂ , ಬಿಲದಲ್ಲಿರೋ ಪುಟ್ಟ ಇಲಿಗೂ ಎತ್ತಣ ಗೆಳೆತನ ? ಬೇಡನೊಬ್ಬ ಪಾರಿವಾಳಗಳನ್ನು ಬಲೆಯಲ್ಲಿ ಹಿಡಿದಾಗ , ಆ ಪುಟ್ಟ ಇಲಿಯೇ ರಕ್ಷಕನಗುವ ಈ ಕಥೆ , ಪಂಚತಂತ್ರದ ಅತಿ ಜನಪ್ರಿಯ ಕಥೆಗಳಲ್ಲೊಂದು .
Nov 03, 2019•9 min•Ep. 8
ದೀಪಾವಳಿಯ ಶುಭಾಶಯಗಳು ಕೇಳುಗರೆಲ್ಲರಿಗೂ . ವರ್ಷದ ವಿಶೇಷ ಭಾರತೀಯ ಹಬ್ಬಗಳ ಪರಿಚಯ ಕಥೆಗಳ ಮೂಲಕ "ಕೇಳಿರೊಂದು ಕಥೆಯ " ಮಾಡಿಸುತ್ತಿದೆ . ಶಿವರಾತ್ರಿ ಇಂದ ಶುರುವಾಗಿ , ಯುಗಾದಿ , ರಂಜಾನ್ , ಗಣೇಶ ಚತುರ್ಥಿ , ದಸರಾ ಹಬ್ಬಗಳ ನಂತರ ಬರುವುದೇ ದೀಪಾವಳಿ . ಬಹಳಷ್ಟು ಕನ್ನಡಿಗರಿಗೆ , ವರ್ಷದ ಅತಿ ದೊಡ್ಡ ಹಬ್ಬವೂ ಕೂಡ . ದೀಪಾವಳಿಯ ಹಿಂದಿರುವ ಉಪಕಥೆಗಳ ಪರಿಚಯ ಮಾಡಿಸುತ್ತಲೇ ದೀಪಾವಳಿ ಮಹತ್ವ ವಿವರಿಸುವ ಪುಟ್ಟದೊಂದು ಪ್ರಯತ್ನ ಈ ವಾರದ ವಿಶೇಷ ಕಥೆ . Source : Naraka story : https://kathakids.com/mythological-stories-krishna-katha-narakasura-a-diwali-story-cec5714bc363 Bali story : https:...
Oct 27, 2019•6 min•Ep. 5
ಕಳೆದ ವರ್ಷ ಮಾಡಿದ್ದ ಈ ಕಥೆ ನಮ್ಮ ಅತಿ ಜನಪ್ರಿಯ ಕಥೆಗಳಲ್ಲೊಂದು.! ಟೋಪಿಗಳು ಸಾರ್ ಟೋಪಿಗಳು , ಅಂತ ಕೂಗುತ್ತಾ ಹೊರಟಿದ್ದ ಟೋಪಿ ಮಾರುವವನಿಗೆ, ಮರದಲ್ಲಿದ್ದ ಮಂಗಗಳು ತೊಂದರೆ ಕೊಟ್ಟಾಗ, ಟೋಪಿ ಮಾರುವವ ಸಿಟ್ಟಾಗದೆ, ಚಾಣಾಕ್ಷತನದಿಂದ ನಡೆದುಕೊಂಡ ಕಥೆ.
