Kelirondu Katheya  ಕೇಳಿರೊಂದು ಕಥೆಯ - podcast cover

Kelirondu Katheya ಕೇಳಿರೊಂದು ಕಥೆಯ

Kelirondu Katheya Teamwww.kelirondukatheya.org
Kannada Stories for children.
Last refreshed:
Follow this podcast in the Metacast mobile app to refresh it and see new episodes.
Download Metacast podcast app
Podcasts are better in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episodes

Ep131 - ಬಣ್ಣದ ಪ್ರಾಣಿ

ಮಕ್ಕಳೆಂದರೆ ಕುತೂಹಲ , ಕುತೂಹಲ ಅಂದರೆ ಮಕ್ಕಳು . ದುಬಾರಿಯಾದ ಆಟದ ಸಾಮಾನಿರಲಿ , ಮೂಲೆಯಲ್ಲಿ ಬಿದ್ದಿರೋ ಕಲ್ಲಿರಲಿ , ಮಕ್ಕಳಿಗೆ ಎಲ್ಲವೂ ಆಕರ್ಷಕ ಅಂತಲೇ ತೋರುತ್ತದೆ . ಒಮ್ಮೆ , ಶಾಲೆಯಲ್ಲಿ ಆಟ ಆಡ್ತಿದ್ದ ಮಕ್ಕಳಿಗೆ ಒಂದು ವಿಚಿತ್ರ ಪ್ರಾಣಿ ಕಣ್ಣಿಗೆ ಬಿತ್ತು . ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಿದ್ದ ಈ ಪ್ರಾಣಿಯು ಮಕ್ಕಳಿಗೆ ಆಟದ ಸಾಮಾನಿನ ತರಹ ತೋರಿತು . ಪ್ರಾಣಿಯನ್ನು ಮಕ್ಕಳು ಏನು ಮಾಡಿದರು ? ಬನ್ನಿ , ಈ ಕತೆಯಲ್ಲಿ ತಿಳಿಯೋಣ .

Jul 19, 20217 minEp. 136

ಹನುಮಂತನ ಚಿಟಿಕೆ

ಕಥೆಯ ಶೀರ್ಷಿಕೆ ವಿಚಿತ್ರ ಅನ್ನಿಸುತ್ತಾ ? ಹೌದು .. ರಾಮಾಯಣದ ಈ ಅಪರೂಪದ ಕತೆ ಕೇಳೋಕೆ ಬಹು ಮಜಾ . ಜತೆಗೆ , ಹನುಮಂತ ಹಾಗೂ ರಾಮನ ಗೆಳೆತನ ಎಷ್ಟು ಗಾಢವಾಗಿತ್ತು ಅನ್ನುವುದಕ್ಕೆ ಸಾಕ್ಷಿ ಕೂಡ .

Jul 11, 20219 minEp. 135

ಕಾಗೆ ಮರಿ ಹಾಗೂ ಹಂಸದ ಕತೆ

ಕಾಡಿನಲ್ಲಿ ವಾಸ ಆಗಿದ್ದ ಕಾಗೆ ಮರಿಗೆ ನೀರಿನಲ್ಲಿ ಈಜುತ್ತಿದ್ದ ಬೆಳ್ಳಗೆ ಸುಂದರವಾಗಿದ್ದ ಹಂಸವನ್ನ ಕಂಡಾಗ ಒಂಥರಾ ಅಸೂಯೆ ಆಯ್ತು . ಹಾಗೆ , ಸ್ವಲ್ಪ ಭಯ ಕೂಡ ಆಯ್ತು . ತಕ್ಷಣ ಅಮ್ಮನ ಬಳಿ ಹೋಗಿ , ಹೇಳಿದಾಗ , ಅಮ್ಮ ಹೇಳಿದ್ದೇನು ? ಆಗ ಕಾಗೆ ಮರಿಗೆ ಏನನ್ನಿಸಿತು ? ಸಂವಿತ್ ಫೌಂಡೇಶನ್ ಅವರ ಸಹಯೋಗದಲ್ಲಿ ಮಾಡಿದ ಈ ಪುಟ್ಟ ಕತೆ ಹೇಳುವ ನೀತಿ ಮಾತ್ರ ಬಹಳ ದೊಡ್ಡದು .

