ಭೌತಶಾಸ್ತ್ರ ತುಂಬಾ ಕುತೂಹಲಕಾರಿಯಾದ ವಿಷಯ. ಇದನ್ನು ಸರಿಯಾಗಿ ಅಧ್ಯಯನ ಮಾಡಿದರೆ ನಾವು ಜಗತ್ತಲ್ಲಿ ಆಗಿ ಹೋಗುವ ಎಲ್ಲಾ ವಿಷಯಗಳನ್ನು ಮತ್ತು ಅದರ ಹಿಂದಿನ ಕಾರಣಗಳನ್ಜ್ ತಿಳಿದುಕೊಳ್ಳಬಹುದು. ಸಣ್ಣದಾದ ಪರಮಾಣುವಿನಿಂದ ಹಿಡಿದು ಬೃಹದಾಕಾರವಾದ ಆಕಾಶಕಯಗಳ ವರೆಗೆ ಎಲ್ಲವು ಭೌತಶಾಸ್ತ್ರದ ನಿಯಮಕ್ಕೆ ತಲೆ ಬಾಗಲೇ ಬೇಕು. ಈ ಪಾಡಕಾಸ್ಟ್ಮೂಲಕ ನೀವು ಭೌತಶಾಸ್ತ್ರದ ಕೆಲವು ಕುತೂಹಳಕಾರಿಯಾದ ಅಂಶಗಳನ್ನು ಸರಳವಾಗಿ ತಿಳಿದುಕೊಳ್ಳಬಹುದು.
Last refreshed: ⓘ
Follow this podcast in the Metacast mobile app to refresh it and see new episodes.
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more
ರಸ್ತೆಯಲ್ಲಿ ಹೂಗ್ಬೇಕಾದ್ರೆ, ಸಾಮಾನ್ಯವಾಗಿ ವೇಗದ ಮಿತಿ ಅಥವಾ ಇನ್ಯಾವುದೋ ಎಚ್ಚರಿಕೆಯನ್ನು ಕೆಂಪು ಬಣ್ಣದ ಅಕ್ಷರದಲ್ಲಿ ಬರೆದಿರುವುದನ್ನ ನೀವು ನೋಡಿರಬಹುದು. ಹಾಗಾದರೆ, ಯಾಕೆ ಕೆಂಪು ಬಣ್ಣವನ್ನ ಬಳಸಿದ್ರು? ಇದರ ಹಿಂದಿನ ಬೌತಶಾಸ್ತ್ರದ ಕಾರಣವನ್ನು ಈ ಸಂಚಿಕೆಯಲ್ಲಿ ಹೇಳಲಾಗಿದೆ.
ನಮ್ಮ ಸೌರವ್ಯೂಹದಲ್ಲಿ ಇರುವ ಎಲ್ಲಾ ಗ್ರಹಗಳು ಸೂರ್ಯನ ಸುತ್ತ ತಿರುಗುವುದಕ್ಕೆ ಅಥವಾ ನಾವುಗಳು ಈ ಭೂಮಿಯ ಮೇಲೆ ಬದುಕುವುದರಲ್ಲಿ ಗುರುತ್ವಾಕರ್ಷಣೆಯ ಪಾತ್ರ ಬಹಳ ಮುಖ್ಯ. ಇದರ ಬಗ್ಗೆ ಈ ಸಲದ ಸಂಚಿಕೆಯಲ್ಲಿ ಸರಳ ಪರಿಚಯ.
ಲೇಸರ್ ನಮ್ಮ ನಿತ್ಯ ಜೀವನದಲ್ಲಿ ಒಂದಲ್ಲಾ ಒಂದು ರೀತಿ ನಮಗೆ ಅತಿ ಉಪಯುಕ್ತವಾದ ವಸ್ತು. ಇದು ನಮ್ಮ ಜೀವನದಲ್ಲಿ ಭೌತಶಾಸ್ತ್ರ ಎಷ್ಟರಮಟ್ಟಿಗೆ ಅದರ ಪ್ರಭಾವ ಬೀರಿದೆ ಎಂಬುದರ ಸಂಕೇತ. ಇದರ ಕಾರ್ಯಚರಣೆ ಹೇಗೆ ಎಂದು ಈ ಸಂಚಿಕೆಯಲ್ಲಿ ನೀವು ತಿಳಿದುಕೊಳ್ಳಬಹುದು.