Oct 20, 2019•5 min•Ep. 63
ಜಂಭಕೋರ ದರ್ಜಿ ( ಬಟ್ಟೆ ಹೊಲೆಯುವವನು ) , ಕಲ್ಲಿನ ಕೋಟು ಹೊಲೆಯುವ ರಾಜನ ಸವಾಲನ್ನು ನಡೆಸಿಕೊಟ್ಟದ್ದು ಹೇಗೆ ? ಇರಾಕ್ ದೇಶದ ಜನಪ್ರಿಯ ಜನಪದ ಕಥೆಗಳಲ್ಲಿ ಈ ಕಥೆಯೂ ಒಂದು . Soundtrack: "Odyssey" Kevin MacLeod Licensed under Creative Commons: By Attribution 4.0 http://creativecommons.org/licenses/by/4.0/
Oct 12, 2019•9 min•Ep. 5
ನವರಾತ್ರಿ , ದಸರಾ ಅಂದ ಕೂಡಲೇ ಕನ್ನಡಿಗರಿಗೆ ನೆನಪಾಗುವುದು ಮೈಸೂರು ದಸರಾ ಹಾಗೂ ಅಂಬಾರಿ ಹೊತ್ತ ಆನೆ . ಶಿಷ್ಟರ ದೂಷಣೆ ಮಾಡುವ ದುಷ್ಟರಿಗೆ ಶಿಕ್ಷೆ ತಪ್ಪಿದ್ದಲ್ಲ ಅನ್ನುವ ಸಂದೇಶ ಸಾರುವ ನವರಾತ್ರಿಗೆ ಪುರಾಣದಲ್ಲಿ ಬಹಳಷ್ಟು ಉಪಕಥೆಗಳಿವೆ . ಅವುಗಳಲ್ಲಿ ರಾಮಾಯಣ , ಮಹಾಭಾರತಗಳಿಂದ ಆಯ್ದ ಮೂರು ಜನಪ್ರಿಯ ಕಥೆಗಳನ್ನು ಈ ವಾರ ಕೇಳೋಣ . Picture Credit: https://metrosaga.com/10-key-attractions-of-mysore-dasara/mysuru-dasara-cover/...
Oct 06, 2019•7 min•Ep. 5
ಆಫ್ರಿಕಾದ ಸಲ್ಕಾಟ ಆಮೆಗಳು ( Sulcata Tortoise) ಅತಿ ದೊಡ್ಡ ಆಮೆ ಜಾತಿಗಳಲ್ಲಿ ಒಂದು . ಸಹಾರಾ ಮರಳುಗಾಡಿನಲ್ಲಿ ಬೆಳೆಯುವ ಕುರುಚಲು ಗಿಡ, ಹುಲ್ಲುಗಳನ್ನು ತಿಂದು 3 ಅಡಿಗೂ ಹೆಚ್ಚು ಉದ್ದ , 100 ಕೆಜಿ ಗೂ ಹೆಚ್ಚು ತೂಕ ಇರುತ್ತವೆ . ಸಾಧಾರಣ ನೀರಿನ ಹತ್ತಿರ ಇರುವ ಆಮೆಗಳು ಮರುಭೂಮಿಯ ಹತ್ತಿರ ಹೇಗೆ ಬಂದವು ಅನ್ನುವುದಕ್ಕೆ ನೈಜೀರಿಯಾದ ಬುಡಕಟ್ಟು ಜನರು ಈ ಕಥೆ ಹೇಳುತ್ತಿದ್ದರಂತೆ . ಪ್ರಕೃತಿಯಲ್ಲಿ ಕಾಣ ಸಿಗುವ ಗಿಡ , ಪ್ರಾಣಿ , ಪಕ್ಷಿ , ಕಲ್ಲು , ಗುಡ್ಡ ಹೀಗೆ ಪ್ರತಿಯೊಂದರ ಇರುವಿಕೆಗೂ ಕಥೆಗಳ ಮೂಲಕ ತಮ್ಮದೇ ರೀತಿಯಲ್ಲಿ ವಿವರಣೆ ಹೆಣೆಯುವ ಬುಡಕಟ್ಟು ಜನರ ಕಲ್ಪನೆ ಅದ್ಭುತ ....
Sep 29, 2019•10 min•Ep. 4
ನೀವು ಕೇಳಿದ್ದೆಲ್ಲಾ ಕೊಡೊ ಜಿನೀ ಕತೆ ಕೇಳಿರ್ತೀರಿ . ಆದರೆ , ಈಗಿನ ಅಲೆಕ್ಸಾ , ಗೂಗಲ್ ಹೋಮ್ ತರಹ ಗೊತ್ತಿಲ್ಲದೇ ಇರೋ ರಹಸ್ಯಗಳನ್ನು ನೀವು ಕೇಳದೆಯೇ ಹೇಳುವ ಮಾಯಾ ಶಂಖದ ವಿಚಾರ ಕೇಳಿದ್ದೀರಾ ? ಈ ವಾರದ ಕಥೆಯಲ್ಲಿ , ಅಂತಹ ಶಂಖ ಸಿಕ್ಕ ಮಿದೋರಿ ಅನ್ನೋ ಮೀನುಗಾರ , ಏನೆಲ್ಲಾ ಮಾಡಿದ ಅನ್ನೋ ಕಥೆ ಕೇಳೋಣ ?