Jul 04, 20215 minEp. 134

ನೀಲಿ ಮರಿ ಆನೆ - ಗೆಳೆತನದ ಬಗ್ಗೆ ಒಂದು ಕತೆ

ಕಾಡಿನಲ್ಲಿ ಆನೆ ಮರಿ ಒಂದು ಹುಟ್ಟಿತು . ಎಲ್ಲ ರೀತಿಯಲ್ಲೂ ಬೇರೆ ಆನೆಗಳ ಥರಾನೇ ಇದ್ದ ಆನೆ ಮರಿ ನೋಡೋಕೆ ಮಾತ್ರ ನೀಲಿ ಬಣ್ಣ ಇತ್ತು !. ಆ ಬಣ್ಣದ ಜತೆ ಕಾಡಿನಲ್ಲಿ ಬೇರೆ ಮರಿಗಳ ಜತೆ ಬೇರೆಯೋಕೆ ಈ ಆನೆ ಮರಿಗೆ ಸಾಧ್ಯ ಆಯಿತೇ ?

Jun 27, 20219 minEp. 133

ಕೆಂಪು ಕಾರು - ಸೇವಾ ಮನೋಭಾವದ ಬಗ್ಗೆ ಒಂದು ಕತೆ

ರಕ್ಷಿತ್ ಗೆ ಕಾರುಗಳು ಅಂದರೆ ತುಂಬಾ ಇಷ್ಟ. ಒಂದು ದಿವಸ ಅವನ ಅಮ್ಮ ಅವನಿಷ್ಟದ ಕೆಂಪು ಕಾರನ್ನ ಗೊತ್ತಿಲ್ಲದೇ ಬಡ ಮಕ್ಕಳಿಗೆ ದಾನ ಮಾಡಿದಾಗ ರಕ್ಷಿತ್ ಗೆ ಆದ ದುಃಖ ಅಷ್ಟಿಷ್ಟಲ್ಲ . ಆಗ ರಕ್ಷಿತ್ ಏನು ಮಾಡಿದ ? ಬನ್ನಿ ಈ ಕತೆ ಕೇಳಿ ತಿಳಿದುಕೊಳ್ಳೋಣ

Jun 20, 20217 minEp. 132

ರೋಹಿತನ ಸಾಹಸ - ಒಂದು "ಸಾಹಸಮಯ" ಕತೆ

” ಕೇಳಿರೊಂದು ಕಥೆಯ ” ತಂಡ ಬೆಂಗಳೂರಿನ ಸಂವಿತ್ ರಿಸರ್ಚ್ ಫೌಂಡೇಶನ್ ಜತೆ ಸೇರಿ Essential Life Skills ಎಂಬ ಶೀರ್ಷಿಕೆಯಡಿ ಆಡಿಯೋ ಪುಸ್ತಕಗಳನ್ನು ಮಾಡಿದ್ದೆವು . ಆ ಸರಣಿಯಲ್ಲಿ ಆಯ್ದ ಕತೆಗಳಲ್ಲಿ ಈ ವಾರದ ಕತೆ “ರೋಹಿತನ ಸಾಹಸ ” . ಹೊರಗೆ ಜೋರಾಗಿ ಬೀಳುತ್ತಿದ್ದ ಮಳೆಯಲ್ಲಿ ಯಾವುದೋ ಪ್ರಾಣಿ ಕೂಗುವ ಸದ್ದು ಕೇಳಿಸ್ತು . ಮನೆಯಲ್ಲಿ ಬೇಜಾರು ಮಾಡಿಕೊಂಡು ಕುಳಿತಿದ್ದ ರೋಹಿತ್ ಆಗ ಏನು ಮಾಡಿದ ? ಕೇಳಿ ಈ ರೋಚಕ ಕಥೆ