Sep 22, 2019•9 min•Ep. 59
ಗಾದೆಗಳು , ನಮ್ಮ ಪೂರ್ವಜರು ಬಿಟ್ಟು ಹೋಗಿರೋ ಅಮೂಲ್ಯ ಆಸ್ತಿ . ಅವುಗಳನ್ನು ನಮ್ಮ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ದಾರಿ ತೋರುಕ ( sign post ) ಗಳಾಗಿ ಉಪಯೋಗಿಸಿಕೊಳ್ಳಬೇಕೇ ವಿನಃ , ಅಕ್ಷರಃ ಪಾಲಿಸಿದರೆ ಕೆಲವು ಸಲ ಅವಾಂತರ ಆಗೋ ಸಂಭವ ಇರುತ್ತದೆ . " ಎಲ್ಲರನ್ನೂ ಒಂದೇ ಥರ ಕಾಣಬೇಕು " ಅನ್ನೋ ಗಾದೆಯನ್ನ ಅಕ್ಷರಶಃ ಪಾಲಿಸಿ ಅವಾಂತರಕ್ಕೆ ಸಿಕ್ಕಿಕೊಂಡ ಋಷಿಯ ಕತೆ ಈ ವಾರದ ವಿಶೇಷ .
Sep 15, 2019•12 min•Ep. 2
" ಕೇಳಿರೊಂದು ಕಥೆಯ " ತಂಡದ ಎರಡನೇ ವರ್ಷದ ಮೊದಲನೇ ಕಥೆ ಆಫ್ರಿಕಾ ಖಂಡದ ಒಂದು ಜನಪ್ರಿಯ ಜಾನಪದ ಪಾತ್ರ ಅನಾಂಸಿ ಅನ್ನೋ ಜೇಡರ ಹುಳುವಿನದ್ದು . ಅನಾನ್ಸಿಯ ಕುರಿತಾದ ಬಹಳಷ್ಟು ಕಥೆಗಳು ಆಫ್ರಿಕಾದ ದೇಶಗಳಲ್ಲಿ ಪ್ರಚಲಿತ ಇವೆ. ಸಾಧಾರಣವಾಗಿ ನೀತಿ ಕಥೆಗಳಲ್ಲಿ ಕಂಡು ಬರುವ ಅನಾಂಸಿ , ಬಹಳ ತುಂಟ ಹುಳು . ಈ ಜೇಡದ ಒಂದು ಕಥೆ "ಮಾತನಾಡುವ ಕಲ್ಲಂಗಡಿ " ಹಣ್ಣಿನ ಬಗ್ಗೆ . ಕಲ್ಲಂಗಡಿ ಹಣ್ಣು ತಿನ್ನೋಕೆ ಹೋಗಿ , ಹಣ್ಣಿನಲ್ಲೇ ಸಿಕ್ಕು , ಮಾತನಾಡುವ ಹಣ್ಣಿನ ಸೋಗು ಹಾಕಿಕೊಂಡು ಆ ರಾಜ್ಯದ ರಾಜನ ವರೆಗೂ ಹೋಗಿ , ಮತ್ತೆ ಆ ತೋಟಕ್ಕೆ ವಾಪಸ್ ಆಗೋ ನಕ್ಕು ನಗಿಸುವ ಈ ಕಥೆ ನೀತಿ ಕಥೆಯೂ ಹೌದು ....
Sep 08, 2019•9 min•Ep. 1
ಕೇಳುಗರೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು . ಗಣೇಶ ಹಬ್ಬ ಅಂದ ಕೂಡಲೇ ಹಲವು ಮನೆಗಳಲ್ಲಿ ಶಮಂತಕ ಮಣಿಯ ಕಥೆ ಕೇಳುವ ಪರಿಪಾಠ ಇದೆ. ಈ ಕಥೆಯನ್ನು ಈಗ ನಮ್ಮ ತಂಡದವರು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಮುದ್ದಾಗಿ ತಿಳಿಸಿಕೊಟ್ಟಿದ್ದಾರೆ . ಕೇಳಿ , ನಿಮ್ಮ ಮನೆಯವರಿಗೂ ಕೇಳಿಸಿ .