Jun 06, 20216 minEp. 131

ಹೂದಾನಿ - ಧೈರ್ಯದ ಬಗ್ಗೆ ಒಂದು ಕತೆ

" ಕೇಳಿರೊಂದು ಕಥೆಯ " ತಂಡ ಬೆಂಗಳೂರಿನ ಸಂವಿತ್ ರಿಸರ್ಚ್ ಫೌಂಡೇಶನ್ ಜತೆ ಸೇರಿ Essential Life Skills ಎಂಬ ಶೀರ್ಷಿಕೆಯಡಿ ಆಡಿಯೋ ಪುಸ್ತಕಗಳನ್ನು ಮಾಡಿದ್ದೆವು . ಆ ಸರಣಿಯಲ್ಲಿ ಆಯ್ದ ಕತೆಗಳಲ್ಲಿ ಈ ವಾರದ ಕತೆ "ಹೂದಾನಿ " . ತೇಜಸ್ , ಅಂಕಿತ್ ಹಾಗೂ ದಿವ್ಯ ಮನೆಯಲ್ಲಿ ಆಟ ಆಡ್ತಿದ್ದಾಗ ಮನೆಯಲ್ಲಿದ್ದ ಹೂದಾನಿ ( Flower Vase ) ಬಿದ್ಧು ಹೋಗತ್ತೆ . ಆಗ , ಆ ಮಕ್ಕಳೇನು ಮಾಡಿದರು . ಕೇಳಿ ಈ ಕುತೂಹಲಕಾರಿ ಕಥೆ .

May 30, 20216 minEp. 130

[summer of stories] - ಒಂಟೆಯ ಬಗ್ಗೆ ಮೂರು ವಿಷಯಗಳು

ಮರಳುಗಾಡಿನಲ್ಲಿ ವಾಸ ಮಾಡೋ ಒಂಟೆ ಅಸಾಮಾನ್ಯ ಪ್ರಾಣಿ . ದಿನಗಟ್ಟಲೆ ನೀರಿಲ್ಲದೆ ಬಿಸಿಲಿನಲ್ಲಿ ಇರುವ ಶಕ್ತಿ ಇರುವ ಈ ಪ್ರಾಣಿಯ ಬಗ್ಗೆ ನಮ್ಮ ಪುಟಾಣಿ ಕೇಳಿಗಾರ್ತಿ ಪ್ರಖ್ಯಾ ಇನ್ನಷ್ಟು ವಿಷಯಗಳನ್ನು ಕಥೆಯ ರೂಪದಲ್ಲಿ ನಿರೂಪಿಸಿದ್ದಾಳೆ .

May 15, 20212 minEp. 129

[summerofstories] - Tanay narrating ಮಿಸಾಕೋ ಮತ್ತು ಓನಿ

4 ವರ್ಷದ ಕೇಳುಗ ತನಯ್ ತನ್ನ ಮುದ್ದಾದ ದನಿಯಲ್ಲಿ ನಿರೂಪಿಸಿರುವ "ಮಿಸಾಕೊ ಮತ್ತು ಓನಿ " " ಕತೆ . ಇದರ ಮೂಲ ಕಥೆ ಇಲ್ಲಿ ಕೇಳಬಹುದು - https://kelirondukatheya.org/misako-and-oni/

May 09, 20216 minEp. 126

[summer of stories] - capseller, the monkeys and some music !

We get a lot of submissions from our listeners, each of which is special because they took the time to share their special talent. Once in a while, we get something so unique, it stays with us a long time. 6-year-old Srishti and her mother have collaborated to make this story. While the story narration is very rhythmic and almost feels like song, the background effects with Veena make the effort extra special. Thank you Shruthi avare and also to little Srishti.

Apr 16, 20213 minEp. 122

[summer of stories] - Rooster Raga

3 ವರ್ಷದ ವಿಹಾ ( Viha Nithundila ) ನಿರೂಪಿಸಿರುವ ". Rooster Raga ಅನ್ನುವ ಮುದ್ದಾದ ಕತೆ . ಕತೆಯ ಜತೆ ತಂದೆ ತಾಯಿಗಳು ಕೊಟ್ಟಿರುವ Background ಸಂಗೀತ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ .

Apr 10, 20214 minEp. 121

Ep117 - [ವ್ಯಕ್ತಿ ಪರಿಚಯ ] –ಬಿ ಪಿ ದಾಕ್ಷಾಯಿಣಿ

ಈ ಸಲದ ವಿಶೇಷ ವ್ಯಕ್ತಿ , ಕನ್ನಡತಿ , ಬಾಹ್ಯಾಕಾಶ ವಿಜ್ಞಾನಿ ಶ್ರೀಮತಿ ಬಿ. ಪಿ . ದಾಕ್ಷಾಯಿಣಿ . ಮಂಗಳ ಗ್ರಹದ ಬಗ್ಗೆ ಸಂಶೋಧನೆ ಮಾಡಲು 2014ರಲ್ಲಿ ಭಾರತದ ವಿಜ್ಞಾನಿಗಳು ತಯಾರಿಸಿ, ಹಾರಿಸಿದ ಉಪಗ್ರಹದ ಹೆಸರು "ಮಂಗಳಯಾನ". ಈ ಮಹತ್ಸಾಧನೆಯ ಹಿಂದೆ ಇದ್ದ ಪ್ರಮುಖ ವಿಜ್ಞಾನಿಗಳಲ್ಲಿ ಶ್ರೀಮತಿ . ಬಿ ಪಿ ದಾಕ್ಷಾಯಿಣಿ ಅವರು ಕೂಡ ಒಬ್ಬರು . ಈ ಕಂತಿನ ಇನ್ನೊಂದು ವಿಶೇಷ ಅಂದರೆ , ದಾಕ್ಷಾಯಿಣಿ ಅವರ ಜತೆ ಮಾತನಾಡುವ ಅವಕಾಶ ಸಿಕ್ಕಿದ್ದು . ಅವರ ದನಿಯಲ್ಲಿ , ಅವರ ಬಾಲ್ಯ , ಓದು , ನೌಕರಿ , ಅವರ ಹವ್ಯಾಸಗಳು ಇವೆಲ್ಲದರ ಬಗ್ಗೆ ತಿಳಿಯುವ ಅವಕಾಶ ಸಿಕ್ಕಿದ್ದು ಸಂತಸದ ಸಂಗತಿ . ಅಶ್ವಿನಿ ಅವರ ದನಿಯಲ್ಲಿ ಮೂಡಿರುವ ಈ ಕಂತಿನಲ್ಲಿ...

Mar 28, 202113 minEp. 120

Ep115 - [ ವ್ಯಕ್ತಿ ಪರಿಚಯ ] - ಹೆಲೆನ್ ಕೆಲ್ಲೆರ್

"ವ್ಯಕ್ತಿ ಪರಿಚಯ " ಸರಣಿಯಲ್ಲಿ ಈ ಸಲದ ಪರಿಚಯ "ಹೆಲೆನ್ ಕೆಲ್ಲೆರ್ ". ಹೆಲೆನ್ ಕೆಲ್ಲೆರ್ , ಅತಿ ವಿಶಿಷ್ಟ ಮಹಿಳೆ . ಕಣ್ಣು , ಕಿವಿ ಕೇಳದೆ ಇದ್ದರೂ ಬಾಯಿ , ಹಾಗೂ ಸ್ಪರ್ಶದ ( Touch ) ಸಹಾಯದಿಂದ ಕಾಲೇಜು ಶಿಕ್ಷಣ ಪಡೆದವರು . ನಂತರ , ಪ್ರಪಂಚದಾದ್ಯಂತ ಲಕ್ಷಾಂತರ ಅಂಗವಿಕಲರಿಗೆ ಸ್ಪೂರ್ತಿಯಾಗಿ ನಿಂತವರು . ಇವರ ಜೀವನದ ರೋಚಕ ಕತೆ , ಈ ಸಲ "ಕೇಳಿರೊಂದು ಕತೆಯಾ " ದಲ್ಲಿ .