Sep 01, 2019•11 min•Ep. 1
Sixth and last episode of award winning biography of the world famous Dasara elephant - Balarama. Narrated by the author D.K Bhaskar, this episode covers these two chapters of the book - ಜಂಬೂ ಸವಾರಿ and ಬಲರಾಮ ಮತ್ತವನ ಮಗ In this episode, Balarama displays his grace and strength by carrying the howdah of Goddess Chamundeshwari during the Dasara procession for the first time. He is adored by millions of watching people. He returns to the camp after the procession and the story moves on to Balarama me...
Aug 17, 2019•28 min•Ep. 8
Fifth episode of award winning biography of the world famous Dasara elephant - Balarama. Narrated by the author D.K Bhaskar, this episode covers these two chapters of the book - ದಸರಾ ತಾಲೀಮು and ಮೈಸೂರಿನತ್ತ ಪಯಣ . In this episode, Balarama gradually adapts to Elephant camp, and starts training for Dasara. He heads towards Mysore and is surprised to see so many people cheering for him. This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) . ಮ...
Aug 10, 2019•23 min•Ep. 8
Fourth episode of award winning biography of the world famous Dasara elephant - Balarama. This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) . Narrated by the author D.K Bhaskar, this episode covers these two chapters of the book - ಬಲರಾಮನ ಹತಾಶೆ and ದ್ರೋಣ , ಕೃಷ್ಣರ ಭೇಟಿ . In this episode, Balarama overcomes his challenges to adapt to Humans and becomes best friends with Sannappa, his trainer. He also meets his friend elephants - Drona an...
Aug 03, 2019•16 min•Ep. 7
Third episode of award winning biography of the world famous Dasara elephant - Balarama. This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) . Narrated by the author D.K Bhaskar, this episode covers these two chapters of the book - ಬಲರಾಮನನ್ನು ಅರಸುತ್ತಾ and ಸೆರೆ ಸಿಕ್ಕ ಬಲರಾಮ . In this episode, Balarama and his cousins lose Chikki elephant. In the sadness, Balarama ventures into Kakanakote forest and is captured by Humans. The episode ends ...
Jul 28, 2019•19 min•Ep. 5
Second episode of award winning biography of the world famous Dasara elephant - Balarama. This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) . Narrated by the author D.K Bhaskar, this episode covers these two chapters of the book - ಭಲೇ ಗಂಡು ಬಲರಾಮ and ಮನುಷ್ಯರು ಮತ್ತು ಖೆಡ್ಡಾ . Follow along as Chikki Elephant explains to Balarama and his counsins about mythological stories about Elephants and continue on to explain about Humans. ಮೈಸೂರು ದಸರ...
Jul 21, 2019•17 min•Ep. 5
First episode of award winning biography of the world famous Dasara elephant - Balarama. This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) . Narrated by the author D.K Bhaskar, this episode covers the first two chapters of the book - ಆನೆ ಧರೆಗಿಳಿದಿದ್ದು and ಚಿಕ್ಕಿಯ ಮನೆಪಾಠ . Follow along as Chikki Elephant explains to Balarama and his friends about a tale about how elephants came to be on earth and continue on to Balarama's naughty behav...
Jul 14, 2019•20 min•Ep. 3
ನಮ್ಮ ಸಂಗ್ರಹದಿಂದ ಆಯ್ದ ಕುತೂಹಲ , ಸಾಹಸಗಳ ಬಗ್ಗೆ ೩ ಕತೆಗಳು ೧. ಸಿಂಹದ ಮೀಸೆ - ಇಥಿಯೋಪಿಯಾದ ಜನಪದ ಕತೆ . ೩. ಕಮೀಲ ಹಾಗೂ ಕಳೆದು ಹೋದ ಸೂರ್ಯ - ದಕ್ಷಿಣ ಅಮೆರಿಕಾದ ಜನಪದ ಕತೆ ೩. ಚಾಕಲೇಟ್ ಕತೆ - ಮತ್ತೊಂದು ದಕ್ಷಿಣ ಅಮೆರಿಕಾದ ಕತೆ .
Jul 06, 2019•24 min•Ep. 3