Mar 07, 20218 minEp. 119

Ep114 - [ ವ್ಯಕ್ತಿ ಪರಿಚಯ ] - ಅನಂತ್ ಪೈ

" ವ್ಯಕ್ತಿ ಪರಿಚಯ " ಸರಣಿಯಲ್ಲಿ ಮುಂದುವರೆಯುತ್ತಾ ಈ ಸಲ ಕನ್ನಡಿಗ ಅನಂತ್ ಪೈ ಅವರ ಬಗ್ಗೆ ತಿಳಿದುಕೊಳ್ತಿದ್ದೇವೆ . ಭಾರತೀಯ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ಸ್ವಲ್ಪ ಕೊರತೆಯೇ . ಅದರಲ್ಲೂ ಪುರಾಣ ಕತೆಗಳನ್ನು ಬಿಟ್ಟರೆ , ಆಧುನಿಕ ಸಾಹಿತ್ಯದಲ್ಲಿ Easy Reading ಆಗಿರುವ ಮಕ್ಕಳ ಸಾಹಿತ್ಯ ಅತಿ ಕಡಿಮೆ ಅಂತಲೇ ಹೇಳಬೇಕು . ಈ ಕೊರತೆ ಮನಗಂಡ ಪೈ ಅವರ ಕೊಡುಗೆ ಭಾರತೀಯ ಮಕ್ಕಳ ಸಾಹಿತ್ಯಕ್ಕೆ ವಿನೂತನ .

Feb 21, 20217 minEp. 118

Ep113 - [ ವ್ಯಕ್ತಿ ಪರಿಚಯ ] - ಲುಡ್ವಿಗ್ ವ್ಯಾನ್ ಬೀಥೋವನ್

ಲುಡ್ವಿಗ್ ವ್ಯಾನ್ ಬೀಥೋವನ್ ( Ludwig Van Beethoven) , Western Classical ಸಂಗೀತದಲ್ಲಿ ಅತಿ ದೊಡ್ಡ ಹೆಸರು . ಕರ್ನಾಟಕ ಸಂಗೀತದಲ್ಲಿ ಪುರಂದರ ದಾಸರು ಹೇಗೋ , ವಿಶ್ವ ಸಂಗೀತ ಕ್ಷೇತ್ರದಲ್ಲಿ ಬಿಥೋವನ್ ಕೂಡ . ಕ್ಲಾಸಿಕಲ್ ಸಂಗೀತ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯ ಮಹದಾಸೆ ಬಿಥೋವನ್ ಅವರ ಸಿಂಫೊನಿ ಗಳಲ್ಲಿ ನುಡಿಸಬೇಕು ಅನ್ನುವುದು . ಅತ್ಯುತ್ತಮ Composer ಆಗಿದ್ದ ಬೀಥೋವನ್ ಕಿವುಡ ಹಾಗೂ ಮೂಕನಾಗಿದ್ದ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ? ಈ ವಾರದ "ವ್ಯಕ್ತಿ ಪರಿಚಯ " ಸರಣಿಯಲ್ಲಿ ಬೀಥೋವನ್ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ . ಬೀಥೋವನ್ ಅವರ ಇನ್ನೂ ಕೆಲವು ಚಿತ್ರಗಳು , ಹಾಗೂ ಅವರ ಸಂಗೀತದ ತುಣುಕುಗಳನ್ನು ...

Feb 14, 202111 minEp. 117

Ep112 - [ ವ್ಯಕ್ತಿ ಪರಿಚಯ ] ಮೇರಿ ಕೋಮ್

"ವ್ಯಕ್ತಿ ಪರಿಚಯ " ಸರಣಿಯ ಮೊದಲನೇ ಕಂತು . ಪ್ರಸಿದ್ಧ ವ್ಯಕ್ತಿಗಳ ಜೀವನದ ತುಣುಕುಗಳನ್ನು ಮಕ್ಕಳಿಗೆ ಅವರದೇ ರೀತಿಯಲ್ಲಿ ತಿಳಿ ಹೇಳುವ ಪ್ರಯತ್ನ ಇದು . ಈ ಸಲದ ವ್ಯಕ್ತಿ ಪ್ರಪಂಚದೆಲ್ಲೆಡೆ "Confident Mary " ಅಂತಲೇ ಕರೆಸಿಕೊಂಡ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ . ಮೇರಿ ಬಾಕ್ಸಿಂಗ್ ನಲ್ಲಿ ಎಷ್ಟು ಪ್ರಸಿದ್ದರೋ ಅವರ ಹಿನ್ನಲೆ ಕೂಡ ಅಷ್ಟೇ ರೋಚಕವಾದದ್ದು . http://kelirondukatheya.org/stories/ep112 ರಲ್ಲಿ ಮೇರಿ ಅವರ ಕೆಲವು ಚಿತ್ರಗಳನ್ನೂ , ಅವರ ಬಗ್ಗೆ ಇನ್ನೂ ಕೆಲವು ವಿಷಯಗಳನ್ನು ತಿಳಿದುಕೊಳ್ಳಬಹುದು ....

Feb 07, 20216 minEp. 116

Ep111 - ಸೂರ್ಯ, ಚಂದ್ರ, ಮತ್ತು ಸಮುದ್ರಗಳ ಕತೆ

ಸೂರ್ಯ ಚಂದ್ರರು ಒಂದು ಕಾಲದಲ್ಲಿ ನಮ್ಮ ನಿಮ್ಮ ಥರ ಭೂಮಿಯ ಮೇಲೆ ಇದ್ರಂತೆ . ! . ಆಶ್ಚರ್ಯ ಆಗುತ್ತಲ್ಲಾ ? ಹೌದು , ಸೂರ್ಯ ಚಂದ್ರರು ಮನುಷ್ಯರ ಥರ ಮನೆಯಲ್ಲಿ ಇರ್ತಿದ್ರು ಅಂತ ಆಫ್ರಿಕನ್ನರು ನಂಬುತ್ತಾರಂತೆ . ಹಾಗಾದ್ರೆ , ಈಗ್ಯಾಕೆ ಆಕಾಶದಲ್ಲಿ ಇರ್ತಾರೆ ? ತಿಳಿಯೋಕೆ , ಈ ಕತೆ ಕೇಳಿ .

Jan 24, 20215 minEp. 115

Ep110 - ಸಿಡುಕ ಸಿದ್ದ ಹಾಗೂ ಗುಹೆಯ ಮನುಷ್ಯ

ಸಿಡುಕ ಸಿದ್ದನಿಗೆ ಸಿಟ್ಟು ಎಷ್ಟು ಜಾಸ್ತಿಯೋ ಪೆದ್ದುತನ ಸ್ವಲ್ಪ ಅದಕ್ಕಿಂತ ಜಾಸ್ತಿ. ಈ ಕತೆಯಲ್ಲಿ ಸಿದ್ಧನಿಗೆ ಗುಹೆಯ ಮನುಷ್ಯನಿಂದ ಊಹಿಸಲಾರದಷ್ಟು ಐಶ್ವರ್ಯ ಸಿಕ್ಕರೂ, ಪಾಪ ಅದನ್ನು ಉಳಿಸಿಕೊಳ್ಳೋಲಾಗಲಿಲ್ಲ. ಹೇಗೆ, ಯಾಕೆ ಅನ್ನುವುದನ್ನು ಕತೆಯಲ್ಲಿ ಕೇಳೋಣ. ನಮಗೆ ಎಷ್ಟು ಅನುಭವ ಇದೆಯೋ ಅಷ್ಟೇ ದಕ್ಕುವುದು ಅನ್ನುವುದಕ್ಕೆ ಈ ಕತೆ ಉತ್ತಮ ಉದಾಹರಣೆ.

Jan 10, 202114 minEp. 114

Repeat - ಪಾತ್ರೆ ಮರಿ ಇಟ್ಟ ಕತೆ

ಕೇಳಿರೊಂದು ಕಥೆಯ ಸರಣಿಯ ಕತೆಗಳಲ್ಲಿ ನಾಸ್ರುದ್ದೀನ್ ಹೊಡ್ಜಾನ ಕತೆಗಳು ಅತಿ ಜನಪ್ರಿಯ. 2019 ರಲ್ಲಿ ಪ್ರಕಟವಾಗಿದ್ದ ಈ ಕತೆಯ ಮರು ಪ್ರಸಾರ . ನಾಸ್ರುದ್ದೀನ್ ಹೊಡ್ಜ ಪಕ್ಕದ ಮನೆಯವನ ಹತ್ತಿರ ಪಾತ್ರೆ ಸಾಲ ಪಡೆದು ವಾಪಸ್ ಕೊಡುವಾಗ ಪಾತ್ರೆ ಅಷ್ಟೇ ಅಲ್ದೆ ಅದರ 'ಮರಿ ' ಯನ್ನೂ ಹೇಗೆ ಕೊಡಲು ಸಾಧ್ಯ ? ಪಾತ್ರೆ ಎಲ್ಲಾದ್ರೂ ಮರಿ ಇಡುತ್ಯೆ ? ಆದರೆ ' ಕೊಟ್ಟೋನು ಕೋಡಂಗಿ! ಇಸ್ಕೊಂಡೋನು ಈರಭದ್ರ " ಅನ್ನೋ ಗಾದೆಯ ಹಾಗೆ , ಆ ಪಕ್ಕದ ಮನೆಯವನಿಗಾದ್ರೂ ಗೊತ್ತಾಗಬೇಡವೇ ? ಹೊಡ್ಜ ಯಾಕೆ ಹೀಗೆ ಮಾಡಿದ , ಮುಂದೇನಾಯ್ತು ಅನ್ನೋದನ್ನು ಈ ಕತೆಯಲ್ಲಿ ಕೇಳಿ .

Dec 27, 20207 minEp. 113

Ep109 - ಹಸು ಮತ್ತು ನೊಣ

ಹಸುಗಳಿಗೂ ಅವುಗಳ ಸುತ್ತ ಸದಾ ಜುಯ್ ಅಂತ ಸುತ್ತುವ ನೊಣಗಳಿಗೂ ಅದೇನೋ ವಿಚಿತ್ರ ಸಂಬಂಧ . ವೈಜ್ಞಾನಿಕವಾಗಿ ನೊಣಗಳಿಂದ ಕಣ್ಣಿನ ರೋಗ ( Pink Eye ) ಬರುವುದು ಸಹಜವಾದರೂ , ಆಫ್ರಿಕಾದ ಜಾನಪದ ಕತೆಗಳ ಪ್ರಕಾರ ನೊಣಗಳು ತೊಂದರೆ ಕೊಡುವುದಕ್ಕೆ ಹಸುಗಳೇ ಕಾರಣವಂತೆ . !

Dec 14, 20207 minEp. 112

Ep108 - ಬಾವಲಿಗಳು ರಾತ್ರಿಯಷ್ಟೇ ಹೊರಗೇಕೆ ಬರುತ್ತವೆ?

ಬಾವಲಿ ( Bat ) ವಿಚಿತ್ರ ಹಾಗೂ ಕುತೂಹಲಕಾರಿ ಜೀವಿ . ಅತ್ತ ಪ್ರಾಣಿಯೂ ಅಲ್ಲದೆ , ಇತ್ತ ಹಕ್ಕಿಯೂ ಅಲ್ಲದ ಬಾವಲಿ ರಾತ್ರಿ ಅಷ್ಟೇ ಹೊರ ಬರುತ್ತವೆ . ವೈಜ್ಞಾನಿಕವಾಗಿ ಬಾವಲಿಗಳಿಗೆ ದೃಷ್ಟಿ ಅಷ್ಟು ಬಲವಾಗಿ ವೃದ್ಧಿಯಾಗಿಲ್ಲ , ಬದಲಾಗಿ Echo location , ಅಂದರೆ ಸೂಕ್ಷ್ಮ ಧ್ವನಿ ತರಂಗಗಳ ನೆರವಿನಿಂದ ದಾರಿ , ಊಟ ಹುಡುಕುತ್ತವೆ . ನೂರಾರು ವರ್ಷಗಳ ಹಿಂದೆ ಆಫ್ರಿಕಾದ ಜನರಿಗೆ ಈ ಬಾವಲಿ ರಾತ್ರಿಯಷ್ಟೇ ಹೊರಗೇಕೆ ಬರುತ್ತದೆ ಅನ್ನುವ ಪ್ರಶ್ನೆಗೆ ಸೊಗಸಾದ ಕತೆಯ ಮೂಲಕ ವಿವರಿಸಿದ್ದಾರೆ . ಕೇಳೋಣ ಬನ್ನಿ .

Nov 28, 20206 minEp. 111

[ ವಿಶೇಷ ] - ದೀಪಾವಳಿ ಹಬ್ಬ

ದೀಪಾವಳಿ ಹಬ್ಬದ ಶುಭಾಶಯಗಳು ಎಲ್ಲರಿಗೂ ಗೆಳೆಯರೇ . ದೀಪಾವಳಿ ಭಾರತೀಯರಿಗೆ ವಿಶೇಷ ಹಬ್ಬ . ಈ ಹಬ್ಬದ ಹಿಂದೆ ಬಹಳಷ್ಟು ಉಪಕತೆಗಳಿವೆ . ಈ ಕಂತಿನಲ್ಲಿ ಈ ಹಬ್ಬದ ಬಗ್ಗೆ ಮೂರು ಕತೆಗಳನ್ನು ಕೇಳೋಣ .

Nov 14, 20207 minEp. 110

Ep107 - ಗುಡುಗು ಮತ್ತು ಸಿಡಿಲು

ಗುಡುಗು , ಸಿಡಿಲು ಮಳೆಗಾಲದಲ್ಲಿ ಸರ್ವೇ ಸಾಮಾನ್ಯ . ಗುಡುಗು ಕೇಳುವ ಮೊದಲೇ ಸಿಡಿಲು ಕಾಣುವುದೂ ಸಾಮಾನ್ಯ . ಆದರೆ , ಸಾವಿರಾರು ವರ್ಷಗಳ ಹಿಂದೆಯೇ ಇದನ್ನು ಮನಗಂಡು ಗುಡುಗು , ಸಿಡಿಲಿನ ಸುತ್ತ ಹೆಣೆದಿರುವ ಈ ಕತೆ , ಸಿಡಿಲನ್ನು ಚೂಟಿ ಟಗರಿಗೂ , ಗೂಡುಗನ್ನು ಮಗನನ್ನು ಸರಿ ಹಾದಿಗೆ ತರುವ ಅಮ್ಮನಿಗೂ ಹೋಲಿಸುವ ಮೂಲಕ ಕೇಳುವುದಕ್ಕೆ ವಿಶಿಷ್ಟ ಅನುಭವ ಕೊಡುತ್ತದೆ . Thunder and Lightning are common phenomena. This folktale compare lightning to a mischievous Ram and the thunder as the mom that follows her son around scolding him for his mischiefs. A unique story....

Nov 01, 20207 minEp. 109

Ep106 - ಸುಳ್ಳು ಹೇಳದಿರುವ ಮನುಷ್ಯ

ಸುಳ್ಳು ಹೇಳುವುದು ಅಂದರೆ ಸಹಜ . ಅದರಲ್ಲೂ , ಕೆಲವರಿಗೆ ಸುಳ್ಳು ಹೇಳುವುದು ಚಟ ವಾಗಿ ಬಿಟ್ಟಿರುತ್ತದೆ . ಹಾಗಿರುವಾಗ , ಒಂದೂ ಸುಳ್ಳು ಹೇಳದೆ ಇರುವ ಮನುಷ್ಯ ಒಬ್ಬ ಬದುಕಿದ್ದ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ? ಈ ಕತೆಯಲ್ಲಿ ಆ ಮನುಷ್ಯನನ್ನ ಭೇಟಿ ಮಾಡೋಣ . ಅವನಿಂದ ಸುಳ್ಳು ಹೇಳಿಸೋಕೆ ಪಾಡು ಪಟ್ಟ ರಾಜನ ಬಗ್ಗೆಯೂ ಕೇಳೋಣ

Oct 18, 20206 minEp. 108

Ep105 - ಸಿಂಹವನ್ನು ಸೋಲಿಸಿದ ತೋಳ ( ಉತ್ತರ ಕರ್ನಾಟಕ ಶೈಲಿ)

ಕಳೆದ ವಾರ ಇದೇ ಕತೆಯ ಸರಳ ಗನ್ನಡ ಅವತರಣಿಕೆ ( version ) ಅನ್ನು ಮಾಡಿದ್ದೆವು . ಈ ವಾರ , ಜೈರಾಜ್ ಗಲಗಲಿ ಅವರು ಈ ಕತೆಯನ್ನು ಉತ್ತರ ಕರ್ನಾಟಕ ಶೈಲಿ ಒಳಗ ಹೇಳಿದ್ದಾರೆ . ನೀವೂ , ನಾವೂ ಕೇಳಿ ಮಜಾ ತಗಳ್ಳೋಣಾಂತ ? ಏನಂತೀರಿ ?

Oct 11, 20207 minEp. 107
For the best experience, listen in Metacast app for iOS or Android